ಕರ್ನಾಟಕ

karnataka

ETV Bharat / state

ಕೋವಿಡ್ ಸೇನಾನಿಗಾಗಿ 'ಸೈನಿಕ್ ಫಾರ್ ಡಾಕ್ಟರ್ಸ್' ಸೇವೆ - ‘ಸೈನಿಕ್ ಫಾರ್ ಡಾಕ್ಟರ್ಸ್’

‘ಸೈನಿಕ್ ಫಾರ್ ಡಾಕ್ಟರ್ಸ್’ ಕೋವಿಡ್-19 ಆರೋಗ್ಯ ಕಾರ್ಯಕರ್ತರ ಸಂಚಾರಕ್ಕಾಗಿಯೇ ಇರುವ ವಿಶಿಷ್ಟ ವ್ಯವಸ್ಥೆಯಾಗಿದೆ.

Covid Warriors
'ಸೈನಿಕ್ ಫಾರ್ ಡಾಕ್ಟರ್ಸ್' ಸೇವೆ

By

Published : Jul 17, 2020, 10:27 PM IST

ಬೆಂಗಳೂರು: ದೇಶ ಕಾಯೋ ಯೋಧರು ಇದೀಗ ಕೊರೊನಾ‌ ವಿರುದ್ಧದ ಹೋರಾಟಕ್ಕೆ ಮುಂದಾಗಿದ್ದಾರೆ.‌

ನಿವೃತ್ತ ಯೋಧರೇ ನಿರ್ವಹಿಸುವ ಮೊಟ್ಟಮೊದಲ ಹಂಚಿಕೆಯ ಸಂಚಾರ ಪರಿಹಾರ ಸೇವಾ ವ್ಯವಸ್ಥೆಯಾದ ಮದರ್‍ಪಾಡ್ ಇನ್ನೊವೇಷನ್ಸ್ ಪ್ರೈವೇಟ್ ಲಿಮಿಟೆಡ್ ಇಂದು ಬೆಂಗಳೂರಿನ ಬೆಂಗಳೂರು ಮೆಡಿಕಲ್ ಕಾಲೇಜ್ ಮತ್ತು ರೀಸರ್ಚ್ ಇನ್‍ಸ್ಟಿಟ್ಯೂಟ್‍ನಲ್ಲಿ “ಸೈನಿಕ್ ಫಾರ್ ಡಾಕ್ಟರ್ಸ್’ ಈ ವಿಶಿಷ್ಟ ಕಾರ್ಯಕ್ರಮಕ್ಕೆ ಚಾಲನೆ ನೀಡಿದೆ.

‘ಸೈನಿಕ್ ಫಾರ್ ಡಾಕ್ಟರ್ಸ್’ ಕೋವಿಡ್-19 ಆರೋಗ್ಯ ಕಾರ್ಯಕರ್ತರ ಸಂಚಾರಕ್ಕಾಗಿಯೇ ಇರುವ ವಿಶಿಷ್ಟ ವ್ಯವಸ್ಥೆಯಾಗಿದೆ. ಬೆಂಗಳೂರು, ಮುಂಬೈ, ದೆಹಲಿ ಮತ್ತು ಹೈದರಾಬಾದ್‍ನಲ್ಲಿ ಇಂದು ಆರಂಭವಾಗಿರುವ ಈ ಸೌಲಭ್ಯವನ್ನು ಪಡೆಯಲು, ಆರೋಗ್ಯ ಸೇವಾ ಸಂಸ್ಥೆಗಳು ಮದರ್‍ಪಾಡ್ ಜೊತೆಗೆ ಪಾಲುದಾರಿಕೆ ಮಾಡಿಕೊಳ್ಳಬಹುದು.

ಈ ವ್ಯವಸ್ಥೆಯಡಿ ವೈದ್ಯರು ಮತ್ತು ಇತರ ಆರೋಗ್ಯ ಕಾರ್ಯಕರ್ತರನ್ನು ಆಸ್ಪತ್ರೆಗಳಿಗೆ ಹಾಗೂ ಆಸ್ಪತ್ರೆಯಿಂದ ಮನೆಗೆ ಸುರಕ್ಷಿತವಾಗಿ, ನಿವೃತ್ತ ಯೋಧರ ಬೆಂಗಾವಲು ವಾಹನದೊಂದಿಗೆ ಕರೆದೊಯ್ಯಲಾಗುತ್ತದೆ. ಮದರ್‍ಪಾಡ್ ಜತೆಗೆ ಪಾಲುದಾರಿಕೆ ಮಾಡಿಕೊಳ್ಳಲು ಆರೋಗ್ಯ ಸೇವಾ ಸಂಸ್ಥೆಗಳು www.motherpod.org ಗೆ ಲಾಗ್‍ಇನ್ ಮಾಡಬಹುದಾಗಿದೆ ಅಥವಾ +91 7676175174ಗೆ ಕರೆ ಮಾಡಬಹುದಾಗಿದೆ.

