ಬೆಂಗಳೂರು:2023-24ನೇ ಸಾಲಿನ ಖಾಸಗಿ ಅನುದಾನಿತ ಹಾಗೂ ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ, ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳನ್ನು ಆರಂಭಿಸಲು ಅರ್ಜಿ ಸಲ್ಲಿಕೆ ಕಾಲಾವಕಾಶವನ್ನು ವಿಸ್ತರಿಸಿ ಪದವಿ ಪೂರ್ವ ಶಿಕ್ಷಣ ಇಲಾಖೆ ಆದೇಶ ಹೊರಡಿಸಿದೆ. ಏಪ್ರಿಲ್ 30ಕ್ಕೆ ಕಾಲಾವಕಾಶ ಮುಕ್ತಾಯವಾಗಿತ್ತು. ಸದ್ಯ ಮೇ 5ರಿಂದ ಮುಂದಿನ 15 ದಿನಗಳವರೆಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಇದನ್ನೂ ಓದಿ:ತಿಪಟೂರಿನಲ್ಲಿ ಯಡಿಯೂರಪ್ಪ ಭರ್ಜರಿ ರೋಡ್ ಶೋ : ಸಚಿವ ನಾಗೇಶ್ ಪರ ಮತಯಾಚನೆ
ಪದವಿ ಪೂರ್ವ ಶಿಕ್ಷಣ ನಿಯಮಗಳು 2006ರ 11(3) ಮತ್ತು (4) ಅನ್ವಯ ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ಖಾಸಗಿ ಅನುದಾನಿತ, ಶಾಶ್ವತ ಅನುದಾನ ರಹಿತ ಪದವಿಪೂರ್ವ ಕಾಲೇಜುಗಳಲ್ಲಿ ಹೊಸ ಭಾಷೆ, ಸಂಯೋಜನೆ ಹಾಗೂ ಹೆಚ್ಚುವರಿ ವಿಭಾಗಗಳನ್ನು 2023-24ನೇ ಶೈಕ್ಷಣಿಕ ಸಾಲಿನಿಂದ ಪ್ರಾರಂಭಿಸಲು ಇಚ್ಛಿಸುವ ಖಾಸಗಿ ಅನುದಾನಿತ, ಶಾಶ್ವತ ಅನುದಾನ ರಹಿತ ಪದವಿ ಪೂರ್ವ ಕಾಲೇಜುಗಳು ಅರ್ಜಿಗಳನ್ನು ಇಲಾಖೆಯ ವೆಬ್ಸೈಟ್ ಲಿಂಕ್ನ್ನು ಬಳಸಬೇಕು.