ಬೆಂಗಳೂರು :ಇಂದಿನಿಂದ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು ಆರಂಭಗೊಂಡಿವೆ. ಹಿಜಾಬ್ ವಿವಾದದಿಂದ ದೂರ ಇರುವ ಬೆಂಗಳೂರಿನಲ್ಲಿ ಎಂದಿನಂತೆ ತರಗತಿಗಳು ನಡೆಯುತ್ತಿವೆ.
ಆದರೆ, ಈ ಮಧ್ಯೆ ಮಲ್ಲೇಶ್ವರಂನ ಪಿಯು ಕಾಲೇಜಿನಲ್ಲಿ ಹಿಜಾಬ್ ಹಾಗೂ ಬುರ್ಕಾ ಧರಿಸಿಯೇ ಹೋಗುವಂತೆ ಕಾಂಗ್ರೆಸಿನ ಕೆಲ ಕಾರ್ಯಕರ್ತರು ಒತ್ತಾಯ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಹಿಜಾಬ್-ಬುರ್ಕಾ ಧರಿಸಿಯೇ ಹೋಗುವಂತೆ ಕಾಂಗ್ರೆಸಿಗರು ಒತ್ತಾಯಿಸಿದ ಆರೋಪ ಸರ್ಕಾರಿ ಪಿಯುಸಿ ಕಾಲೇಜ್‌ಗೆ ಹಿಜಾಬ್ ಹಾಗೂ ಬುರ್ಕಾ ಧರಿಸಿ ವಿದ್ಯಾರ್ಥಿನಿಯರು ಆಗಮಿಸಿದ್ದರು. ಈ ವೇಳೆ ಪ್ರಾಂಶುಪಾಲರಾದ ಎ ಎಸ್ ರವಿ ಅವರು ವಿದ್ಯಾರ್ಥಿನಿಯರಿಗೆ ಧಾರ್ಮಿಕ ಉಡುಪನ್ನು ತೆಗೆದಿಟ್ಟು ತರಗತಿಗೆ ತೆರಳುವಂತೆ ಸೂಚನೆ ನೀಡಿದ್ದರು.
ಇದನ್ನೂ ಓದಿ:ರಾಜ್ಯಾದ್ಯಂತ ಪಿಯು, ಪದವಿ ಕಾಲೇಜು ಪುನಾರಂಭ: ಬೆಂಗಳೂರಿನಲ್ಲಿ ಪೊಲೀಸ್ ಭದ್ರತೆ
ಬಳಿಕ ಕಾರ್ಯಕರ್ತರು ಮತ್ತು ಪ್ರಾಂಶುಪಾಲರ ನಡುವೆ ಮಾತಿನ ಚಕಮಕಿ ಆಗಿದೆ. ಇತ್ತ ಸ್ಥಳಕ್ಕಾಗಮಿಸಿದ ಮಲ್ಲೇಶ್ವರ ಪೊಲೀಸ್ ಇನ್ಸ್‌ಪೆಕ್ಟರ್ ಮಂಜಯ್ಯ ಅವರು, ಕಾರ್ಯಕರ್ತರನ್ನು ವಶಕ್ಕೆ ಪಡೆದರು. ಸೆಕ್ಷನ್ 144 ವಿಧಿಸಿರೋವಾಗ ಕಾಲೇಜಿನಲ್ಲಿ ಗದ್ದಲ ಎಬ್ಬಿಸಿದ್ದಕ್ಕೆ ವಶಕ್ಕೆ ಪಡೆದಿದ್ದಾರೆ.
ಇನ್ನು ಈ ಹಿಂದೆಯೂ ಹಿಜಾಬ್ ತೆರವು ಮಾಡಿಯೇ ಕ್ಲಾಸ್ ರೂಂಗೆ ಹೋಗ್ತಿದ್ರು. ಈಗ ನಾವೇನು ಹೊಸತು ಕಾನೂನು ಮಾಡ್ತಿಲ್ಲ ಎಂದು ಕಾಲೇಜು ಆಡಳಿತ ಮಂಡಳಿ ಸ್ಪಷ್ಟಪಡಿಸಿದೆ.