ಬೆಂಗಳೂರು: ಗಲಾಟೆ ಮಾಡಬೇಡಿ ಎಂದು ಹೇಳಿದ್ದಕ್ಕೆ ಹೋಟೆಲ್ ಸಪ್ಲೇಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರು ಮಂದಿ ಆರೋಪಿಗಳನ್ನು ಬಂಧಿಸುವಲ್ಲಿ ಬಾಣಸವಾಡಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಸಪ್ಲೈಯರ್ಗೆ ಚಾಕು ಇರಿತ: ಆರು ಜನರ ಬಂಧನ - ಹೋಟೆಲ್ ಸಪ್ಲೇಯರ್ ಮೇಲೆ ಮಾರಣಾಂತಿಕ ಹಲ್ಲೆ
ನಗರದ ಹೋಟೆಲ್ವೊಂದರಲ್ಲಿ ಆರು ಜನರ ಗುಂಪುಂದು ಗಲಾಟೆ ಮಾಡಿದ್ದಲ್ಲದೇ, ಈ ರೀತಿ ಜೋರಾಗಿ ಗಲಾಟೆ ಮಾಡಬೇಡಿ ಎಂದಿದ್ದಕ್ಕೆ ಸಪ್ಲೇಯರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಹರಿ,ಕರ್ಣ,ರಂಜಿತ್,ಸಂತೋಷ್,ವಿಜಯ್ ಬಂಧಿತ ಆರೋಪಿಗಳು. ಜ.01 ರ ಹೊಸ ವರ್ಷಾಚರಣೆ ವೇಳೆ ದೊಡ್ಡ ಬಾಣಸವಾಡಿಯ ಹೋಟೆಲ್ವೊಂದರಲ್ಲಿ ನಾಲ್ಕು ಜನರು ರೂಮ್ ಮಾಡಿ ರಾತ್ರಿ ಸಮಯದಲ್ಲಿ ಸುಮಾರು 12 ಕ್ಕೂ ಹೆಚ್ಚು ಮಂದಿ ಸೇರಿ ಹೋಟೆಲ್ನಲ್ಲಿ ಜೋರಾಗಿ ಕೂಗುತ್ತ ಪಾರ್ಟಿ ಮಾಡಿದ್ದಾರೆ. ಈ ವೇಳೆ, ಅಲ್ಲಿನ ಸಪ್ಲೈಯರ್ ಇರ್ಶಾದ್ ಎಂಬಾತ ಜೋರಾಗಿ ಗಲಾಟೆ ಮಾಡಬೇಡಿ ಎಂದು ಹೇಳಿದ್ದಾನೆ. ಇದಕ್ಕೆ ಕೋಪಗೊಂಡು ಆತನ ಮೇಲೆ ಹಲ್ಲೆ ಮಾಡಿದ್ದಾರೆ.
ಹಲ್ಲೆಗೊಳಗಾದ ಇರ್ಷಾದ್ ಬಾಣಸವಾಡಿ ಠಾಣೆಯಲ್ಲಿ ದೂರು ದಾಖಲಿಸಿದ್ದು, ಸದ್ಯ ಪೊಲೀಸ್ ಹೋಟೆಲ್ ಸಿಸಿಟಿವಿ ದೃಶ್ಯ ಆಧಾರಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.