ಕರ್ನಾಟಕ

karnataka

ETV Bharat / state

ಹೈರಿಸ್ಕ್ ದೇಶಗಳಿಂದ ಭಾರತಕ್ಕೆ ಮರಳುವವರಿಗೆ ಕ್ವಾರಂಟೈನ್ ಕಡ್ಡಾಯ.. ಹೋಟೆಲ್​ ಪಟ್ಟಿ ಸಿದ್ಧಪಡಿಸ್ತಿರುವ ಬಿಬಿಎಂಪಿ

ಹೈರಿಸ್ಕ್ ದೇಶಗಳಿಂದ ಭಾರತಕ್ಕೆ ಮರಳುವವರಿಗೆ ಕಡ್ಡಾಯ ಕ್ವಾರಂಟೈನ್​ ಮಾಡಲು ಬಿಬಿಎಂಪಿ ಹೋಟೆಲ್​ಗಳ ಪಟ್ಟಿ ಸಿದ್ಧಪಡಿಸ್ತಿದೆ.

Quarantine compulsory, Quarantine compulsory to who Return to India, Quarantine compulsory to who Return from High Risk Countries, High Risk Countries, Omicron fear, ಕ್ವಾರಂಟೈನ್ ಕಡ್ಡಾಯ, ಭಾರತಕ್ಕೆ ಮರಳುವವರಿಗೆ ಕ್ವಾರಂಟೈನ್ ಕಡ್ಡಾಯ, ಹೈರಿಸ್ಕ್ ದೇಶಗಳಿಂದ ಮರಳುವವರಿಗೆ ಕ್ವಾರಂಟೈನ್ ಕಡ್ಡಾಯ, ಹೈರಿಸ್ಕ್ ದೇಶಗಳು, ಒಮಿಕ್ರಾನ್​ ಭಯ,
ಹೈರಿಸ್ಕ್ ದೇಶಗಳಿಂದ ಭಾರತಕ್ಕೆ ಮರಳುವವರಿಗೆ ಕ್ವಾರಂಟೈನ್ ಕಡ್ಡಾಯ

By

Published : Dec 18, 2021, 10:07 AM IST

ಬೆಂಗಳೂರು: ವಿದೇಶಗಳಿಂದ ಪ್ರಯಾಣಿಸುವವರಲ್ಲಿ ಒಮಿಕ್ರಾನ್ ಹೆಚ್ಚು ದೃಢಪಡುತ್ತಿರುವ ಹಿನ್ನೆಲೆ, ಹೆಚ್ಚಿನ ನಿಗಾವಹಿಸಿ ಟೆಸ್ಟ್ ಮಾಡಲಾಗುತ್ತಿದೆ. ಸದ್ಯ ಪಾಸಿಟಿವ್ ಬಂದವರನ್ನು ಮಾತ್ರ ಆಸ್ಪತ್ರೆಗೆ ದಾಖಲಿಸಿ ನೆಗೆಟಿವ್ ಬಂದವರನ್ನು ಮನೆಗೆ ಕಳಿಸಲಾಗುತ್ತಿದೆ.

ಒಮಿಕ್ರಾನ್ ಏರಿಕೆಯಾಗುವ ಭೀತಿ ಇರುವುದರಿಂದ ನೆಗೆಟಿವ್ ಬಂದವರನ್ನೂ 7 ದಿನ ಕ್ವಾರಂಟೈನ್​ಗೆ ಒಳಪಡಿಸಿ, ಏರ್​ಪೋರ್ಟ್ ಸುತ್ತಲಿನ ಹೋಟೆಲ್​ಗಳಲ್ಲಿ ಕ್ವಾರಂಟೈನ್ ಮಾಡಲು ಬಿಬಿಎಂಪಿ ಪಟ್ಟಿ ಸಿದ್ಧಪಡಿಸುತ್ತಿದೆ. ಬೆಂಗಳೂರು ಗ್ರಾಮಾಂತರ ಆರೋಗ್ಯ ಅಧಿಕಾರಿಗೆ ಇದರ ಜವಾಬ್ದಾರಿ ವಹಿಸಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆರೋಗ್ಯಾಧಿಕಾರಿ ಡಾ.ಬಾಲಸುಂದರ್ ತಿಳಿಸಿದ್ದಾರೆ.

