ಬೆಂಗಳೂರು: ಕೊರೊನಾ ನಡುವೆ ಸದ್ಯ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮುಖ್ಯ ಪರೀಕ್ಷೆಗಳು ನಡೆಯಬೇಕಾ ಬೇಡ್ವಾ ಎಂಬ ಚರ್ಚೆಗಳು ನಡೆಯುತ್ತಿದೆ.
ದೇಶಾದ್ಯಂತ ಕೊರೊನಾ ವ್ಯಾಪಿಸಿದ್ದು ಪ್ರತಿ ರಾಜ್ಯದಲ್ಲೂ ನಿತ್ಯ ಸಾವಿರಾರು ಜನರಲ್ಲಿ ಸೋಂಕು ಪತ್ತೆಯಾಗ್ತಿದೆ.. ಈ ನಡುವೆ ಕೊರೊನಾ ನಿಯಂತ್ರಣಕ್ಕೆ ಹಲವು ರಾಜ್ಯಗಳು ಲಾಕ್ ಡೌನ್ ನಂತಹ ದಾರಿ ಹಿಡಿದಿವೆ.
ಈಗಾಗಲೇ ಈ ಸಂಬಂಧ ಕೇಂದ್ರ ಸರ್ಕಾರದ ಮಟ್ಟಿಗೆ ಎಲ್ಲ ರಾಜ್ಯಗಳ ಶಿಕ್ಷಣ ಸಚಿವರು, ಅಧಿಕಾರಿಗಳು, ಮುಖ್ಯ ಕಾರ್ಯದರ್ಶಿಗಳೊಂದಿಗೆ ಸಭೆಯು ಕಳೆದ 23 ರಂದು ನಡೆದಿದೆ. ಈ ನಡುವೆ ರಾಜ್ಯ ಪದವಿಪೂರ್ವ ಇಲಾಖೆಯು ಹಲವು ಸಲಹೆ ಮನವಿಗಳನ್ನ ನೀಡಿದೆ. ಪ್ರಮುಖವಾಗಿ, ಪೂರ್ವಭಾವಿ ಪರೀಕ್ಷೆ ತಯಾರಿ ನಂತರ ಪ್ರಶ್ನೆ ಪತ್ರಿಕೆ ಮಾದರಿ ಬದಲಾಯಿಸುವುದು ಕಷ್ಟ ಸಾಧ್ಯ ಅಂತ ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ ನಡೆಸಲು ಹಾಗೂ ಫಲಿತಾಂಶ ಪ್ರಕಟಿಸಲು 75 ದಿನಗಳ ಕಾಲಾವಕಾಶ ಬೇಕಾಗುತ್ತೆ. ಕರ್ನಾಟಕದಲ್ಲಿ, ಪಿಯು ಮಂಡಳಿಯು ಪದವಿ ಪೂರ್ವ ಪರೀಕ್ಷೆಯ ಆಯೋಜನೆ ಕೆಲಸವನ್ನು ಪೂರ್ಣಗೊಳಿಸಿದೆ. ಈ ಸಮಯದಲ್ಲಿ ಪರೀಕ್ಷೆಯ ಮಾದರಿಯನ್ನು ಬದಲಾಯಿಸಿದರೆ ವಿದ್ಯಾರ್ಥಿಗಳು ಒತ್ತಡಕ್ಕೆ ಒಳಗಾಗುತ್ತಾರೆ ಎಂದು ಅಭಿಪ್ರಾಯಪಟ್ಟಿದೆ. ಸಿಬಿಎಸ್‌ಇ 12 ನೇ ತರಗತಿ ಪರೀಕ್ಷೆಯ ನಂತರ ಮಾತ್ರ ವೃತ್ತಿಪರ ಕೋರ್ಸ್‌ಗಳ ಅಖಿಲ ಭಾರತ ಪ್ರವೇಶ ಪರೀಕ್ಷೆಗಳನ್ನು ನಡೆಸಬೇಕೆಂದು ಪದವಿ ಪೂರ್ವ ಇಲಾಖೆ ವಿನಂತಿಸಿದೆ.