ಬೆಂಗಳೂರು: ವಿದ್ಯಾರ್ಥಿಗಳ ಭವಿಷ್ಯ ನಿರ್ಧಾರ ಮಾಡವ ಪಿಯುಸಿ ಫಲಿತಾಂಶ ಏಪ್ರಿಲ್ 15 ರಂದು ಬೆಳಗ್ಗೆ 11 ಗಂಟೆಗೆ ಪ್ರಕಟವಾಗಲಿದೆ.
ಏಪ್ರಿಲ್ 15 ಕ್ಕೆ ಪಿಯು ಫಲಿತಾಂಶ ಪ್ರಕಟ -
ವಿದ್ಯಾರ್ಥಿಗಳ ಪಾಲಿಗೆ ಎಸ್ಎಸ್ಎಲ್ಸಿ ಬಿಟ್ಟರೆ ಮತ್ತೊಂದು ಭವಿಷ್ಯದ ಮೆಟ್ಟಿಲು ಎಂದರೆ ಪಿಯುಸಿ. ಈ ಹಿನ್ನೆಲೆ ರಾಜ್ಯಾದ್ಯಂತ ಅನೇಕ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, ಇದೇ ತಿಂಗಳ 15 ಕ್ಕೆ ವಿದ್ಯಾರ್ಥಿಗಳ ಫಲಿತಾಂಶ ಪ್ರಕಟವಾಗಲಿದೆ
ಪಿಯು ಫಲಿತಾಂಶ ಪ್ರಕಟ
ಈ ಬಾರಿ 3,38,868 ವಿದ್ಯಾರ್ಥಿಗಳು ಹಾಗೂ 3,34,738 ವಿದ್ಯಾರ್ಥಿನಿಯರು ಪರೀಕ್ಷೆ ಬರೆದಿದ್ದು, ಈ ಪೈಕಿ ಕಲಾ ವಿಭಾಗದ 2,01,032 ವಿದ್ಯಾರ್ಥಿಗಳು, 2,54,516 ವಾಣಿಜ್ಯ ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದ 2,18,068 ವಿದ್ಯಾರ್ಥಿಗಳು ಇದ್ದು, ಒಟ್ಟು 6,73,606 ವಿದ್ಯಾರ್ಥಿಗಳು ಬರೆದಿದ್ದರು.
ಈಗ ಪಿಯು ವಿದ್ಯಾರ್ಥಿಗಳು ತಮ್ಮ ಭವಿಷ್ಯವನ್ನು 15ಕ್ಕೆ ತಿಳಿದುಕೊಳ್ಳಲಿದ್ದಾರೆ. ಈ ಸಂಬಂಧ ಪಿಯು ನಿರ್ದೇಶಕಿ ಶಿಖಾ ಮಾಹಿತಿ ನೀಡಿದ್ದಾರೆ.
Last Updated : Apr 12, 2019, 6:28 PM IST