ಕರ್ನಾಟಕ

karnataka

ETV Bharat / state

ನಾಳೆಯಿಂದ ಬಸ್​, ಮೆಟ್ರೋ ಸೇವೆ ಪುನರಾರಂಭ: ಸಾರಿಗೆ ಸಂಸ್ಥೆಗಳಿಂದ ಸಕಲ ಸಿದ್ಧತೆ

ಕಳೆದ ಮೂರ್ನಾಲ್ಕು ತಿಂಗಳ ಬಳಿಕ ಕರುನಾಡಿನ ಬಹುತೇಕ ಭಾಗಗಳು ನಾಳೆಯಿಂದ ಸಹಜ ಸ್ಥಿತಿಯತ್ತ ಮರಳಲಿವೆ. ಸರ್ಕಾರ ಈಗಾಗಲೇ ಅನ್​ಲಾಕ್​ 2.0 ಘೋಷಿಸಿದ್ದು, ಬಸ್​, ಮೆಟ್ರೋ ಓಡಾಟಕ್ಕೆ ಅವಕಾಶ ನೀಡಿದೆ. ಜನರಿಗೆ ಸುರಕ್ಷಿತ ಸೇವೆ ಒದಗಿಸಲು ಬಿಎಂಟಿಸಿ, ಕೆಎಸ್​ಆರ್​ಟಿಸಿ, ಬಿಎಂಆರ್​ಸಿಎಲ್​ ಸಿದ್ದತೆ ಮಾಡಿಕೊಂಡಿವೆ.

Bus Services resumes
ನಾಳೆಯಿಂದ ಬಸ್​, ಮೆಟ್ರೋ ಸೇವೆ ಪುನರಾರಂಭ

By

Published : Jun 20, 2021, 11:44 AM IST

ಬೆಂಗಳೂರು: ಸರ್ಕಾರ ಎರಡನೇ ಹಂತದ ಅನ್​ಲಾಕ್​ (Unlock 2.0) ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಬಿಎಂಟಿಸಿ, ಕೆಎಸ್​ಆರ್​ಟಿಸಿ ಬಸ್​ಗಳು ಮತ್ತು ಬೆಂಗಳೂರು ಮೆಟ್ರೋ ರೈಲು ಓಡಾಟ ಪುನರಾರಂಭಕ್ಕೆ ಸಿದ್ದತೆ ನಡೆಸಿವೆ. ಈ ನಿಟ್ಟಿನಲ್ಲಿ ಸಿಬ್ಬಂದಿ ಬಸ್​, ರೈಲಿನ ಸ್ವಚ್ಚತಾ ಕಾರ್ಯದಲ್ಲಿ ತೊಡಗಿದ್ದಾರೆ. ನಾಳೆ ಬೆಳಗ್ಗೆ 6 ಗಂಟೆಯಿಂದ ಸೇವೆ ಆರಂಭವಾಗಲಿದೆ.

ಸುರಕ್ಷ ಕ್ರಮಗಳನ್ನು ಕೈಗೊಂಡಿರುವ ಬಗ್ಗೆ ಬಿಎಂಟಿಸಿ ಮಾಹಿತಿ

ರಾಜಧಾನಿ ಬೆಂಗಳೂರಿಗರ ಜೀವನಾಡಿ ಬಿಎಂಟಿಸಿ. ತಿಂಗಳಾನುಗಟ್ಟಲೆ ಡಿಪೋದಲ್ಲೇ ನಿಂತಿದ್ದ ಬಸ್​ಗಳು ನಾಳೆಯಿಂದ ಸಂಚಾರ ಪುನರಾರಂಭಿಸಲಿವೆ. ಡಿಪೋಗಳಲ್ಲಿ ಬಸ್​ಗಳಿಗೆ ದಿನಕ್ಕೆರಡು ಬಾರಿ ಎಲ್ಲಾ ಬಸ್​ಗಳಿಗೆ ಸ್ಯಾನಿಟೈಸಿಂಗ್ ನಡೆಯಲಿದೆ.

