ಕರ್ನಾಟಕ

karnataka

ETV Bharat / state

ಪಿಎಸ್​ಐ ಹಗರಣದ ಚಾರ್ಜ್ ಶೀಟ್ ಸಲ್ಲಿಕೆ ಬಳಿಕ‌ ಪಿಎಸ್ಐ ಮರುಪರೀಕ್ಷೆ‌‌ ದಿನಾಂಕ ಪ್ರಕಟ: ಡಿಜಿ‌ ಪ್ರವೀಣ್ ಸೂದ್

ಪಿಎಸ್​ಐ ನೇಮಕಾತಿ‌ ಪರೀಕ್ಷೆಯಲ್ಲಿ ಅಕ್ರಮ. ಚಾರ್ಜ್​ ಶೀಟ್ ಸಲ್ಲಿಕೆ ಬಳಿಕ ಪಿಎಸ್​ಐ ಮರು ನೇಮಕಾರಿ ಪರೀಕ್ಷೆ. ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ಮಾಹಿತಿ.

ಪಿಎಸ್​ಐ ಹಗರಣ
ಪಿಎಸ್​ಐ ಹಗರಣ

By

Published : Sep 19, 2022, 4:25 PM IST

ಬೆಂಗಳೂರು:ಪೊಲೀಸ್ ನೇಮಕಾತಿ‌ ಪರೀಕ್ಷೆಯಲ್ಲಿ ಅಕ್ರಮ ಸಂಬಂಧ ಸಿಐಡಿ ತನಿಖೆ ನಡೆಸುತ್ತಿದೆ. ಪ್ರಕರಣ ಸಂಬಂಧ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಪಿಎಸ್ಐ ಮರು ಪರೀಕ್ಷೆ ದಿನಾಂಕ ಪ್ರಕಟಿಸಲಾಗುವುದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಪಿಎಸ್ಐ ಅಕ್ರಮ ಪ್ರಕರಣ ತನಿಖೆಯನ್ನು ಸಿಐಡಿ ಪೊಲೀಸರು ನಡೆಸುತ್ತಿದ್ದಾರೆ.‌ ಚಾರ್ಚ್ ಶೀಟ್ ಆಗುವವರೆಗೂ ಏನೂ ಹೇಳುವುದಕ್ಕೆ ಆಗುವುದಿಲ್ಲ. ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ‌ ರೀ ಎಕ್ಸಾಂ ಮಾಡುತ್ತೇವೆ. ಕಳಂಕಿತರು ಮತ್ತೆ ಪರೀಕ್ಷೆ ಬರೆಯಬಾರದು. ತಪ್ಪಿತಸ್ಥ ಅಭ್ಯರ್ಥಿಗಳಿಗೆ ಮತ್ತೊಮ್ಮೆ ಅವಕಾಶ ಸಿಗಕೂಡದು. ಈ ಸಲುವಾಗಿ‌‌ ಪರೀಕ್ಷೆ ದಿನಾಂಕ ಪ್ರಕಟಿಸಿಲ್ಲ.‌ ಇನ್ನೆರಡು ತಿಂಗಳಲ್ಲಿ ಸಿಐಡಿ ಚಾರ್ಜ್ ಶೀಟ್ ಸಲ್ಲಿಸಿದ ಬಳಿಕ ಡೇಟ್ ಅನೌನ್ಸ್ ಮಾಡುತ್ತೇವೆ ಎಂದು ಡಿಜಿ‌ ಪ್ರವೀಣ್ ಸೂದ್ ತಿಳಿಸಿದ್ದಾರೆ.

ಪಿಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಕಂಡುಬಂದ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸುವುದಾಗಿ ಸರ್ಕಾರ ಘೋಷಿಸಿತ್ತು. ಸದ್ತಯ ಹಗರಣದ ತನಿಖೆ ನಡೆಯುತ್ತಿದ್ದು, ಚಾರ್ಜ್ ಶೀಟ್ ಸಲ್ಲಿಕೆ ಬಳಿಕವಷ್ಟೇ ಮರು ಪರೀಕ್ಷೆ ನಡೆಸಲು ಇಲಾಖೆ ತೀರ್ಮಾನಿಸಿದೆ.

ಪಿಎಸ್​ಐ ಹಗರಣ ಸಂಬಂಧ ಈಗಾಗಲೇ ಹಿರಿಯ ಐಪಿಎಸ್ ಅಧಿಕಾರಿ, ಅಭ್ಯರ್ಥಿಗಳು ಸೇರಿ ಹಲವರನ್ನು ಸಿಐಡಿ ಪೊಲೀಸರು ಬಂಧಿಸಿ, ವಿಚಾರಣೆಗೊಳಪಡಿಸಿದ್ದಾರೆ. ಇನ್ನೊಂದೆಡೆ ಪಿಎಸ್​ಐ ಪರೀಕ್ಷೆ ರದ್ದುಗೊಳಿಸಿದ್ದನ್ನು ವಿರೋಧಿಸಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಸದನದಲ್ಲೂ ಪಿಎಸ್​ಐ ಹಗರಣ ಸದ್ದು ಮಾಡುತ್ತಿದೆ.

(ಇದನ್ನೂ ಓದಿ: ಪಿಎಸ್​​ಐ ನೇಮಕಾತಿ ಪ್ರಕರಣ.. ಆರೋಪಿ ನಿವಾಸದ ಬಳಿ ತಮಟೆ ಬಾರಿಸಿ ನೋಟಿಸ್ ಅಂಟಿಸಿದ ಸಿಐಡಿ)

ABOUT THE AUTHOR

...view details