ಕರ್ನಾಟಕ

karnataka

ETV Bharat / state

ಕುಡಿದುಬಂದ ದಾಸನ ಅಭಿಮಾನಿಗಳಿಂದ ನೆರೆಮನೆಯವರಿಗೆ ಕಿರಿಕಿರಿ: ಟ್ವಿಟರ್ ನಲ್ಲಿ ಆಕ್ರೋಶ - ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ

ಶನಿವಾರ ಮಧ್ಯರಾತ್ರಿ‌‌ ದರ್ಶನ್ ಮನೆಯಲ್ಲಿ ಹುಟ್ಟುಹಬ್ಬ ಆಚರಣೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ ಎಂದು‌ ಆರೋಪಿಸಿ ಆರ್.ಆರ್. ನಗರ ಪೊಲೀಸ್ ಠಾಣೆಗೆ ಸ್ಥಳೀಯರು ದೂರು ನೀಡಿದ್ದಾರೆ.

Actor  darshan
ನಟ ದರ್ಶನ್

By

Published : Feb 16, 2020, 11:37 PM IST

Updated : Feb 16, 2020, 11:59 PM IST

ಬೆಂಗಳೂರು: ನಟ ದರ್ಶನ್ ಅಭಿಮಾನಿಗಳ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಿನ್ನೆ‌ ಮಧ್ಯರಾತ್ರಿ‌‌ ನಡೆದ ದರ್ಶನ್ ಮನೆಯಲ್ಲಿ ಹುಟ್ಟುಹಬ್ಬ ಆಚರಣೆಯಿಂದ ಸಾರ್ವಜನಿಕರಿಗೆ ಕಿರಿಕಿರಿ ಉಂಟಾಗಿದೆ ಎಂದು‌ ಆರೋಪಿಸಿ ಆರ್.ಆರ್.ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದರ್ಶನ್ ಅಭಿಮಾನಿಗಳ ವಿರುದ್ಧ ದೂರು


ಆರ್.ಆರ್.ನಗರದಲ್ಲಿರುವ ದರ್ಶನ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ನಿನ್ನೆ ಅಭಿಮಾನಿಗಳು ಮನೆ ಹತ್ತಿರ ಬಂದು ತಮ್ಮ ನೆಚ್ಚಿನ ನಟನಿಗೆ ಜೈಕಾರ ಕೂಗಿ ಸಂಭ್ರಮಾಚರಣೆ ಮಾಡಿದ್ದರು. ಇದರಿಂದ ಅಕ್ಕಪಕ್ಕದ ಮನೆಗಳ ಮಾಲೀಕರು ಅಸಮಾಧಾನ ವ್ಯಕ್ತಪಡಿಸಿದ್ದರು.

ನಟ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ತಡರಾತ್ರಿ ಅಭಿಮಾನಿಗಳಿಂದ ಜೈಕಾರ: ಸ್ಥಳೀಯ ನಿವಾಸಿಗಳ ಅಸಮಾಧಾನ
ನಟ ದರ್ಶನ್ ಹುಟ್ಟುಹಬ್ಬದ ಪ್ರಯುಕ್ತ ತಡರಾತ್ರಿ ಅಭಿಮಾನಿಗಳಿಂದ ಜೈಕಾರ: ಸ್ಥಳೀಯ ನಿವಾಸಿಗಳ ಅಸಮಾಧಾನ

ಈ ಬಗ್ಗೆ ಪೊಲೀಸರಿಗೆ ಹೇಳಿದರೆ ವರ್ಷಕ್ಕೆ ಒಂದು ದಿನ ಅಡ್ಜೆಸ್ಟ್​ ಮಾಡಿಕೊಳ್ಳುವಂತೆ ಉತ್ತರಿಸಿರುವುದು ಸರಿಯಲ್ಲ‌ ಎಂದು ಸಾಮಾಜಿಕ‌ ಜಾಲತಾಣದಲ್ಲಿ ದರ್ಶನ್ ಅಭಿಮಾನಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ನಿನ್ನೆ ರಾತ್ರಿ ದರ್ಶನ್ ಅಭಿಮಾನಿಗಳು ಕುಡಿದು ಬಂದು ನಮ್ಮ ಮನೆಗೆ ನುಗ್ಗಿದರು. ಮೆಟ್ಟಿಲು, ಟೆರೇಸ್ ಮೇಲೆ ರಂಪ ಮಾಡಿದರು. ಮನೆಯ ಪಾಟ್ ಗಳನ್ನೆಲ್ಲಾ ಒಡೆದು ಹಾಕಿದ್ದಾರೆ. ಬೆಳಗ್ಗೆ ಬಾಗಿಲು ತೆರೆದರೆ ನೂರಾರು ಚಪ್ಪಲಿಗಳು ಬಿದ್ದಿದ್ದವು. ಇದಕ್ಕೆ ಯಾರು ಹೊಣೆ' ಎಂದು ನೆರೆಮನೆ ನಿವಾಸಿಯೊಬ್ಬರು ಟ್ವೀಟ್ ಮಾಡಿದ್ದಾರೆ.

Last Updated : Feb 16, 2020, 11:59 PM IST

ABOUT THE AUTHOR

...view details