ಮದರ್‍ಪಾಡ್, ಸುರಕ್ಷಿತ, ಸುಭದ್ರ ಮತ್ತು ಶುಚಿತ್ವದ ಸಂಚಾರ ಸೇವೆಯನ್ನು ಒದಗಿಸಲು ಸಜ್ಜಾಗಿದೆ. ಇದು ಆರೋಗ್ಯ ಕಾರ್ಯಕರ್ತರಿಗೆ ಸಂಪೂರ್ಣ ಮನಃಶಾಂತಿಯ ಸಂಚಾರ ವ್ಯವಸ್ಥೆಯನ್ನು ಒದಗಿಸಲಿದೆ. ದೇಶಕ್ಕಾಗಿ ಜೀವನ ಪರ್ಯಂತ ಸೇವೆ ಸಲ್ಲಿಸುವ ಸಂಬಂಧ ಕೈಗೊಂಡ ಪ್ರತಿಜ್ಞೆಗೆ ಅನುಗುಣವಾಗಿ ಈ ಸೈನಿಕರು ದೇಶದ ಆರೋಗ್ಯ ಕಾರ್ಯಕರ್ತರು ತಮ್ಮ ದೈನಂದಿನ ಕರ್ತವ್ಯಗಳನ್ನು ತಮ್ಮ ವೈಯಕ್ತಿಕ ಕ್ಷೇಮದ ಬಗ್ಗೆ ಯಾವುದೇ ಭೀತಿ ಅಥವಾ ಭಯ ಇಲ್ಲದೇ ನಿರ್ವಹಿಸಲು ಅನುವು ಮಾಡಿಕೊಡಲಿದ್ದಾರೆ.

ಪ್ರಸ್ತುತ ಕೋವಿಡ್-19 ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಮುನ್ನಡೆ ಆರೋಗ್ಯ ಕಾರ್ಯಕರ್ತರು ದೊಡ್ಡ ಸವಾಲುಗಳನ್ನು ಎದುರಿಸುತ್ತಿದ್ದು, ಇದನ್ನು ನಿವಾರಿಸಲು ಮದರ್‍ಪಾಡ್ ಕಟ್ಟುನಿಟ್ಟಿನ ಸಾಮಾಜಿಕ ಅಂತರ ಮತ್ತು ಸುರಕ್ಷಾ ಶಿಷ್ಟಾಚಾರಗಳನ್ನು ಅನುಸರಿಸಲಿದೆ.

ಅಂದರೆ ಪ್ರತಿ ಟ್ರಿಪ್‍ನಲ್ಲಿ ಗರಿಷ್ಠ ಇಬ್ಬರು ಕಾರ್ಯಕರ್ತರನ್ನು ಮಾತ್ರ ಕರೆದೊಯ್ಯಲಿದೆ. ಪ್ರತಿ ವಾಹನದಲ್ಲೂ ಅತ್ಯುನ್ನತ ಗುಣಮಟ್ಟದ ಸಂಪೂರ್ಣ ಸುರಕ್ಷಿತ ಆಕ್ರಿಲಿಕ್ ವಿಭಾಗೀಕರಣ ಮಾಡಲಾಗಿದೆ. ಇದರ ಜತೆಗೆ ಏಕ ಬಳಕೆಯ ಪಿಪಿಇ ಕಿಟ್ ಹಾಗೂ ಹ್ಯಾಂಡ್ ಗ್ಲೌಸ್, ಸ್ಯಾನಿಟೈಸರ್ ಮತ್ತು ಮಾಸ್ಕ್ ಗಳನ್ನು ಪ್ರತಿ ಪ್ರಯಾಣಿಕರಿಗೂ ಪ್ರಯಾಣ ಆರಂಭಕ್ಕೆ ಮುನ್ನ ನೀಡಲಾಗುತ್ತದೆ. ಪ್ರತಿ ಪ್ರಯಾಣಕ್ಕೂ ವಾಹನದ ಒಳಭಾಗವನ್ನು ಸಂಪೂರ್ಣ ಸ್ಯಾನಿಟೈಸ್ ಮಾಡಲಾಗುತ್ತದೆ.

ವಿಭಾಗದ ಮುಖ್ಯಸ್ಥ ಕ್ಯಾಪ್ಟನ್ ಸಂಜಯ್ ಕುಮಾರ್ ಸಿಂಗ್ ಮಾಹಿತಿ ನೀಡಿದ್ದು, “ಮದರ್‍ಪಾಡ್ ವೈವಿಧ್ಯಮಯ ಶ್ರೇಣಿಯ ತಂತ್ರಜ್ಞಾನ ಚಾಲಿತ ಸಂಚಾರ ಪರಿಹಾರವನ್ನು ಒದಗಿಸುತ್ತದೆ. ನಮ್ಮ ಮೊದಲ ಭಾಗವಾಗಿ 'ಸೈನಿಕ್ ಫಾರ್ ಡಾಕ್ಟರ್ಸ್' ಆರಂಭಿಸಲು ನಮಗೆ ಸಂತಸವಾಗುತ್ತಿದೆ. ಕೋವಿಡ್-19 ಸಾಂಕ್ರಾಮಿಕ ನಂತರದ ಯುಗದಲ್ಲಿ ಹೆಚ್ಚಿನ ಭದ್ರತಾ ಕ್ರಮಗಳು ಮತ್ತು ಗುಣಮಟ್ಟದ ಸುರಕ್ಷಾ ಕ್ರಮಗಳು ಸುರಕ್ಷಿತ ಪ್ರಯಾಣಕ್ಕೆ ಅನಿವಾರ್ಯವಾಗಲಿವೆ. ಮುಂದಿನ ದಿನಗಳಲ್ಲಿ ಮದರ್‍ಪಾಡ್, ತನ್ನ ಸೈನಿಕ ಸಮುದಾಯವನ್ನು ಮತ್ತಷ್ಟು ವಿಸ್ತರಿಸಲಿದ್ದು, ಹಲವು ಮಂದಿ ನಿವೃತ್ತ ಯೋಧರಿಗೆ ತಮ್ಮ ವೃತ್ತಿಯನ್ನು ಮುಂದುವರಿಸಲು ಪೂರಕವಾದ ವಾತಾವರಣವನ್ನು ಕಲ್ಪಿಸಿಕೊಡಲಿದೆ” ಎಂದು ಹೇಳಿದರು.

ABOUT THE AUTHOR

...view details