ಕರ್ನಾಟಕ

karnataka

ETV Bharat / state

ಪಾದರಾಯನಪುರ ಗಲಭೆ ಆರೋಪಿಗಳ ಸಂಪರ್ಕದಲ್ಲಿದ್ದ ಪೊಲೀಸರಿಗೂ ಕ್ವಾರಂಟೈನ್​!​​ - ಪಾದರಾಯನಪುರದಲ್ಲಿಗಲಭೆ ಪ್ರಕರಣ

ಪಾದರಾಯಪುರದಲ್ಲಿ ನಡೆದ ಗಲಭೆಗೆ ಬಂಧಿಸಿರುವ ಆರೋಪಿಗಳ ಜೊತೆ ಸಂಪರ್ಕದಲ್ಲಿದ್ದ ಪೊಲೀಸರನ್ನು 14 ದಿನಗಳ ಕಾಲ ಕ್ವಾರಂಟೈನ್​ಗೆ‌‌ ಒಳಪಡಿಸಿಸಲಾಗಿದೆ.

Quarantine for police who were in contact with the Padarayanapura accused
ಆರೋಪಿಗಳ ಸಂಪರ್ಕದಲ್ಲಿದ್ದ ಪೊಲೀಸರಿಗೂ ಕ್ವಾರಂಟೈನ್​​

By

Published : Apr 25, 2020, 3:49 PM IST

ಬೆಂಗಳೂರು:ಪಾದರಾಯನಪುರದಲ್ಲಿ ನಡೆದ ಗಲಭೆ ಪ್ರಕರಣದಲ್ಲಿ ಐವರಿಗೆ ಕೊರೊನಾ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ 23 ಪೊಲೀಸ್ ಸಿಬ್ಬಂದಿಯನ್ನು 14 ದಿನಗಳ ಕಾಲ ಕ್ವಾರಂಟೈನ್​ಗೆ‌‌ ಒಳಪಡಿಸಿಸಲಾಗಿದೆ.

ಆದೇಶದ ಪ್ರತಿ

ಆನಂದರಾವ್ ಸರ್ಕಲ್ ರಾಜ್ ಮಹಲ್ ಹೋಟೆಲ್​ನಲ್ಲಿ 23 ಮಂದಿ ಪೊಲೀಸರನ್ನು ಕ್ವಾರಂಟೈನ್​​ಗೆ ಒಳಪಡಿಸಲಾಗಿದೆ. ಕಳೆದ ಏ. 19ರಂದು ಪಾದರಾಯನಪುರದಲ್ಲಿ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಹಾಗೂ‌ ಆಶಾ ಕಾರ್ಯಕರ್ತೆಯರು ಅಲ್ಲಿನ ಜನರನ್ನು ಕ್ವಾರಂಟೈನ್​ಗೆ ಕರೆದೊಯ್ಯುವಾಗ ಏಕಾಏಕಿ 300ಕ್ಕಿಂತ ಹೆಚ್ಚು ಜನರು ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ್ದು, ಈ ಸಂಬಂಧ 130ಕ್ಕೂ ಹೆಚ್ಚು ಮಂದಿ ಆರೋಪಿಗಳನ್ನು ಬಂಧಿಸಿ ಸರ್ಕಾರದ ಸೂಚನೆಯಂತೆ ರಾಮನಗರ ಕಾರಾಗೃಹಕ್ಕೆ ಸ್ಥಳಾಂತರಿಸಲಾಗಿತ್ತು.

ಬಂಧಿತರಲ್ಲಿ ಐವರಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಸೋಂಕಿತರ ಪ್ರಾಥಮಿಕ‌ ಸಂಪರ್ಕದಲ್ಲಿದ್ದ 23 ಮಂದಿ‌ ಪೊಲೀಸರಿಗೆ ಮುಂಜಾಗ್ರತಾ ಕ್ರಮವಾಗಿ ಕ್ವಾರಂಟೈನ್ ಮಾಡಲಾಗುತ್ತಿದೆ. ಪಾದರಾಯಪುರ ಗಲಭೆ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಹೋಗಿದ್ದ ಹಿರಿಯ ಅಧಿಕಾರಿಗಳು ಸೇರಿದಂತೆ 119 ಪೊಲೀಸರನ್ನು ತಪಾಸಣೆಗೆ ಒಳಪಡಿಸುವ ಸಾಧ್ಯತೆಯಿದೆ.

ABOUT THE AUTHOR

...view details