ಕರ್ನಾಟಕ

karnataka

ETV Bharat / state

ನಾಳೆ ಪುನೀತ್ ಅಂತ್ಯಕ್ರಿಯೆ.. ಬೆಳಗಿನವರೆಗೂ ಅಂತಿಮ ದರ್ಶನಕ್ಕೆ ಅವಕಾಶ- ಸಿಎಂ ಬೊಮ್ಮಾಯಿ - ಶಿವರಾಜ್ ಕುಮಾರ್

ನಟ ಪುನೀತ್ ರಾಜ್​​​ಕುಮಾರ್ ಪುತ್ರಿ ಧೃತಿ ಅಮೆರಿಕದಿಂದ ದೆಹಲಿಗೆ ಬಂದಿಳಿದಿದ್ದು, ಅಲ್ಲಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಸಂಜೆಯಾದ ಮೇಲೆ ಅಂತ್ಯಕ್ರಿಯೆ ನಡೆಸುವುದು ಕಷ್ಟ. ಹೀಗಾಗಿ ನಾಳೆ ಅಂತ್ಯಕ್ರಿಯೆಗೆ ತೀರ್ಮಾನಿಸಲಾಗಿದೆ ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.

cm-bommai
ಸಿಎಂ ಬೊಮ್ಮಾಯಿ

By

Published : Oct 30, 2021, 2:39 PM IST

ಬೆಂಗಳೂರು:ನಟ ಪುನೀತ್ ರಾಜ್​​ಕುಮಾರ್ ಅಂತ್ಯಕ್ರಿಯೆ ನಾಳೆ(ಭಾನುವಾರ) ನಡೆಯಲಿದೆ. ಇಂದು ಸಂಜೆ ವೇಳೆಗೆ ಸಮಯ ನಿಗದಿ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ನಗರದಲ್ಲಿ ಮಾಧ್ಯಮದವರಿಗೆ ಮಾಹಿತಿ ನೀಡಿದ ಅವರು, ಪುನೀತ್ ಅವರ ಮಗಳು ಧೃತಿ ಅಮೆರಿಕದಿಂದ ದೆಹಲಿ ತಲುಪಿದ್ದು, ಅಲ್ಲಿಂದ ಬೆಂಗಳೂರು ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದಾರೆ ಎಂದರು.

ನಾಳೆ ಪುನೀತ್ ರಾಜ್​​ಕುಮಾರ್ ಅಂತ್ಯಕ್ರಿಯೆ..ಬೆಳಗಿನ ಜಾವದವರೆಗೂ ದರ್ಶನಕ್ಕೆ ಅವಕಾಶ: ಸಿಎಂ ಬೊಮ್ಮಾಯಿ

ಅವರು 5:30, 6 ಗಂಟೆಗೆ ಬರುವ ಸಾಧ್ಯತೆ ಇದೆ. ಇಲ್ಲಿಯೂ ಜನಸಂದಣಿ ಹೆಚ್ಚಾಗಿದೆ. ಬಹಳಷ್ಟು ಜನ ಅಪ್ಪು ಅವರ ಅಂತಿಮ ದರ್ಶನ ಪಡೆಯುವ ಇಚ್ಛೆ ಹೊಂದಿದ್ದಾರೆ. 6 ಗಂಟೆಯ ನಂತರ ಕತ್ತಲಾದ ಮೇಲೆ ಸಣ್ಣಜಾಗದಲ್ಲಿ ಅಂತ್ಯಕ್ರಿಯೆ ಮಾಡುವುದು ಸವಾಲಿನ ಕೆಲಸ. ಕುಟುಂಬ ಸದಸ್ಯರಾದ ಶಿವರಾಜ್ ಕುಮಾರ್, ರಾಘವೇಂದ್ರ ರಾಜಕುಮಾರ್ ಜೊತೆಗೆ ಚರ್ಚೆ ಮಾಡಿ ತೀರ್ಮಾನ ಮಾಡಿದ್ದೇವೆ ಎಂದು ಸಿಎಂ ತಿಳಿಸಿದರು.

ನಾಳೆ ಬೆಳಗಿನ ಜಾವದವರೆಗೂ ದರ್ಶನ ಮಾಡಲು ಅನುಕೂಲ ಮಾಡಲಾಗುವುದು. ಎಲ್ಲರೂ ನಿಧಾನವಾಗಿ, ಶಾಂತವಾಗಿ ಸಾಲಿನಲ್ಲಿ ಬಂದು ದರ್ಶನ ಪಡೆಯಬಹುದು ಎಂದು ಮನವಿ ಮಾಡಿದರು.

ABOUT THE AUTHOR

...view details