ಬೆಂಗಳೂರು:ದೀಪಾವಳಿ ಅಂಗವಾಗಿ ಪೌರ ಕಾರ್ಮಿಕರಿಗೆ ಪುಣ್ಯಭೂಮಿ ಫೌಂಡೇಶನ್ ವತಿಯಿಂದ ವಸ್ತ್ರ ವಿತರಣೆ ಮಾಡಿ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ ಮಾಡಲಾಯಿತು.
ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಆಚರಣೆ - ಪೌರ ಕಾರಮಿಕರಿಗೆ ಬಟ್ಟೆ,ಕಾಣಿಕೆ ವಿತರಣೆ
ದೀಪಾವಳಿ ಅಂಗವಾಗಿ ಪೌರ ಕಾರ್ಮಿಕರಿಗೆ ಪುಣ್ಯಭೂಮಿ ಫೌಂಡೇಶನ್ ವತಿಯಿಂದ ಹೊಸ ಬಟ್ಟೆ, ಕಾಣಿಕೆ ನೀಡಿ ಗೌರವಿಸಲಾಯ್ತು.
ರಾಮಮೂರ್ತಿ ನಗರದ ಕಲ್ಕೆರೆ ವಾರ್ಡ್‌ನ ಸ್ವಚ್ಛತೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುವ ನೂರಾರು ಪೌರ ಕಾರ್ಮಿಕರಿಗೆ ಪುಣ್ಯಭೂಮಿ ಫೌಂಡೇಶನ್ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ದೀಪಾವಳಿ ಅಂಗವಾಗಿ ಎಲ್ಲಾ ಕಾರ್ಮಿಕರಿಗೆ ಹಾಗೂ ನೀರು ಸರಬರಾಜು ಮಾಡುವ ಮಹಿಳೆಯರಿಗೆ ಸೀರೆ,ಪುರುಷರಿಗೆ ಪ್ಯಾಂಟ್ ಶಾರ್ಟ್ ಗಳನ್ನು ವಿತರಿಸಿ ಕಾರ್ಯಕ್ರಮದಲ್ಲಿ ಅವರಿಗೆ ಮನರಂಜನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಖುಷಿ ಪಡಿಸಿದರು.
ಪುಣ್ಯಭೂಮಿ ಸೇವಾ ಪೌಂಡೇಶನ್ ಅಧ್ಯಕ್ಷರು, ಸದಸ್ಯರು, ಬಿಬಿಎಂಪಿ ಪೌರ ಕಾರ್ಮಿಕರೊಂದಿಗೆ ದೀಪಾವಳಿ ಹಬ್ಬ ಅರ್ಥಪೂರ್ಣವಾಗಿ ಆಚರಿಸಿದ್ರು. ವಾರ್ಡ್ ಸ್ವಚ್ಛ ಮಾಡುವ ಪೌರ ಕಾರ್ಮಿಕರು ಹಬ್ಬದ ದಿನವೂ ಕಾರ್ಯ ನಿರ್ವಹಿಸುತ್ತಾರೆ ಅವರೂ ಸಹ ನಮ್ಮಂತೆ ಹಬ್ಬ ಅಚರಣೆ ಮಾಡಬೇಕೆಂದು ಪೌರ ಕಾರ್ಮಿಕರಿಗೆ ಹೊಸ ಬಟ್ಟೆ, ಕಾಣಿಕೆ ನೀಡಿ ಅವರೊಂದಿಗೆ ಊಟ ಮಾಡಿ, ಪೌರ ಕಾರ್ಮಿಕರನ್ನು ಗೌರವಿಸಲಾಯಿತು.