ಬೆಂಗಳೂರು: ಸೋಷಿಯಲ್ ಮೀಡಿಯಾವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಳ್ಳುತ್ತಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಇತ್ತೀಚಿನ ಹೋಟೆಲ್ನಲ್ಲಿ ಉಪಹಾರ ಸೇವಿಸಿದ ಪೋಟೋ ಒಂದನ್ನು ಶೇರ್ ಮಾಡಿದ್ದರು. ಈ ಹಿನ್ನೆಲೆ ಟ್ವೀಟಿಗರು ಇದೆಲ್ಲದರ ಬದಲು ಉಪಯುಕ್ತ ಮಾಹಿತಿ ನೀಡಿ ಎಂದು ಸಲಹೆ ನೀಡಿದ್ದಾರೆ.
ತಿಂಡಿ ತಿನ್ನೋದನ್ನ ಟ್ವಿಟರ್ನಲ್ಲಿ ಶೇರ್ ಮಾಡಿದ ಸಿಎಂ: ನೆಟ್ಟಗಿರೋ ವಿಷಯ ಶೇರ್ ಮಾಡಿ ಎಂದ ನೆಟ್ಟಿಗರು - People spark against CM via Twitter
ಇತ್ತೀಚೆಗೆ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್ನಲ್ಲಿ ಸಿಎಂ ಉಪಹಾರ ಸೇವಿಸಿದ್ದರು. ಅದರ ಫೋಟೋವನ್ನು ಸಿಎಂ ಆಫ್ ಕರ್ನಾಟಕ ಹೆಸರಿನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು.
ಇತ್ತೀಚೆಗೆ ಶಿವಾನಂದ ವೃತ್ತದ ಸಮೀಪದಲ್ಲಿರುವ ಜನಾರ್ದನ ಹೋಟೆಲ್ನಲ್ಲಿ ಸಿಎಂ ಉಪಹಾರ ಸೇವಿಸಿದ್ದರು. ಅದರ ಫೋಟೋವನ್ನು ಸಿಎಂ ಆಫ್ ಕರ್ನಾಟಕ ಹೆಸರಿನ ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಲಾಗಿತ್ತು. ಈ ಪೋಸ್ಟ್ ಬಗ್ಗೆ ಸಾಕಷ್ಟು ಚರ್ಚೆ ಟ್ವಿಟರ್ ನಲ್ಲೇ ನಡೆದಿದೆ. ಹಲವಾರು ಜನರು ಪರ-ವಿರೋಧದ ಕಮೆಂಟ್ ಮಾಡಿದ್ದು, ಕುಮಾರಸ್ವಾಮಿ ಬೆಸ್ಟೋ, ಯಡಿಯೂರಪ್ಪ ಬೆಸ್ಟೋ ಅಂತಾ ಆನ್ ಲೈನ್ ಸಮೀಕ್ಷೆಯನ್ನೇ ಮಾಡಿಬಿಟ್ಟಿದ್ದಾರೆ.
ಇಂತಹದ್ದನ್ನೆಲ್ಲಾ ಯಾಕೆ ಪೋಸ್ಟ್ ಮಾಡಬೇಕು, ನಿಮ್ಮ ಟ್ವಿಟರ್ ಖಾತೆ ನಿರ್ವಹಣೆ ಮಾಡುತ್ತಿರುವುದು ಯಾರು?, ಉಪಯುಕ್ತ ಮಾಹಿತಿ ನೀಡಿ ಎಂಬೆಲ್ಲಾ ಪ್ರಶ್ನೆಗಳನ್ನು ನೆಟ್ಟಿಗರು ಕೇಳಿದ್ದಾರೆ.