ಕರ್ನಾಟಕ

karnataka

ETV Bharat / state

ಸುಲಭ, ಗುಣಮಟ್ಟ, ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಕಲ್ಪಿಸುವ ಉದ್ದೇಶ: ಸಚಿವ ಸುಧಾಕರ್ - ವೈದ್ಯಕೀಯ ಕಾಲೇಜು ನಿರ್ಮಾಣವಾಗಲಿದೆ

ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ 40ರಷ್ಟು ವೆಚ್ಚ ಭರಿಸುತ್ತಿತ್ತು. ಕೇಂದ್ರದ ಅನುದಾನ ಪ್ರಮಾಣ ಹೆಚ್ಚಳಕ್ಕೆ ಮನವಿ ಮಾಡ್ತೇವೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ ಸೇವೆ ನೀಡಲು ಸಲಹೆ ಬಂದಿದೆ. ಟೆಲಿಮೆಡಿಸಿನ್ ಹೆಚ್ಚು ಬಳಕೆಗೆ ಚಿಂತನೆ ಇದೆ. 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ. ಪಿಪಿಪಿ ಮಾಡೆಲ್‌ನಲ್ಲಿ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಿದರು.

we-have-objective-of-providing-health-care-at-affordable-and-quality-minister-dr-k-sudhakar
ಸಚಿವ ಡಾ.ಕೆ.ಸುಧಾಕರ್

By

Published : Jan 1, 2021, 5:43 PM IST

Updated : Jan 1, 2021, 7:38 PM IST

ಬೆಂಗಳೂರು: ಸುಲಭ, ಗುಣಮಟ್ಟ ಹಾಗೂ ಕೈಗೆಟಕುವ ದರದಲ್ಲಿ ಆರೋಗ್ಯ ಸೇವೆ ಒದಗಿಸುವ ನಿಟ್ಟಿನಲ್ಲಿ ವಿಷನ್ ಗ್ರೂಪ್‌ ಸಲಹೆಗಳನ್ನು ನೀಡಿದ್ದಾರೆ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ವಿಷನ್ ಗ್ರೂಪ್ ಮೊದಲ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಆರೋಗ್ಯ ವಿಷನ್ ಗ್ರೂಪ್ ಮೊದಲ ಸಭೆ ನಡೆಸಿದ್ದೇವೆ. 38 ಪರಿಣಿತರು ಈ ಗ್ರೂಪ್​ನಲ್ಲಿದ್ದಾರೆ. ಇಂದು ಮೂರು ತಾಸುಗಳ ಕಾಲ ನಡೆದ ಸಭೆಯಲ್ಲಿ ಆರೋಗ್ಯ ಕ್ಷೇತ್ರದ ಸಮಗ್ರ ಬದಲಾವಣೆ ಕುರಿತು ಚರ್ಚಿಸಿದ್ದೇವೆ. ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲೂ ಉತ್ತಮ, ಗುಣಮಟ್ಟದ ಕೈಗೆಟುಕುವ ದರದಲ್ಲಿ ಆರೋಗ್ಯ ಸೇವೆ ನೀಡುವುದು ಇದರ ಗುರಿಯಾಗಿದೆ ಎಂದರು.

ಸಚಿವ ಸುಧಾಕರ್ ಸುದ್ದಿಗೋಷ್ಠಿ

ಪ್ರಾಥಮಿಕ‌ ಚಿಕಿತ್ಸಾ ಕೇಂದ್ರಗಳನ್ನು ಮೇಲ್ದರ್ಜೆಗೇರಿಸುವುದು. ರಕ್ತದೊತ್ತಡ, ಕ್ಯಾನ್ಸರ್​ನಿಂದ ಹೆಚ್ಚು ಸಾವು ಸಂಭವಿಸುತ್ತಿದೆ. ಒತ್ತಡದಿಂದಾಗಿ ಜನರು ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ಇದನ್ನು ಬಹುಬೇಗ ಪತ್ತೆ ಹಚ್ಚುವ ನಿಟ್ಟಿನಲ್ಲಿ ಚಿಂತನೆ ಇದೆ. ಲೈಫ್ ಸ್ಟೈಲ್ ಚೇಂಜ್ ನಿಂದಲೂ ರೋಗಗಳು ಬರುತ್ತವೆ. ಅಲೋಪತಿ, ಆಯುಷ್ ನಿಂದ ಇದಕ್ಕೆ ಚಿಕಿತ್ಸೆ ನೀಡಬೇಕು. ಈ ಎಲ್ಲದರ ಬಗ್ಗೆ ವಿಷನ್ ಗ್ರೂಪ್ ಸಲಹೆ ನೀಡಲಿದೆ. ಈ ಗ್ರೂಪ್ ಕಮಿಟಿ ಸಬ್ ಕಮಿಟಿ ಮಾಡಿಕೊಳ್ಳಲಿದೆ. 6 ತಿಂಗಳೊಳಗೆ ಸರ್ಕಾರಕ್ಕೆ ವರದಿ ಸಲ್ಲಿಸಲಿದೆ. ನಂತರ ಸರ್ಕಾರ ಈ ಯೋಜನೆ ಕಾರ್ಯಗತಕ್ಕೆ ತರಲಿದೆ ಎಂದು ವಿವರಿಸಿದರು.

ಮುಂದುವರೆದು ಮಾತನಾಡಿದ ಅವರು,ವೈದ್ಯಕೀಯ ಕಾಲೇಜು ನಿರ್ಮಾಣಕ್ಕೆ ಕೇಂದ್ರ ಸರ್ಕಾರ ಶೇ 60, ರಾಜ್ಯ ಸರ್ಕಾರ ಶೇ 40ರಷ್ಟು ವೆಚ್ಚ ಭರಿಸುತ್ತಿತ್ತು. ಕೇಂದ್ರದ ಅನುದಾನ ಪ್ರಮಾಣ ಹೆಚ್ಚಳಕ್ಕೆ ಮನವಿ ಮಾಡ್ತೇವೆ. ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆಂಬುಲೆನ್ಸ್ ಸೇವೆ ನೀಡಲು ಸಲಹೆ ಬಂದಿದೆ. ಟೆಲಿಮೆಡಿಸಿನ್ ಹೆಚ್ಚು ಬಳಕೆಗೆ ಚಿಂತನೆ ಇದೆ. 9 ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜುಗಳಿಲ್ಲ. ಪಿಪಿಪಿ ಮಾಡೆಲ್‌ನಲ್ಲಿ ನಿರ್ಮಾಣದ ಬಗ್ಗೆ ಚರ್ಚೆ ನಡೆದಿದೆ ಎಂದು ಆರೋಗ್ಯ ಸಚಿವರು ಮಾಹಿತಿ ನೀಡಿದರು.

ಸರ್ಕಾರಿ ಆಸ್ಪತ್ರೆಗಳಲ್ಲಿ ಶುಚಿತ್ವ ಕಾಪಾಡಿಕೊಂಡಿಲ್ಲ. ಕೆಲವು ಆಸ್ಪತ್ರೆಗಳಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದೆ. ಕೆಲವು ಕಡೆ ಮೂಗು ಮುಚ್ಚುವ ಪರಿಸ್ಥಿತಿಯೂ ಇದೆ. ಇದರ ಗುಣಮಟ್ಟವನ್ನು ನಾವು ಸುಧಾರಿಸ್ತೇವೆ ಎಂದು ತಿಳಿಸಿದರು.

Last Updated : Jan 1, 2021, 7:38 PM IST

ABOUT THE AUTHOR

...view details