ಮೆಟ್ರೋ ನಿಲ್ದಾಣದ ಸ್ಚಚ್ಚತಾ ಕಾರ್ಯದಲ್ಲಿ ತೊಡಗಿರುವ ಸಿಬ್ಬಂದಿ

ಬಿಎಂಟಿಸಿಯ ಎಲ್ಲಾ ಚಾಲಕ, ನಿರ್ವಾಹಕರಿಗೆ ಕೋವಿಡ್ ಲಸಿಕೆ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಎರಡೂ ಡೋಸ್ ಲಸಿಕೆ ಹಾಕಿಸಿಕೊಂಡವರಿಗೆ ಮಾತ್ರ ಕರ್ತವ್ಯ ನಿರ್ವಹಿಸಲು ಅವಕಾಶ ಇರಲಿದೆ. ಬಿಎಂಟಿಸಿಯ ಶೇ. 90 ರಷ್ಟು ಸಿಬ್ಬಂದಿ ಈಗಾಗಲೇ ಕೋವಿಡ್ ಲಸಿಕೆಯ ಮೊದಲ ಡೋಸ್ ಪಡೆದಿದ್ದಾರೆ.

ಹಸಿರು- ನೇರಳೆ ಮಾರ್ಗದಲ್ಲಿ ಪ್ರತೀ 5 ನಿಮಿಷಕ್ಕೊಂದು ಮೆಟ್ರೋ : ಸ್ಮಾರ್ಟ್ ಕಾರ್ಡ್ ಇದ್ದರೆ ಮಾತ್ರ ಪ್ರಯಾಣ

ಸುಮಾರು 5 ತಿಂಗಳ ಬಳಿಕ ನಾಳೆಯಿಂದ ಮೆಟ್ರೋ ಸಂಚಾರ ಕೂಡ ಆರಂಭವಾಗಲಿದೆ. ಹಸಿರು- ನೇರಳೆ ಮಾರ್ಗಗಳಲ್ಲಿ ಪ್ರತೀ 5 ನಿಮಿಷಕ್ಕೊಂದು ರೈಲು ಓಡಿಸಲು ಬಿಎಂಆರ್​ಸಿಎಲ್ ಸಿದ್ದತೆ ಮಾಡಿದೆ. ಮೆಟ್ರೋ ಸ್ಮಾರ್ಟ್ ಕಾರ್ಡ್ ಇದ್ದವರಿಗೆ ಮಾತ್ರ ಪ್ರಯಾಣಕ್ಕೆ ಅವಕಾಶ ಇರಲಿದೆ. ಈಗಾಗಲೇ ಎಲ್ಲಾ ಮೆಟ್ರೋ ನಿಲ್ದಾಣಗಳ ಸ್ವಚ್ಚತಾ ಕಾರ್ಯ ನಡೆಸಲಾಗಿದೆ. ಕೋವಿಡ್ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಿಲ್ದಾಣಗಳಲ್ಲಿ ಪೋಸ್ಟರ್​ಗಳನ್ನು ಅಂಟಿಸಲಾಗಿದೆ.

ಎಲಿವೇಟರ್ ಸೇರಿದಂತೆ ಎಲ್ಲವೂ ಕ್ಲೀನ್​ ಕ್ಲೀನ್

ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಮತ್ತು ಮಧ್ಯಾಹ್ನ 3 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮೆಟ್ರೋ ಓಡಾಟ ಇರಲಿದೆ. ಸರ್ಕಾರದ ಮಾರ್ಗಸೂಚಿ ಪ್ರಕಾರ, ಶನಿವಾರ ಮತ್ತು ಭಾನುವಾರ ವೀಕೆಂಡ್ ಕರ್ಫ್ಯೂ ಇರುವುದರಿಂದ ಮೆಟ್ರೋ ಸಂಚಾರ ಇರುವುದಿಲ್ಲ.

