ಬೆಂಗಳೂರು: ಉನ್ನತ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ತೋಟಗಾರಿಕಾ ಸಚಿವ ನಾರಾಯಣ ಗೌಡ ಇಂದು ತಮ್ಮ ವಿಧಾನ ಸೌಧದಲ್ಲಿ ಕಚೇರಿ ಪೂಜೆ ನೆರವೇರಿಸಿದರು.
ವಿಧಾನ ಸೌಧದಲ್ಲಿ ನೂತನ ಸಚಿವರ ಕಚೇರಿಯಲ್ಲಿ ಹೋಮ-ಹವನ - ಉನ್ನತ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್
ವಿಧಾನ ಸೌಧದ ಕೊಠಡಿ 301, ಕೊಠಡಿ ಸಂಖ್ಯೆ 339 ರಲ್ಲಿ ಉನ್ನತ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಹಾಗೂ ತೋಟಗಾರಿಕಾ ಸಚಿವ ನಾರಾಯಣ ಗೌಡ ಪೂಜೆ ನೆರವೇರಿಸಿದರು.
ನೂತನ ಸಚಿವರ ಕಚೇರಿ ಪೂಜೆ
ವಿಧಾನ ಸೌಧದ ಕೊಠಡಿ 301 ರಲ್ಲಿ ಯಡಿಯೂರು ಸಿದ್ದಲಿಂಗೇಶ್ವರನ ಪೂಜೆ ನೆರವೇರಿಸಿದ ನಾರಾಯಣ ಗೌಡರ ಹಾಗೂ ಪತ್ನಿ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು. ನಾರಾಯಣ ಗೌಡರ ಕೊಠಡಿ ಪೂಜೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಭಾಗಿಯಾಗಿದ್ದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ವಿಶೇಷವಾಗಿ ಹೋಮ, ಹವನ ನಡೆಸುವ ಮೂಲಕ ಕಚೇರಿ ಪೂಜೆ ಸಲ್ಲಿಸಿದರು. ತಮಗೆ ಮೀಸಲಾದ ವಿಧಾನಸೌಧ ಕೊಠಡಿ ಸಂಖ್ಯೆ 339 ರಲ್ಲಿ ಪೂಜೆ ನೆರವೇರಿಸಿದರು. ಈ ವೇಳೆ ಅವರ ಬೆಂಬಲಿಗರು ಆಗಮಿಸಿ ಶುಭ ಕೋರಿದರು.