ಹೈರಿಸ್ಕ್ ದೇಶಗಳಿಂದ ಭಾರತಕ್ಕೆ ಮರಳುವವರಿಗೆ ಕ್ವಾರಂಟೈನ್ ಕಡ್ಡಾಯ

ಏರ್​ಪೋರ್ಟ್​​ನಲ್ಲಿ ನೆಗೆಟಿವ್ ಬಂದು ಮತ್ತೆರಡು ದಿನದಲ್ಲೇ ಪಾಸಿಟಿವ್ ಬಂದ ಪ್ರಯಾಣಿಕರನ್ನು ಕ್ವಾರಂಟೈನ್ ಮಾಡಲು ಬಿಬಿಎಂಪಿ ಸರ್ಕಾರಕ್ಕೆ ಶಿಫಾರಸ್ಸು ಮಾಡಿದೆ. ಇದರಿಂದ ಬೆಂಗಳೂರನ್ನು ಒಮಿಕ್ರಾನ್​ನಿಂದ ಸುರಕ್ಷಿತವಾಗಿಡಲು ಸಾಧ್ಯ ಎಂದು ಚಿಂತಿಸಿದ್ದಾರೆ.

ಜೀನೋಮ್ ಸೀಕ್ವೆನ್ಸಿಂಗ್​ಗೆ ಒತ್ತು: ಕೋವಿಡ್ ರೂಪಾಂತರಿ ತಳಿ ಒಮಿಕ್ರಾನ್ ಕಂಡುಬಂದಿರುವುದರಿಂದ ಪ್ರತಿದಿನ 150 ಸ್ಯಾಂಪಲ್​ಗಳನ್ನು ವಂಶವಾಹಿ ಪರಿಶೀಲನೆಗೆ ಕಳಿಸಲಾಗುತ್ತಿದೆ. ಸದ್ಯ ನಗರದಲ್ಲಿ 102 ಕ್ಲಸ್ಟರ್​ಗಳಿದ್ದು, ಈ ಪೈಕಿ 52 ಅಪಾರ್ಟ್​ಮೆಂಟ್​ಗಳಿವೆ. ಕ್ಲಸ್ಟರ್​ಗಳಿಂದಲೂ ಆಸ್ಪತ್ರೆಗೆ ದಾಖಲಾದವರ ಸ್ಯಾಂಪಲ್​ಗಳನ್ನು ಜೀನೊಮ್ ಸೀಕ್ವೆನ್ಸಿಂಗ್f​ಗೆ ಕಳಿಸಲಾಗುತ್ತಿದೆ ಎಂದು ಆರೋಗ್ಯಾಧಿಕಾರಿ ಮಾಹಿತಿ ನೀಡಿದರು.

ಚರಂಡಿ ನೀರಿನ ಸ್ಯಾಂಪಲ್​ಗಳನ್ನು ಸಂಗ್ರಹಿಸಿ ಪರೀಕ್ಷಿಸಲಾಗುತ್ತಿದ್ದು, ಯಾವ ಪ್ರದೇಶದಲ್ಲಿ ಹೆಚ್ಚು ಒಮಿಕ್ರಾನ್ ಹರಡುತ್ತಿದೆ ಎಂಬುದನ್ನೂ ಆರಂಭದಲ್ಲಿಯೇ ಪತ್ತೆಹಚ್ಚಲು ಸಾಧ್ಯ ಎಂದು ಬಾಲಸುಂದರ್ ತಿಳಿಸಿದರು.

ಸಮುದಾಯ ಮಟ್ಟಕ್ಕೆ ಒಮಿಕ್ರಾನ್ ರೂಪಾಂತರಿ ಹರಡಿದೆಯಾ ಎಂಬ ಬಗ್ಗೆ ಪರೀಕ್ಷಿಸಲು ಬಿಬಿಎಂಪಿ ಕೋವಿಡ್ ಹೆಚ್ಚಿರುವ ಪ್ರದೇಶಗಳ ಸ್ಯಾಂಪಲ್ ಸಂಗ್ರಹಿಸಿ, ವಂಶವಾಹಿ ಪರಿಶೀಲನೆಗೆ (ಜೀನೋಮ್ ಸೀಕ್ವೆನ್ಸಿಂಗ್ ) ಕಳಿಸಲಾಗುತ್ತಿದೆ. ಸದ್ಯ ಕೋವಿಡ್ ಪರೀಕ್ಷೆ ಏರಿಕೆ ಮಾಡಿದ್ದರೂ, ಹೆಚ್ಚು ಒಮಿಕ್ರಾನ್ ಪ್ರಕರಣ ಕಂಡುಬರುತ್ತಿಲ್ಲ ಎಂದರು.

ABOUT THE AUTHOR

...view details