ಬೆಂಗಳೂರು: ಕನ್ನಡ ಚಿತ್ರರಂಗದ ನಗು ಮುಖದ ರಾಜ್ಕುಮಾರ ಪವರ್ಸ್ಟಾರ್ ಪುನೀತ್ಗೆ ನಿನ್ನೆ 46ರ ಜನ್ಮದಿನವನ್ನು ಆಚರಿಸಿಕೊಂಡಿದ್ದರು. ಅಪ್ಪು ಅಭಿಮಾನಿಗಳು ಪುನೀತ್ ರಾಜ್‍ಕುಮಾರ್ ಜನ್ಮದಿನವನ್ನು ಅನಾಥ ಮಕ್ಕಳೊಂದಿಗೆ ಆಚರಿಸಿದ್ದಾರೆ.
ಅನಾಥ ಮಕ್ಕಳು, ವೃದ್ಧರೊಂದಿಗೆ ಪುನೀತ್ ರಾಜ್ಕುಮಾರ ಜನ್ಮದಿನ ಆಚರಿಸಿದ ಅಪ್ಪು ಫ್ಯಾನ್ಸ್ ಈ ಬಾರಿ ಪುನೀತ್ ರಾಜ್ಕುಮಾರ ತಮ್ಮ ಅಭಿಮಾನಿಗಳ ಜೊತೆ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಿಸಿಕೊಂಡಿಲ್ಲ. ಆದರೆ, ಸೋಷಿಯಲ್ ಮೀಡಿಯಾದ ಪವರ್ಸ್ಟಾರ್ಗೆ ಹುಟ್ಟು ಹಬ್ಬದ ಶುಭಾಶಯಗಳು ಮಹಾಪೂರವೇ ಹರಿದು ಬಂದಿದೆ.
ಅನಾಥ ಮಕ್ಕಳು, ವೃದ್ಧರೊಂದಿಗೆ ಪುನೀತ್ ರಾಜ್ಕುಮಾರ ಜನ್ಮದಿನ ಆಚರಿಸಿದ ಅಪ್ಪು ಫ್ಯಾನ್ಸ್ ಪುನೀತ್ ರಾಜ್‍ಕುಮಾರ್ ಅಭಿಮಾನಿ ಸಂಘವಾದ, ಅಪ್ಪು ಯೂತ್ ಬಿಗ್ರೇಡ್ ಅಧ್ಯಕ್ಷ ಮುರಳಿ ಹಾಗೂ ಸ್ನೇಹಿತರು ಸೇರಿ ಬೆಂಗಳೂರಿನ ಹೊರ ಹೊರವಲಯದ ಮದನಾಯಕಹಳ್ಳಿಯಲ್ಲಿರುವ ಅರಿವು ಎಂಬ ಅನಾಥ ಆಶ್ರಮದ ಮಕ್ಕಳು ಹಾಗೂ ವಯಸ್ಸಾದ ವೃದ್ಧರ ಜೊತೆ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಆಚರಿಸಿದ್ದಾರೆ.
ಅನಾಥ ಮಕ್ಕಳು, ವೃದ್ಧರೊಂದಿಗೆ ಪುನೀತ್ ರಾಜ್ಕುಮಾರ ಜನ್ಮದಿನ ಆಚರಿಸಿದ ಅಪ್ಪು ಫ್ಯಾನ್ಸ್ ಅಪ್ಪು ಯೂತ್ ಬಿಗ್ರೇಡ್ನಿಂದ ಮಕ್ಕಳ ಜೊತೆ ಕೇಕ್ ಕಟ್ ಮಾಡಿಸಿದ್ದಾರೆ. ಬಳಿಕ ವೃದ್ಧರಿಗೆ ಅನ್ನದಾನ ಮಾಡುವ ಮೂಲಕ ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬವನ್ನ ಬಹಳ ಅರ್ಥ ಪೂರ್ಣವಾಗಿ ಆಚರಿಸಿದ್ದಾರೆ. ಇಲ್ಲಿರುವ ಅನಾಥ ಮಕ್ಕಳು ಹಾಗೂ ವಯಸ್ಸಾದ ವೃದ್ಧರು ಪುನೀತ್ ರಾಜ್ಕುಮಾರ್ಗೆ ತುಂಬಾ ಹೃದಯದ ಧನ್ಯವಾದಗಳನ್ನ ಹೇಳಿದ್ದಾರೆ.