ಕರ್ನಾಟಕ

karnataka

ETV Bharat / state

ಅತ್ಯಾಚಾರ ಸಂತ್ರಸ್ತೆಯ ಕುಟುಂಬಕ್ಕೆ‌ ಆರ್ಥಿಕ ಸಹಾಯ ಮಾಡಿ ಮಾನವೀಯತೆ ಮೆರೆದ ಪಿಎಸ್ಐ - ಬೆಂಗಳೂರು ಅತ್ಯಾಚಾರ ಪ್ರಕರಣ

ಮರಣೋತ್ತರ ಪರೀಕ್ಷೆ ಹಾಗೂ ಮೃತದೇಹವನ್ನು ಆ್ಯಂಬುಲೆನ್ಸ್‌ ಮೂಲಕ ಸಾಗಿಸಲು ಹಣದ ಅಭಾವ ಇದ್ದಿದ್ದರಿಂದ ಸಬ್ ಇನ್ಸ್​​ಪೆಕ್ಟರ್​ವೊಬ್ಬರು 14 ಸಾವಿರಕ್ಕೂ ಹೆಚ್ಚು ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.

psi
psi

By

Published : Dec 18, 2020, 8:32 PM IST

ಬೆಂಗಳೂರು:ಅತ್ಯಾಚಾರಕ್ಕೆ‌ ಒಳಗಾಗಿ ಸಾವನ್ನಪ್ಪಿದ ಯುವತಿಯ ಮರಣೋತ್ತರ ಪರೀಕ್ಷೆಗೆ ಶುಲ್ಕ ಭರಿಸಲು ಪರದಾಡುತ್ತಿದ್ದ ಕುಟುಂಬಕ್ಕೆ ಸಹಾಯ ಮಾಡುವ ಮೂಲಕ ಬ್ಯಾಡರಹಳ್ಳಿ ಪೊಲೀಸ್ ಸಬ್ ಇನ್ಸ್​​ಪೆಕ್ಟರ್ ಮಾನವೀಯತೆ ಮೆರೆದಿದ್ದಾರೆ.

ಪಿಎಸ್ಐ ವಸೀಂ‌ ಉಲ್ಲಾ 14 ಸಾವಿರ‌‌ ರೂಪಾಯಿ ನೀಡಿ ಮೃತ ಯುವತಿಯ ಕುಟುಂಬಕ್ಕೆ ಸಹಾಯ‌ ಮಾಡಿದ್ದಾರೆ.

ಇದನ್ನೂ ಓದಿರಿ:ಕಾಲೇಜು ಶುಲ್ಕ ಕಟ್ಟಲು ಬಂದ ಯುವತಿ ಮೇಲೆ ಅತ್ಯಾಚಾರ: ಕೊಲೆ

ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಅನ್ಯ ರಾಜ್ಯದ ಯುವತಿಯನ್ನು ರೂಮ್​ಗೆ ಕರೆಸಿಕೊಂಡು ಸ್ನೇಹಿತನೇ ಆತ್ಯಾಚಾರ ಎಸಗಿದ್ದ. ‌ಈ ವೇಳೆ‌ ಆಕೆ ಸಾವನ್ನಪ್ಪಿದ್ದಳು. ಈ ಸಂಬಂಧ‌ ಆರೋಪಿಯನ್ನು ಬಂಧಿಸಿ ಮೃತ ಯುವತಿಯ ಶವವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿತ್ತು.

ಈ ವೇಳೆ‌ ಪೋಷಕರಿಗೆ ಮರಣೋತ್ತರ ಪರೀಕ್ಷೆ ಹಾಗೂ ಮೃತದೇಹವನ್ನು ಆ್ಯಂಬುಲೆನ್ಸ್‌ ಮೂಲಕ ಸಾಗಿಸಲು ಹಣದ ಅಭಾವ ಇದ್ದಿದ್ದರಿಂದ ಸಬ್ ಇನ್ಸ್​​ಪೆಕ್ಟರ್ ‌ಕರ್ತವ್ಯಕ್ಕೂ ಮೀರಿ 14 ಸಾವಿರಕ್ಕೂ ಹೆಚ್ಚು ಹಣ ನೀಡಿ ಮಾನವೀಯತೆ ಮೆರೆದಿದ್ದಾರೆ.

ABOUT THE AUTHOR

...view details