ಕರ್ನಾಟಕ

karnataka

ETV Bharat / state

ನಮ್ಮ ಮೆಟ್ರೋದಲ್ಲಿ ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ ಶುರು: ಮೊದಲ ದಿನವೇ 1,669 ಮಂದಿ ಬಳಕೆ - ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಖರೀದಿ

ನಮ್ಮ ಮೆಟ್ರೋ ಪ್ರಯಾಣಿಕರು ವಾಟ್ಸ್‌ಆ್ಯಪ್ ಮೂಲಕ ಟಿಕೆಟ್ ಖರೀದಿಸಿ ಪ್ರಯಾಣಿಸುವ ಅವಕಾಶವನ್ನು ಪ್ರಾರಂಭಿಸಲಾಗಿದೆ.

qr code
ಕ್ಯೂಆರ್ ಕೋಡ್ ಟಿಕೆಟಿಂಗ್ ವ್ಯವಸ್ಥೆ

By

Published : Nov 2, 2022, 2:30 PM IST

ಬೆಂಗಳೂರು: ನಗರದಲ್ಲಿ ಕನ್ನಡ ರಾಜ್ಯೋತ್ಸವದ ಅಂಗವಾಗಿ ಮಂಗಳವಾರದಿಂದ ಮೆಟ್ರೋ ರೈಲಿನಲ್ಲಿ ಪ್ರಯಾಣಕ್ಕೆ ಕ್ಯೂಆರ್ ಕೋಡ್ ಟಿಕೆಟ್‌ ಮಾರಾಟ ಮಾಡಲು ಪ್ರಾರಂಭಿಸಲಾಗಿದ್ದು, ಮೊದಲ ದಿನವೇ 1,669 ಮಂದಿ ಪ್ರಯಾಣ ಮಾಡಿದ್ದಾರೆ ಎಂದು ನಮ್ಮ ಮೆಟ್ರೋ ಸಂಸ್ಥೆ ತಿಳಿಸಿದೆ.

ವಾಟ್ಸ್‌ಆ್ಯಪ್ ಚಾಟ್‌ಬೋಟ್ ಮತ್ತು ನಮ್ಮ ಮೆಟ್ರೋ ಮೂಲಕ ಆನ್‌ಲೈನ್‌ನಲ್ಲಿ ಹಣಪಾವತಿಸಿ ಟಿಕೆಟ್ ಪಡೆಯಲು ನೀಡಲಾಗಿದ್ದ ಅವಕಾಶವನ್ನು ಪ್ರಯಾಣಿಕರು ಸದುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದೆ.

ಇದನ್ನೂ ಓದಿ:ನಮ್ಮ ಮೆಟ್ರೋ.. ಜಾರಿಗೆ ಬರಲಿವೆ ಕ್ಯೂಆರ್​ ಕೋಡ್​ ಟಿಕೆಟಿಂಗ್, ಪ್ರಿ ಪೇಯ್ಡ್ ಆಟೋ ಸ್ಟ್ಯಾಂಡ್ಸ್

ಇನ್ನೂ 14,400 ಸಾರ್ವಜನಿಕರು ಹೊಸದಾಗಿ ಆರಂಭಿಸಲಾದ ವಾಟ್ಸ್‌ಆ್ಯಪ್ ಚಾಟ್‌ಬೋಟ್‌ನೊಂದಿಗೆ ಟಿಕೆಟ್ ಪಡೆಯುವ ಕುರಿತು ಸಂದೇಶದ ಮೂಲಕ ಪ್ರತಿಕ್ರಿಯೆ ಪಡೆದಿದ್ದಾರೆ ಎಂದು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ.

ABOUT THE AUTHOR

...view details