ಕರ್ನಾಟಕ

karnataka

ETV Bharat / state

ಪಿಎಸ್​​ಐ ನೇಮಕಾತಿ ಪ್ರಕರಣ.. ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ - ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಅಧಿಕಾರಿಗಳು

PSI Recruitment Scam: ಆರೋಪಿ ಸಿದ್ದರಾಜು ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಆರೋಪಿಯ ಕುರಿತು ಮಾಹಿತಿ ನೀಡುವಂತೆ ಪ್ರಚಾರ ಮಾಡಿತ್ತು.

PSI Recruitment Scam
ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿ ಸಿಐಡಿ ಅಧಿಕಾರಿಗಳು

By

Published : Sep 17, 2022, 1:06 PM IST

ಬೆಂಗಳೂರು:ಪಿಎಸ್​​ಐ ನೇಮಕಾತಿ ಅಕ್ರಮ‌ ಪ್ರಕರಣದಲ್ಲಿ 36ನೇ ಆರೋಪಿ ಸಿದ್ದರಾಜು ಸದ್ಯ ಅರೆಸ್ಟ್ ಆಗಿದ್ದಾರೆ. ಇವರು ಪಿಎಸ್​​ಐ ಹಗರಣದಲ್ಲಿ ಮಧ್ಯವರ್ತಿಯಾಗಿದ್ದರು ಎನ್ನಲಾಗ್ತಿದೆ. ಪಿಎಸ್​​ಐಯಾಗಿ ಆಯ್ಕೆಯಾಗಿದ್ದ ಗಜೇಂದ್ರ, ಮನೋಜ್​​ಗೆ ಮಧ್ಯವರ್ತಿಯಾಗಿದ್ದ ಸಿದ್ದರಾಜು ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ಐದು ತಿಂಗಳಿನಿಂದ ತಲೆಮರೆಸಿಕೊಂಡಿದ್ದರು.

ಹೀಗಾಗಿ ಆರೋಪಿಯ ಲಗ್ಗೆರೆ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಅಧಿಕಾರಿಗಳು ಆರೋಪಿಯ ಕುರಿತು ಮಾಹಿತಿ ನೀಡುವಂತೆ ಪ್ರಚಾರ ಮಾಡಿದ್ದರು. ಕೋರ್ಟ್​ನಿಂದ ಆರೋಪಿ ಪತ್ತೆಗೆ ಜಾಮೀನು ರಹಿತ ವಾರೆಂಟ್ ಕೂಡ ತರಲಾಗಿತ್ತು ಎಂದು ಸಿಐಡಿ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ ಅಧಿಕಾರಿಗಳು

ಇದನ್ನೂ ಓದಿ:PSI Recruitment Scam: ಬ್ಯಾಗ್​ನಲ್ಲಿ ಇದ್ದಿದ್ದು ದುಡ್ಡಲ್ಲ, ಹಣ್ಣಂತೆ! ಉಲ್ಟಾ ಹೊಡೆದ ಪರಸಪ್ಪ

ಆರೋಪಿ ಸಿದ್ದರಾಜು ಲಗ್ಗೆರೆ ನಿವಾಸದ ಟಿವಿ, ಫ್ರಿಡ್ಜ್​, ಸೋಫಾ, ಕಾರು ಹಾಗೂ ಬೈಕ್ ಸೇರಿ ಚರಾಸ್ತಿ ವಶಕ್ಕೆ ಪಡೆಯಲು ಮುಂದಾಗಿತ್ತು. ಈ ಹಿನ್ನೆಲೆ ನಿನ್ನೆ ಸಿದ್ದರಾಜು ಕೋರ್ಟ್​ಗೆ ನೇರವಾಗಿ ಶರಣಾಗಿದ್ದಾನೆ ಎಂದು ಸಿಐಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:ಪಿಎಸ್​​ಐ ನೇಮಕಾತಿ ಹಗರಣಕ್ಕೆ ಮತ್ತೊಂದು ತಿರುವು: ಶಾಸಕರು ಹಣ ಪಡೆದಿರುವ ಬಗ್ಗೆ ಕಾಂಗ್ರೆಸ್​ನಿಂದ ವಿಡಿಯೋ ಬಿಡುಗಡೆ

ABOUT THE AUTHOR

...view details