ಕರ್ನಾಟಕ

karnataka

ಕೊರೊನಾ ಲಸಿಕೆ ಪಡೆದ ನಟ ಪುನೀತ್​ ರಾಜ್​ಕುಮಾರ್​: ಜಗ್ಗೇಶ್​ ದಂಪತಿಗೂ ಕೋವಿಡ್​​ ಲಸಿಕೆ

By

Published : Apr 7, 2021, 2:02 PM IST

ಪವರ್​ಸ್ಟಾರ್​ ಪುನೀತ್​ ರಾಜ್​ಕುಮಾರ್ ದಂಪತಿ​, ನಟ ಶರಣ್​ ಹಾಗೂ ನವರಸ ನಾಯಕ ಜಗ್ಗೇಶ್​ ಹಾಗೂ ಪತ್ನಿ ಪರಿಮಳ ಜಗ್ಗೇಶ್​ ಇಂದು ಮಲ್ಲೇಶ್ವರಂನಲ್ಲಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ.

punith rajkumar takes corona vaccine
ಕೊರೊನಾ ಲಸಿಕೆ ಪಡೆದ ಅಪ್ಪು

ಕೊರೊನಾ ಎರಡನೇ ಅಲೆ ಎಲ್ಲಾ ಕಡೆ ಜೋರಾಗಿದೆ. ಈ ಮಧ್ಯೆ ಕೇಂದ್ರ ಸರ್ಕಾರ 45 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರು ಕೊರೊನಾ ಲಸಿಕೆ ಪಡೆಯುವಂತೆ ಸೂಚಿಸಿದೆ.

ಜಗ್ಗೇಶ್​ ದಂಪತಿಗೆ ಕೊರೊನಾ ಲಸಿಕೆ
ಈಗಾಗಲೇ ಬಾಲಿವುಡ್, ತೆಲುಗು ಹಾಗು ತಮಿಳು ಚಿತ್ರರಂಗದಲ್ಲಿ ಸಾಕಷ್ಟು ತಾರೆಯರು ಈ ಕೊರೊನಾ ಲಸಿಕೆ ಪಡೆಯುವ ಮೂಲಕ, ಪ್ರತಿಯೊಬ್ಬರು ಈ ಕೊರೊನಾ ಲಸಿಕೆ ಪಡೆಯುವಂತೆ ಎಂದು ಸಲಹೆ ನೀಡಲಾಗುತ್ತಿದೆ. ಅದೇ ರೀತಿ ಕನ್ನಡ ಚಿತ್ರರಂಗದ ಹಿರಿಯ ನಟ ಅನಂತ್ ನಾಗ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ತಾರೆಯರು ಕೊರೊನಾ ಲಸಿಕೆ ಪಡೆದಿದ್ದರು. ಇಂದು ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಮತ್ತು ಪತ್ನಿ ಅಶ್ವಿನಿ ಜೊತೆಗೆ ಮಲ್ಲೇಶ್ವರಂ, ಕೆ. ಸಿ ಜನರಲ್ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದಿದ್ದಾರೆ.
ಕೋವಿಡ್​ ಲಸಿಕೆ ಪಡೆದ ನಟ ಜಗ್ಗೇಶ್

ನವರಸ ನಾಯಕ ಜಗ್ಗೇಶ್ ಮತ್ತು ಪತ್ನಿ ಪರಿಮಳ ಕೂಡ, ಮಲ್ಲೇಶ್ವರಂ ನಾರಾಯಣ ಸೂಪರ್ ಸ್ಪೆಷಲಿಟಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ಪಡೆದಿದ್ದಾರೆ. ಇದರ ಜೊತೆಗೆ ನಟ ಶರಣ್ ಕೂಡ ಆಸ್ಪತ್ರೆಯೊಂದರಲ್ಲಿ ಕೊರೊನಾ ಲಸಿಕ ಹಾಕಿಸಿಕೊಂಡಿದ್ದಾರೆ.

ಕೊರೊನಾ ವ್ಯಾಕ್ಸಿನ್​ ಪಡೆದ ಶರಣ್

ನಟ ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್ ಕೊರೊನಾ ಕುರಿತು ಜಾಗೃತಿಗಾಗಿ ಸರ್ಕಾರದ ಜೊತೆ ಕೈ ಜೋಡಿಸಿದರು. ಈಗ ಸ್ವತಃ ಪುನೀತ್ ರಾಜ್‍ಕುಮಾರ್ ಕೊರೊನಾ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಜನರಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಪ್ರೇರೇಪಿಸಿದ್ದಾರೆ.

ಕೊರೊನಾ ಲಸಿಕೆ ಪಡೆದ ಜಗ್ಗೇಶ್​ ಪತ್ನಿ ಪರಿಮಳ

ABOUT THE AUTHOR

...view details