ಕರ್ನಾಟಕ

karnataka

ETV Bharat / state

ಕ್ವಾರಂಟೈನ್ ಅವಧಿ 28 ದಿನದಿಂದ‌ 14 ದಿನಕ್ಕೆ ಇಳಿಕೆ:  ಡಾ. ಸುಧಾಕರ್

ಕೊರೊನಾ ರೋಗ ಶಂಕಿತರನ್ನು ಈ ಹಿಂದೆ 28 ದಿನಗಳ ಕ್ವಾರಂಟೈನ್​ನಲ್ಲಿ ಇರಿಸಲಾಗುತ್ತಿತ್ತು. ಆದರೆ, ಇನ್ಮುಂದೆ ಈ ಅವಧಿಯನ್ನು 14ದಿನಗಳಿಗೆ ಷರತ್ತುಬದ್ಧ ನಿಯಮಗಳೊಂದಿಗೆ ಇಳಿಕೆ ಮಾಡಲಾಗಿದೆ.

Dr. Sudhakar
ಡಾ.ಸುಧಾಕರ್

By

Published : May 8, 2020, 2:11 PM IST

ಬೆಂಗಳೂರು:ಕೊರೊನಾ ಸೋಂಕಿತ ಹಾಗೂ ಶಂಕಿತರ ಕ್ವಾರಂಟೈನ್ ಅವಧಿ ಇನ್ನು ಮುಂದೆ 28 ದಿನಗಳ ಬದಲು 14 ದಿನಗಳಿಗೆ ಷರತ್ತುಬದ್ದ ಪರಿಷ್ಕರಣೆ ಮಾಡಲು ನಿರ್ಧರಿಸಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ತಿಳಿಸಿದ್ದಾರೆ.

ಇದೀಗ ಕ್ವಾರಂಟೈನ್ ಅವಧಿ 14 ಹದಿನಾಲ್ಕು ದಿನಗಳಾಗಿದ್ದು, ಟಾಸ್ಕ್ ಫೋರ್ಸ್ ಸಭೆಯಲ್ಲಿ ನಿರ್ದೇಶನವನ್ನು ನೀಡಿದ್ದೇವೆ. ಆದರೆ, ಕ್ವಾರಂಟೈನ್​​​​ನ 12 ನೇ ದಿನದ ಪರೀಕ್ಷೆಯಲ್ಲಿ ನೆಗೆಟಿವ್ ಬರಬೇಕು. ಇಲ್ಲದಿದ್ದಲ್ಲಿ ಕ್ವಾರಂಟೈನ್ ಅವಧಿ ಮುಂದುವರಿಯುತ್ತದೆ. ಎಲ್ಲ ಮಾರ್ಗಸೂಚಿಗಳನ್ನು ಸದ್ಯದಲ್ಲೇ ಪ್ರಕಟಣೆ ಮಾಡಲಾಗುವುದು ಎಂದು ಸುಧಾಕರ್​ ಟ್ವೀಟ್ ಮಾಡಿದ್ದಾರೆ.

ಕೊರೊನಾ ಸೋಂಕಿತ ಕ್ಯಾಮೆರಾಮನ್ ಸಂಪರ್ಕದ ಹಿನ್ನೆಲೆಯಲ್ಲಿ ಐವರು ಸಚಿವರು ಸ್ವಯಂ ಹೋಂ ಕ್ವಾರಂಟೈನ್ ಗೆ ಒಳಗಾಗಿದ್ದು, ಕ್ವಾರಂಟೈನ್ ಮುಗಿದ ನಂತರ ಈ ಬದಲಾವಣೆಗೆ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.

ABOUT THE AUTHOR

...view details