ಮೆಟ್ರೋ ಪ್ರಯಾಣಿಕರಿಗೆ ಷರತ್ತುಗಳು :

  • ಮೆಟ್ರೋ ಸ್ಮಾರ್ಟ್ ಕಾರ್ಡ್ ಹೊಂದಿರಬೇಕು
  • ಸ್ಯಾನಿಟೈಸರ್ ಬಳಸುವುದು, ಮಾಸ್ಕ್ ಧರಿಸುವುದು ಕಡ್ಡಾಯ
  • ಪ್ರವೇಶ, ನಿರ್ಗಮನದ ಜಾಗ ಹಾಗೂ ಫ್ಲ್ಯಾಟ್​ ಫಾರ್ಮ್​ಗಳಲ್ಲಿ ಹಳದಿ ಗುರುತಿನ ಬಳಿ ನಿಲ್ಲಬೇಕು
  • ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ 2 ಮೀಟರ್ ಅಂತರ ಕಾಯ್ದುಕೊಳ್ಳಬೇಕು
  • 50 ಕ್ಕಿಂತ ಹೆಚ್ಚು ಪ್ರಯಾಣಿಕರು ನಿಲ್ದಾಣದಲ್ಲಿ ನಿಲ್ಲುವಂತಿಲ್ಲ
  • ರೈಲಿನಲ್ಲಿ ಗುರುತಿಸಿರುವ ಆಸನಗಳಲ್ಲಿ ಮಾತ್ರ ಕೂರಲು ಅವಕಾಶ
  • ಎಲ್ಲಾ ಪ್ರಯಾಣಿಕರು ದೇಹದ ಟೆಂಪರೇಚರ್​ ಪರೀಕ್ಷೆ ಮಾಡಿಸಿಕೊಳ್ಳಬೇಕು
  • ಎಸ್ಕೇಲೇಟರ್ ಬಳಸುವವರು ತಮ್ಮ ಮುಂದಿರುವ ವ್ಯಕ್ತಿಯಿಂದ ಒಂದು ಮೆಟ್ಟಿಲು ಅಂತರ ಕಾಪಾಡಬೇಕು
  • ಲಿಫ್ಟ್​ನಲ್ಲಿ ನಾಲ್ಕು ಜನರಿಗೆ ಮಾತ್ರ ಅವಕಾಶ

ಹೊರ ರಾಜ್ಯಗಳಿಗೆ ಕೆಎಸ್​ಆರ್​ಟಿಸಿ ಸಂಚಾರವಿಲ್ಲ :

  • ಕೆಎಸ್​ಆರ್​ಟಿಸಿ ಬಸ್​ಗಳಲ್ಲಿ ಶೇ.50 ರಷ್ಟು ಪ್ರಯಾಣಿಕರಿಗೆ ಮಾತ್ರ ಅವಕಾಶವಿದೆ
  • ಯಾವುದೇ ಕಾರಣಕ್ಕೂ ನಿಂತು ಪ್ರಯಾಣಿಸುವಂತಿಲ್ಲ
  • ಇಬ್ಬರು ಕುಳಿತುಕೊಳ್ಳುವ ಸೀಟ್​ನಲ್ಲಿ ಒಬ್ಬರು ಮತ್ತು ಮೂವರು ಕುಳಿತುಕೊಳ್ಳುವ ಸೀಟ್​ನಲ್ಲಿ ಇಬ್ಬರಿಗೆ ಕುಳಿತುಕೊಳ್ಳಲು ಅವಕಾಶ
  • ಸದ್ಯಕ್ಕೆ ಎಸಿ ಬಸ್​ಗಳ ಸಂಚಾರ ಇಲ್ಲ
  • ಪ್ರಯಾಣಿಕರು ಮಾಸ್ಕ್​​ ಬಳಸುವುದು ಕಡ್ಡಾಯ
  • ಚಾಲಕ, ನಿರ್ವಾಹಕ ಕೋವಿಡ್ ಲಸಿಕೆ ಪಡೆಯುವುದು ಕಡ್ಡಾಯ

ABOUT THE AUTHOR

...view details