ಕರ್ನಾಟಕ

karnataka

ETV Bharat / state

ಜುಲೈ 28ಕ್ಕೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ: ಸಚಿವ ಪ್ರಭು ಚೌಹಾಣ್

ಜುಲೈ 28ಕ್ಕೆ ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಒಂದು ವರ್ಷ ಪೂರ್ಣಗೊಳಿಸುತ್ತಿರು ಹಿನ್ನೆಲೆ ಪುಣ್ಯಕೋಟಿ ದತ್ತು ಯೋಜನೆಗೆ ಚಾಲನೆ ನೀಡಲಿದ್ದಾರೆ ಎಂದು ಸಚಿವ ಪ್ರಭು ಚೌಹಾಣ್​​ ತಿಳಿಸಿದ್ದಾರೆ.

prabhu chauhan
ಪ್ರಭು ಚೌಹಾಣ್

By

Published : Jul 23, 2022, 4:32 PM IST

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಧಿಕಾರ ವಹಿಸಿಕೊಂಡು ಜುಲೈ 28ಕ್ಕೆ ಒಂದು ವರ್ಷ ಪೂರ್ಣಗೊಳ್ಳಲಿದ್ದು, ಅಂದು ದೊಡ್ಡಬಳ್ಳಾಪುರದಲ್ಲಿ ನಡೆಯಲಿರುವ ಸಾಧನಾ ಸಮಾವೇಶದಲ್ಲಿ ಪಣ್ಯಕೋಟಿ ದತ್ತು ಯೋಜನೆಗೆ ಮುಖ್ಯಮಂತ್ರಿಗಳು ಚಾಲನೆ ನೀಡಲಿದ್ದಾರೆ ಎಂದು ಪಶು ಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದರು.

ವಿಕಾಸಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗೋಶಾಲೆಗಳಲ್ಲಿ ಇರುವ ಗೋವಿನ ರಕ್ಷಣೆ ಮಾಡಲು ಪುಣ್ಯಕೋಟಿ ದತ್ತು ಯೋಜನೆ ಜಾರಿಯಾಗುತ್ತಿದೆ. ರಾಜ್ಯದ ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳಲ್ಲಿರುವ ಜಾನುವಾರುಗಳನ್ನು ದತ್ತು ಪಡೆಯಬಹುದು. ಇದಕ್ಕೆ ವಾರ್ಷಿಕ 11 ಸಾವಿರ ರೂಪಾಯಿಗಳನ್ನು ನೀಡಬೇಕಾಗುತ್ತದೆ.

ಗೋವುಗಳನ್ನು ಎಲ್ಲರ ಸಹಕಾರದಿಂದ ರಕ್ಷಣೆ ಮಾಡುವುದು ನಮ್ಮ ಉದ್ದೇಶ. ಜೊತೆಗೆ ಗೋಶಾಲೆಗಳ ನಿರ್ವಹಣೆಗೆ ದೇಣಿಗೆ ನೀಡುವ ಯೋಜನೆ ಸಹ ಜಾರಿಯಾಗುತ್ತಿದೆ. ೧೦ ರೂಪಾಯಿ ಯಿಂದ ಆರಂಭಗೊಳ್ಳುವ ದೇಣಿಗೆಗೆ ಜನರು ಪ್ರೀತಿಯಿಂದ ಎಷ್ಟು ಹಣವನ್ನಾದರೂ ನೀಡಬಹುದು. ವಿಶೇಷ ಸಂದರ್ಭಗಳಲ್ಲೂ ದತ್ತು ಪಡೆಯಬಹುದು.

ರಾಜ್ಯದಲ್ಲಿ 200 ಕ್ಕೂ ಹೆಚ್ಚು ಖಾಸಗಿ ಗೋಶಾಲೆ ಇದ್ದು, 4 ಕೋಟಿ ರೂ. ಸಹಾಯಧನ ನೀಡಿದ್ದೇವೆ. ಇನ್ನೂ ಪ್ರತೀ ಜನವರಿಗೆ ಒಂದು ಸಾವಿರ ಗೋವುಗಳನ್ನು ದತ್ತು ಪಡೆಯಬಹುದು ಹಾಗೂ ಒಂದಕ್ಕಿಂತ ಹೆಚ್ಚು ಜಾನುವಾರುಗಳಿಗೆ ದೇಣಿಗೆ ನೀಡಬಹುದು. ಇನ್ನೂ ದೇಣಿಗೆ ಮೂಲಕ ಆಹಾರಕ್ಕೆ ಹಣ ನೀಡಬಹುದು ಒಂದು ಗೋವಿಗೆ 70ರೂ ನಂತೆ ನೀಡಬಹುದಾಗಿದೆ ಎಂದರು.

ಇದನ್ನೂ ಓದಿ:ಸಾಲು ಸಾಲು ಅಕ್ರಮ: ಬೊಮ್ಮಾಯಿ ಸರ್ಕಾರಕ್ಕೆ ಎದುರಾದ ಅಗ್ನಿಪರೀಕ್ಷೆ!

ABOUT THE AUTHOR

...view details