ಬೆಂಗಳೂರು:ಆಂಧ್ರಪ್ರದೇಶದ ತಿರುಪತಿ ದೇವಸ್ಥಾನಕ್ಕೆ ಹೋಗುವ ಮುಖ್ಯದ್ವಾರದಲ್ಲಿ ಕನ್ನಡ ಭಾವುಟಕ್ಕೆ ಹಾಗೂ ಕನ್ನಡಿಗರ ವಾಹನಗಳಿಗೆ ಅವಮಾನ ಮಾಡಲಾಗಿದೆ. ಅಲ್ಲದೇ, ಕಾರಿನ ಮೇಲಿದ್ದ ಕರ್ನಾಟಕ ರತ್ನ ದಿ.ಪುನೀತ್ ರಾಜ್‍ಕುಮಾರ್ ಭಾವಚಿತ್ರವನ್ನು ತೆಗೆಸಿರುವುದನ್ನು ಖಂಡಿಸಿ ಬೆಂಗಳೂರಿನಲ್ಲಿ ಶುಕ್ರವಾರ ಪ್ರತಿಭಟನೆ ನಡೆಯಿತು. ಮಲ್ಲೇಶ್ವರಂನಲ್ಲಿರುವ ಟಿಟಿಡಿ ದೇವಸ್ಥಾನಕ್ಕೆ ಡಾ.ರಾಜ್‌ಕುಮಾರ್ ಅಭಿಮಾನಿಗಳ ಒಕ್ಕೂಟದ ನೇತೃತ್ವದಲ್ಲಿ ಮುತ್ತಿಗೆ ಹಾಕಲು ಯತ್ನಿಸಲಾಯಿತು.
ದೇವಸ್ಥಾನದ ಗೇಟ್ ಬಳಿಯೇ ಪ್ರತಿಭಟನಾನಿರತರನ್ನು ಪೊಲೀಸರು ಹಾಗೂ ಸಿಬ್ಬಂದಿ ತಡೆದರು. ಇದರಿಂದ ದೇವಳದ ಸಿಬ್ಬಂದಿಯೊಂದಿಗೆ ಅಭಿಮಾನಿಗಳು ವಾಗ್ವಾದ ನಡೆಸಿದರು. ಟಿಟಿಡಿ ಆಡಳಿತ ಮಂಡಳಿ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಲಾಯಿತು.