ಕರ್ನಾಟಕ

karnataka

ETV Bharat / state

ಅಮೆರಿಕಕ್ಕೆ ಹೊರಟ ಪುನೀತ್ ರಾಜ್​​ಕುಮಾರ್ ಪುತ್ರಿ ಧೃತಿ - ಪುನೀತ್​ ರಾಜ್​ಕುಮಾರ್ ಮಗಳು ಧೃತಿ

ದಿವಂಗತ ನಟ ಪುನೀತ್​ ರಾಜ್​ಕುಮಾರ್ ಮಗಳು ಧೃತಿ(Puneeth Rajkumar daughter Drithi) ನ್ಯೂಯಾರ್ಕ್​ನಲ್ಲಿ ತಮ್ಮ ವಿದ್ಯಾಭ್ಯಾಸ ಮುಂದುವರಿಸಲು ಇಂದು ಅಮೆರಿಕಕ್ಕೆ ಪ್ರಯಾಣ ಬೆಳೆಸಿದ್ದಾರೆ.

puneeth Rajkumar daughter drithi travels to america
ಅಮೆರಿಕಾಗೆ ಹೊರಟ ಅಪ್ಪು ಮಗಳು

By

Published : Nov 13, 2021, 5:48 PM IST

Updated : Nov 13, 2021, 7:18 PM IST

ದೇವನಹಳ್ಳಿ/ಬೆಂಗಳೂರು:ಇತ್ತೀಚೆಗಷ್ಟೇ ನಿಧನರಾದ ನಟ,ತಂದೆ ಪುನೀತ್​ ರಾಜ್​ಕುಮಾರ್(Puneeth Rajkumar) ಅವರ​ ಕಾರ್ಯಗಳನ್ನು ಮುಗಿಸಿ ಅವರ ಅವರ ಪುತ್ರಿ ಧೃತಿ(Drithi) ಮತ್ತೆ ಇಂದು ಅಮೆರಿಕದತ್ತ ಪ್ರಯಾಣ ಬೆಳೆಸಿದ್ದಾರೆ.

ಅಮೆರಿಕಕ್ಕೆ ಹೊರಟ ಪುನೀತ್ ರಾಜ್​​ಕುಮಾರ್ ಪುತ್ರಿ

ನ್ಯೂಯಾರ್ಕ್​ನಲ್ಲಿ ವಿದ್ಯಾಭ್ಯಾಸಕ್ಕೆ ತೆರಳುತ್ತಿರುವ ಧೃತಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ(Kempegowda International Airport) ದೆಹಲಿಗೆ ಹಾಗೂ ದೆಹಲಿಯಿಂದ ನ್ಯೂಯಾರ್ಕ್​ಗೆ ತೆರಳಿದ್ದಾರೆ.

ಅಪ್ಪು ಪುತ್ರಿ ಧೃತಿ ಬೀಳ್ಕೊಡಲು ತಾಯಿ ಅಶ್ವಿನಿ ಪುನೀತ್ ರಾಜ್​​ಕುಮಾರ್, ರಾಘವೇಂದ್ರ ರಾಜ್ ಕುಮಾರ್(Raghavendra Rajkumar) ಸೇರಿ ರಾಜ್​ ಕುಟುಂಬಸ್ಥರು ಕೆಐಎಎಲ್​​ಗೆ ಆಗಮಿಸಿದ್ದರು.

ಇದನ್ನೂ ಓದಿ:ಪುನೀತ್​ ಸಮಾಧಿಗೆ ಭೇಟಿ ನೀಡಿದ ನಟ ಮತ್ತು ನಿರ್ದೇಶಕ ನಾಗೇಂದ್ರ ಪ್ರಸಾದ್

Last Updated : Nov 13, 2021, 7:18 PM IST

ABOUT THE AUTHOR

...view details