ಕರ್ನಾಟಕ

karnataka

ETV Bharat / state

ನಟ ಪುನೀತ್ ರಾಜ್‍ಕುಮಾರ್ ಮನೆಯಲ್ಲಿದ್ದ ಕೊನೆ ಕ್ಷಣದ ವಿಡಿಯೋ - Puneeth Rajkumar video

ಅಕ್ಟೋಬರ್‌ 29ರಂದು ಮನೆಯಲ್ಲಿ ಇರಬೇಕಾದರೆ ಎದೆನೋವು ಕಾಣಿಸಿಕೊಂಡ ಬಳಿಕ ಪತ್ನಿ ಅಶ್ವಿನಿ ಜೊತೆ ಆಸ್ಪತ್ರೆಗೆ ಹೊರಟ ವಿಡಿಯೋ ಲಭ್ಯವಾಗಿದೆ.

Puneeth Rajkumar last cctv video
ನಟ ಪುನೀತ್ ರಾಜ್‍ಕುಮಾರ್ ಮನೆಯಿಂದ ಆಸ್ಪತ್ರೆಗೆ ಹೊರಟ ವಿಡಿಯೋ

By

Published : Nov 2, 2021, 4:05 PM IST

ಬೆಂಗಳೂರು:ಹೃದಯಾಘಾತದಿಂದ ಇಹಲೋಕ ತ್ಯಜಿಸಿದ ಕನ್ನಡ ಚಿತ್ರರಂಗದ ಹೆಸರಾಂತ ನಟ ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಗಲಿಕೆಯ ನೋವು ಇನ್ನೂ ಆರಿಲ್ಲ. ದಿಢೀರ್‌ ಕಣ್ಮರೆಯಾದ ನಟನ ಸಾವಿಗೆ ಇಡೀ ಚಿತ್ರರಂಗವಷ್ಟೇ ಅಲ್ಲ, ಕರುನಾಡೇ ಕಂಬನಿ ಮಿಡಿಯುತ್ತಿದೆ.

ಈ ಮಧ್ಯೆ, ಅಪ್ಪು ಆಸ್ಪತ್ರೆಗೆ ತೆರಳುವ ಮುನ್ನ ಮನೆಯಿಂದ ಕಾರಿ​ನಲ್ಲಿ ಆಸ್ಪತ್ರೆಗೆ ಹೊರಟ ಸಿಸಿಟಿವಿ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿವೆ. ಈ ಸಿಸಿಟಿವಿ ವಿಡಿಯೋದಲ್ಲಿ ಅಪ್ಪು ಯಾವುದೇ ಆತಂಕವಿಲ್ಲದೆ ಸಹಜವಾಗಿ ನಡೆದುಕೊಂಡು ಹೋಗಿ ಕಾರು​ ಹತ್ತಿದ್ದಾರೆ.


ವಿಡಿಯೋ ವಿವರ:

ಅಕ್ಟೋಬರ್‌ 29ರಂದು ಮನೆಯಲ್ಲಿ ಇರಬೇಕಾದರೆ ಎದೆನೋವು ಕಾಣಿಸಿಕೊಂಡ ಬಳಿಕ ಪುನೀತ್​ ಮನೆಯಿಂದ ಹೊರ ಬರುತ್ತಾರೆ. ನಂತರ ಅವರ ಪತ್ನಿ ಅಶ್ವಿನಿಯವರೂ ಹೊರಬರುತ್ತಾರೆ. ನಂತರ ಅವರ ಭದ್ರತಾ ಸಿಬ್ಬಂದಿ ಓಡೋಡಿ ಬರುತ್ತಾರೆ. ಅಪ್ಪು ಕಾರಿನತ್ತ ತೆರಳುತ್ತಾರೆ. ಪತ್ನಿ ಅಶ್ವಿನಿ ಸೇರಿ ಅಲ್ಲಿದ್ದವರೆಲ್ಲಾ ಕಾರು ಹತ್ತುತ್ತಾರೆ, ಕಾರು ಹೊರಡುತ್ತದೆ, ಸೆಕ್ಯೂರಿಟಿ ಗಾರ್ಡ್‌ ಗೇಟ್​ ಓಪನ್​ ಮಾಡ್ತಾರೆ. ಹೀಗೆ ಪುನೀತ್ ಪತ್ನಿ ಜೊತೆ ರಮಣಶ್ರೀ ಆಸ್ಪತ್ರೆಗೆ ಹೋಗುತ್ತಾರೆ. ಮನೆಯಿಂದ ಹೊರಟ ಅಪ್ಪು ಮತ್ತೆ ತಮ್ಮ ಮನೆ ಸೇರಲೇ ಇಲ್ಲ, ಅವರು ಆಸ್ಪತ್ರೆಯಲ್ಲೇ ಕೊನೆಯುಸಿರೆಳೆದರು.

ಇದನ್ನೂ ಓದಿ:ಪುನೀತ್ ರಾಜ್‍ಕುಮಾರ್ ಸಮಾಧಿಗೆ ಹಾಲು-ತುಪ್ಪ ಕಾರ್ಯ; ಕುಟುಂಬಸ್ಥರು ಭಾಗಿ - ವಿಡಿಯೋ

ABOUT THE AUTHOR

...view details