ಕರ್ನಾಟಕ

karnataka

ETV Bharat / state

ಪಿಎಸ್ಐ ನೇಮಕಾತಿ ಅಕ್ರಮ: ಟಾಪ್ 10 ರ್‍ಯಾಂಕ್‌ನಲ್ಲಿ ಪಾಸ್​ ಆಗಿದ್ದ ಕಾನ್​​ಸ್ಟೇಬಲ್ ಬಂಧನ?

545 ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದ ಪ್ರಕರಣ ಸಂಬಂಧ 12 ಜನರನ್ನು ಬಂಧಿಸಿದ್ದು, ಇದರಲ್ಲಿ ಓರ್ವ ಕಾನ್ಸ್​ಟೇಬಲ್ ಕೂಡ ಇದ್ದಾನೆ ಎಂದು ತಿಳಿದುಬಂದಿದೆ.

ಪಿಎಸ್ಐ ನೇಮಕಾತಿ ಅಕ್ರಮ
ಪಿಎಸ್ಐ ನೇಮಕಾತಿ ಅಕ್ರಮ

By

Published : May 1, 2022, 1:57 PM IST

ಬೆಂಗಳೂರು:ಪಿಎಸ್ಐ ನೇಮಕಾತಿಯಲ್ಲಿ ಅಕ್ರಮ ಹಿನ್ನೆಲೆ 12 ಜನರನ್ನ ಬಂಧಿಸಿರುವ ಹೈಗ್ರೌಂಡ್ಸ್ ಪೊಲೀಸರು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ನಗರದ ವಿವಿಧ ಏಳು ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮವಾಗಿ ಪರೀಕ್ಷೆ ಬರೆದು ಕೆಲವರು ಉತ್ತೀರ್ಣರಾಗಿದ್ದಾರೆ ಎಂದು ತಿಳಿದುಬಂದಿದೆ. ಬಂಧಿತ 12 ಮಂದಿ ಪೈಕಿ‌ ಓರ್ವ ಟ್ರಾಫಿಕ್ ಕಾನ್ಸ್​ಟೇಬಲ್ ಎಂದು ತಿಳಿದುಬಂದಿದೆ.

ಜೀವನ್ ಭೀಮಾನಗರ ಸಂಚಾರಿ ಠಾಣೆಯ ಕಾನ್ಸ್​ಟೇಬಲ್​ವೊಬ್ಬರು ಬಂಧನಕ್ಕೆ‌ ಒಳಗಾಗಿದ್ದಾರೆ ಎಂದು ತಿಳಿದುಬಂದಿದೆ‌. ಈ ಕಾನ್ಸ್​​ಟೇಬಲ್ ಕೂಡ 545 ಜನರ ಜೊತೆ ಪರೀಕ್ಷೆ ಬರೆದು ಟಾಪ್ 10 ಒಳಗಡೆಯ ರ್ಯಾಂಕಿಂಗ್​​ನಲ್ಲಿ ಪಾಸ್ ಆಗಿದ್ದರು. ಓಎಂಆರ್ ಶೀಟ್ ಪರಿಶೀಲನೆ ವೇಳೆ ಕಾರ್ಬನ್ ಶೀಟ್​​ನಲ್ಲಿ ವ್ಯತ್ಯಾಸ ಕಂಡುಬಂದಿತ್ತು. ಅಲ್ಲದೆ ಇನ್ನು ಕೆಲವರು ವಿಚಾರಣೆಗೆ ಒಳಗಾಗಿದ್ದರು. ಮೇಲ್ನೋಟಕ್ಕೆ 12 ಮಂದಿ ಅಕ್ರಮ ಎಸಗಿರುವುದು ಕಂಡುಬಂದಿದ್ದರಿಂದ ನಿನ್ನೆ ಸಿಐಡಿ ಪೊಲೀಸರು ಬಂಧಿಸಿದ್ದರು.

ಸಿಐಡಿ ಪೊಲೀಸರಿಂದ ಅಜ್ಞಾತ ಸ್ಥಳದಲ್ಲಿ ಬಂಧಿತರ ವಿಚಾರಣೆ ನಡೆಸಲಾಗುತ್ತಿದೆ. ಇನ್ನೂ ಬಂಧಿಸಲಾಗಿರುವ 12 ಮಂದಿಯನ್ನು 10 ದಿನ ಪೊಲೀಸ್ ಕಸ್ಟಡಿಗೆ ನೀಡಿ 8ನೇ ಎಸಿಎಂಎಂ ನ್ಯಾಯಾಲಯ ಆದೇಶ ನೀಡಿದೆ. ಉಳಿದ 10 ಕ್ಕೂ ಹೆಚ್ಚು ಅಭ್ಯರ್ಥಿಗಳು ಬಂಧನ ಭೀತಿಯಿಂದ ಎಸ್ಕೇಪ್ ಆಗಿರುವ ಸಾಧ್ಯತೆ‌ ಇದ್ದು, ಸಿಐಡಿಯಿಂದ ತನಿಖೆ ಮುಂದುವರೆದಿದೆ.

545 ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ ಹಲವರು ಬಂಧಿಸಿದ್ದಾರೆ.

(ಇದನ್ನೂ ಓದಿ: ಪಿಎಸ್ಐ ನೇಮಕಾತಿ ಅಕ್ರಮ ಆರೋಪ: ರ್‍ಯಾಂಕ್‌ ಪಡೆದಿದ್ದ ಕಲಬುರಗಿಯ ಅಭ್ಯರ್ಥಿ ಸಿಐಡಿ ವಶಕ್ಕೆ)

ABOUT THE AUTHOR

...view details