ಕರ್ನಾಟಕ

karnataka

ETV Bharat / state

ಕಾಸಿಲ್ಲದೆ ಪರದಾಡುತ್ತಿದ್ದ ಒಡಿಶಾದ ಸೆಕ್ಯುರಿಟಿ ಗಾರ್ಡ್​ಗೆ ರೈಲ್ವೆ ಟಿಕೆಟ್​ ಕೊಡಿಸಿದ ಮಹಿಳಾ ಪಿಎಸ್​​ಐ - ಸೆಕ್ಯೂರಿಟಿ ಗಾರ್ಡ್​ಗೆ ಪಿಎಸ್​​ಯ ಸಹಾಯ

ರೈಲು ಹತ್ತಲು ಟಿಕೆಟ್​​ ಕೊಳ್ಳಲು ಕಾಸಿಲ್ಲದೇ ಪರದಾಡುತ್ತಿದ್ದ ಒಡಿಶಾ ಮೂಲದ ತಂದೆ-ಮಗಳಿಗೆ ಮಹಿಳಾ ಪಿಎಸ್​​ಐ ಅನಿತಾ ಅವರು ತಮ್ಮ ಸ್ವಂತ ದುಡ್ಡಿನಲ್ಲಿ ಟಿಕೆಟ್​ ಕೊಡಿಸಿ ಸಹಾಯ ಮಾಡಿದ್ದಾರೆ.

PSI helped to security guard to buy train ticket
ರೈಲು ಟಿಕೆಟ್​ ವೆಚ್ಚ ಭರಿಸಿದ ಮಹಿಳಾ ಪಿಎಸ್​​ಐ

By

Published : May 3, 2020, 11:46 AM IST

ಬೆಂಗಳೂರು: ತಮ್ಮ ರಾಜ್ಯವಾದ ಒಡಿಶಾಗೆ ತೆರಳಲು ಟಿಕೆಟ್​ಗೆ ಕಾಸಿಲ್ಲದೇ ಪರದಾಡುತ್ತಿದ್ದ ಸೆಕ್ಯೂರಿಟಿ ಗಾರ್ಡ್​​ ಹಾಗೂ ಅವರ ಮಗಳಿಗೆ ಸ್ವಂತ ದುಡ್ಡಿನಿಂದ ಮಹಿಳಾ ಪಿಎಸ್​​ಐ ಒಬ್ಬರು ಟಿಕೆಟ್​ ಕೊಡಿಸಿ ಕಳಿಸಿದ್ದಾರೆ.

ರೈಲು ಟಿಕೆಟ್​ ವೆಚ್ಚ ಭರಿಸಿದ ಮಹಿಳಾ ಪಿಎಸ್​​ಐ
ಸಿಲಿಕಾನ್ ಸಿಟಿಗೆ ದುಡಿಯಲು ಬಂದಿರುವ ಒಡಿಶಾ ಮೂಲದ ಕಾರ್ಮಿಕರಿಗೆ ಮತ್ತೆ ತಮ್ಮ ರಾಜ್ಯಕ್ಕೆ ಹೋಗಲು ಇಂದು ಚಿಕ್ಕಬಾಣವಾರ ಬಳಿ ರೈಲು ವ್ಯವಸ್ಥೆ ಮಾಡಲಾಗಿತ್ತು. ಹೀಗಾಗಿ ಸಿಟಿಯ ಸುಮಾರು 1200ಜನ ಒಡಿಶಾ ಕಡೆ ಪ್ರಯಾಣ ಬೆಳೆಸಿದ್ರು. ಆದರೆ ಇದೇ ವೇಳೆ ಒಡಿಶಾ ಮೂಲದ ಸೆಕ್ಯುರಿಟಿ ಗಾರ್ಡ್ ಪ್ರತಾಪ್ ಮತ್ತು ಮಗಳು ಪೂಜಾ ಕೂಡ ತಮ್ಮ ವಾಸ ಸ್ಥಳಕ್ಜೆ ತೆರಳಲು ರೈಲ್ವೆ ಟಿಕೆಟ್ ಪಡೆಯಲು ಹಣವಿಲ್ಲದೇ ಪರದಾಡುತ್ತಿದ್ದರು.

ತಕ್ಷಣ ಅಲ್ಲೆ ಭದ್ರತೆಗೆ ನಿಯೋಜನೆ ಹೊಂದಿದ್ದ ಮಾರತ್ ಹಳ್ಳಿ ಠಾಣಾ ಪಿಎಸ್ಐ ಅನಿತಾ ಈ ವಿಚಾರ ಅರಿತು ತಮ್ಮ ಕಿಸೆಯಿಂದ 1600 ರೂ ಹಣ ನೀಡಿ ರೈಲು ಹೊರಡುವ ಕೊನೆ ಕ್ಷಣದಲ್ಲಿ ಟಿಕೆಟ್ ವ್ಯವಸ್ಥೆ ಮಾಡಿ‌ಕೊಟ್ಟಿದ್ದಾರೆ. ಇನ್ನು ಇವರ ಕಾರ್ಯಕ್ಕೆ ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಹಾಗೂ ವೈಟ್ ಫೀಲ್ಡ್ ವಿಭಾಗದ ಅನುಚೇತ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details