ಬೆಂಗಳೂರು: ಪ್ರಚೋದನಕಾರಿ ಹೇಳಿಕೆ ನೀಡಿದ ಅರೋಪ ಪ್ರಕರಣ ಸಂಬಂಧ ಇಂದು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಸಂಸದ ಅಸಾದುದ್ದೀನ್ ಒವೈಸಿ ಸಹೋದರ ಶಾಸಕ ಅಕ್ಬರುದ್ದೀನ್ ಒವೈಸಿ ವಿಚಾರಣೆಗೆ ಹಾಜರಾಗಿದ್ದರು.
ಪ್ರಚೋದನಕಾರಿ ಹೇಳಿಕೆ ಆರೋಪ: ವಿಚಾರಣೆಗೆ ಹಾಜರಾದ ಶಾಸಕ ಅಕ್ಬರುದ್ದೀನ್ ಒವೈಸಿ - ಜನಪ್ರತಿನಿಧಿಗಳ ನ್ಯಾಯಾಲಯ
ಪ್ರಚೋದನಕಾರಿ ಘೋಷಣೆ ಕೂಗಿರುವ ಆರೋಪ ಪ್ರಕರಣದ ವಿಚಾರಣೆಗೆ ಶಾಸಕ ಅಕ್ಬರುದ್ದೀನ್ ಓವೈಸಿ ವಿಚಾರಣೆಗೆ ಹಾಜರಾಗಿದ್ದರು.
ಅಕ್ಬರುದ್ದೀನ್ ಒವೈಸಿ
ತೆಲಂಗಾಣದ ಚಂದ್ರಯಾನ್‌ಗುಟ್ಟ ಕ್ಷೇತ್ರದ ಶಾಸಕರಾಗಿರುವ ಅಕ್ಬರುದ್ದೀನ್ ಒವೈಸಿ, 2013ರ ಸೆ. 23ರಂದು ಹುಮ್ನಾಬಾದ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವರ ಬೆಂಬಲಿಗರೊಂದಿಗೆ ಸೇರಿ ಪ್ರಚೋದನಕಾರಿ ಘೋಷಣೆ ಕೂಗಿದ್ದರು ಎನ್ನುವ ಆರೋಪವಿದೆ.
ಪ್ರಚೋದನಕಾರಿ ಘೋಷಣೆ ಕೂಗಿದ ಆರೋಪದಡಿ ಅಕ್ಬರುದ್ದೀನ್ ಸೇರಿದಂತೆ 33 ಜನರ ವಿರುದ್ಧ ಹುಮ್ನಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ನ್ಯಾಯಾಲಯಕ್ಕೆ ಹಾಜರಾಗಿದ್ದರು. ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನ ಸೆ. 16ಕ್ಕೆ ಮುಂದೂಡಿದೆ.