ಬೆಂಗಳೂರು:ಹೈಗ್ರೌಂಡ್ಸ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಸರ್ಕಾರಿ ಬಂಗಲೆಯಲ್ಲಿಹೆಂಡತಿಯ ಮನೆ ಮುಂದೆ ಧರಣಿ ಕುಳಿತಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಮನವೊಲಿಸುವಲ್ಲಿ ಡಿಸಿಪಿ ಭೀಮಾಶಂಕರ್ ಗುಳೇದ್ ಯಶಸ್ವಿಯಾಗಿದ್ದಾರೆ.
ಐಪಿಎಸ್ ದಂಪತಿ ಮಧ್ಯೆ ಜಗಳ... ಪತ್ನಿ ಮನೆ ಮುಂದೆ ಧರಣಿ ನಡೆಸಿದ್ದ ಅಧಿಕಾರಿ ಮನವೊಲಿಸಿದ ಡಿಸಿಪಿ - ಡಿಸಿಪಿ ಭೀಮಾಶಂಕರ್ ಗುಳೇದ್
ಐಪಿಎಸ್ ಅಧಿಕಾರಿಗಳಾದ ಅರುಣ್ ರಂಗರಾಜನ್ ಮತ್ತು ಅವರ ಪತ್ನಿ ಇಲಾ ರಾಜೇಶ್ವರಿ ಅವರ ಮಧ್ಯೆ ವಿರಸ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ತನ್ನಿಂದ ದೂರವಿದ್ದ ಪತ್ನಿ ಮನೆ ಧರಣಿ ಕುಳಿತಿದ್ದ ಐಪಿಎಸ್ ಅಧಿಕಾರಿ ಅರುಣ್ ರಂಗರಾಜನ್ ಅವರ ಮನವೊಲಿಸಿದ್ದಾರೆ ಡಿಸಿಪಿ ಭೀಮಾಶಂಕರ್ ಗುಳೇದ್.
ಅರುಣ್ ರಂಗರಾಜನ್ ಮತ್ತು ಅವರ ಪತ್ನಿ ಇಲಾ ರಾಜೇಶ್ವರಿ ಇಬ್ಬರು ಐಪಿಎಸ್ ಅಧಿಕಾರಿಗಳಾಗಿದ್ದಾರೆ. ಅರುಣ್ ರಂಗರಾಜನ್ ಅವರಿಂದ ಪತ್ನಿ ದೂರವಾದ ಕಾರಣ ಧರಣಿ ನಡೆಸುತ್ತಿದ್ರು. ಬಳಿಕ ಡಿಸಿಪಿ ಭೀಮಾಶಂಕರ್ ಗುಳೇದ್ ಇವರ ಮನವೊಲಿಸಿ ಕರೆದೊಯ್ದಿದ್ದಾರೆ.
ಕಲಬುರಗಿ ISDಯ SPಯಾಗಿರುವ ಅರುಣ್ ರಂಗರಾಜನ್ ವಿವಿಐಪಿ ಭದ್ರತಾ ಡಿಸಿಪಿ- ಇಲಾ ರಾಜೇಶ್ವರಿಯವರನ್ನು ಒತ್ತಾಯದ ಮೇರೆಗೆ ಪ್ರೀತಿಸಿ ಮದುವೆಯಾಗಿದ್ರು. ಆದರೆ ಇಬ್ಬರು ಸಂತೋಷದ ಜೀವನ ನಡೆಸುತ್ತಿರಲಿಲ್ಲ. ಹೀಗಾಗಿ ಅರುಣ್ ರಂಗರಾಜನ್ ಅವರಿಗೆ ಕೆಲಸ ಮಾಡಲಾರದಷ್ಟು ಒತ್ತಡದ ವಾತಾವರಣ ನಿರ್ಮಾಣವಾಗಿತ್ತು ಎಂದು ಹೇಳಲಾಗ್ತಿದೆ. ಕುಟುಂಬದಲ್ಲಿ ನೆಮ್ಮದಿಯೂ ಇಲ್ಲ, ಇತ್ತ ಮಕ್ಕಳನ್ನೂ ನೋಡಲು ಸಹ ಪತ್ನಿ ಅವಕಾಶ ನೀಡುತ್ತಿಲ್ಲವೆಂದು ಅರುಣ್ ರಂಗರಾಜನ್ ಆರೋಪಿಸಿ ಧರಣಿ ಕುಳಿತಿದ್ರು.