ಕರ್ನಾಟಕ

karnataka

By ETV Bharat Karnataka Team

Published : Sep 11, 2023, 8:50 PM IST

Updated : Sep 11, 2023, 8:57 PM IST

ETV Bharat / state

ಬೆಂಗಳೂರು ಬಂದ್ ವೇಳೆ ಚಾಲಕರ ಮೇಲೆ ಹಲ್ಲೆ: ದೂರು ನೀಡಿದರೆ ಕ್ರಮ ಎಂದ ಪೊಲೀಸ್ ಕಮೀಷನರ್

ಬೆಂಗಳೂರು ಬಂದ್ ವೇಳೆ ರಾಪಿಡೊ ಹಾಗೂ ಆಟೊ ಚಾಲಕರ ಮೇಲೆ ನಡೆದ ಹಲ್ಲೆ ಸಂಬಂಧ 12 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

protesters-who-attacked-rapido-and-auto-drivers-during-bangalore-bandh-arrested
ಬೆಂಗಳೂರು ಬಂದ್ ವೇಳೆ ಚಾಲಕರ ಮೇಲೆ ಹಲ್ಲೆ: ದೂರು ನೀಡಿದರೆ ಕ್ರಮ ಎಂದ ಪೊಲೀಸ್ ಕಮೀಷನರ್ ದಯಾನಂದ

ನಗರ ಪೊಲೀಸ್ ಆಯುಕ್ತ ದಯಾನಂದ್​

ಬೆಂಗಳೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಖಾಸಗಿ ಸಾರಿಗೆ ಮಾಲೀಕರ ಒಕ್ಕೂಟ ಕರೆ ನೀಡಿದ್ದ ಬೆಂಗಳೂರು ಬಂದ್ ವೇಳೆ ರಾಪಿಡೊ ಹಾಗೂ ಆಟೊ ಚಾಲಕರ ಮೇಲೆ ನಡೆದ ಹಲ್ಲೆಗೆ ಸಂಬಂಧಿಸಿದಂತೆ ದೂರು ನೀಡಿದರೆ ಪ್ರಕರಣ ದಾಖಲಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ತಿಳಿಸಿದ್ದಾರೆ. ಇಂದು ಬಂದ್ ವೇಳೆ ನಗರದ ಕೆಲವೆಡೆ ಬೈಕ್ ಟಾಕ್ಸಿಗಳ ಮೇಲೆ ಹಾಗೂ ಆಟೊ ಚಾಲಕರ ಮೇಲೆ ಪ್ರತಿಭಟನಾಕಾರರು ಹಲ್ಲೆ ನಡೆಸಿ, ಅಲ್ಲದೇ ವಾಹನಗಳನ್ನ ಜಖಂಗೊಳಿಸಿದ್ದರು.

ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಪ್ರತಿಕ್ರಿಯಿಸಿ, ಇಂದು ಖಾಸಗಿ ಸಾರಿಗೆ ಮಾಲೀಕರು ಬೆಂಗಳೂರು ಬಂದ್​ಗೆ ಕರೆ ಕೊಟ್ಡಿದ್ದರು. ಸದ್ಯ ಪ್ರತಿಭಟನೆ ವಾಪಸ್ ಪಡೆದಿದ್ದು, ಇದುವರೆಗೆ ಯಾವುದೇ ಅಹಿತಕರ ಘಟನೆಗಳು ನಡೆದಿಲ್ಲ. ಅವರವರ ಮಧ್ಯೆ ಕೆಲ ಕಡೆ ವಾಗ್ವಾದ ಹಾಗೂ ಗಲಾಟೆ ಹಲ್ಲೆ ನಡೆದಿದೆ. ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ. ಘಟನೆ ಸಂಬಂಧ ದೂರು‌ ನೀಡಿದರೆ ಪ್ರಕರಣ ದಾಖಲಿಸಿಕೊಳ್ಳುತ್ತೇವೆ. ಯಾರೇ ಆಗಲಿ ಏನಾದರೂ ತೊಂದರೆ ಆಗಿದ್ದಲ್ಲಿ ದೂರು ನೀಡಬಹುದು ಎಂದು ಹೇಳಿದರು.

ರಾಪಿಡೊ ಚಾಲಕರ ಮೇಲೆ ಹಲ್ಲೆ:ಬಂದ್ ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ರಾಪಿಡೊ ಚಾಲಕರ ಮೇಲೆ ಆಟೋ ಚಾಲಕರು ಹಲ್ಲೆ ನಡೆಸಿದ್ದರು. ಇನ್ನೂ ಕೆಲವೆಡೆ ಆಟೊ ಸಂಚರಿಸುವುದನ್ನ ಕಂಡು ಆಟೊ ಅಡ್ಡಗಟ್ಟಿ ಟೈರ್​ ಗಾಳಿ ತೆಗೆದು ಹಲ್ಲೆ ನಡೆಸಿದ್ದರು. ಆನಂದ್ ರಾವ್ ಪ್ಲೈ ಓವರ್ ಬಳಿ ಸಂಚರಿಸುತ್ತಿದ್ದ ರಾಪಿಡೊ ಚಾಲಕನ ಮೇಲೆ ಚಾಲಕರು ಹಲ್ಲೆ‌ ‌ನಡೆಸಿದ್ದರು‌‌‌.‌ ಮೌರ್ಯ ವೃತ್ತ ಬಳಿ ವೈಟ್ ಬೋರ್ಡ್​ನಲ್ಲಿ ಪ್ರಯಾಣಿಕರನ್ನು ಕೂರಿಸಿ ಹೋಗುತ್ತಿರುವ ಬಗ್ಗೆ ಅರಿತ‌ ಚಾಲಕರು ಕಾರು ತಡೆದು ಮೊಬೈಲ್ ಕಸಿದು ಗಾಡಿ ಪಂಚ್ಚರ್ ಮಾಡಿ ಕಳುಹಿಸಿದರು. ಇನ್ನೂ ಬಾಣಸವಾಡಿ ಬಳಿ ಬೈಕ್ ಟ್ಯಾಕ್ಸಿ ತಡೆದು ಬೈಕ್ ಜಖಂ ಮಾಡಿದ್ದರು.

12 ಜನರ ಬಂಧನ:ಈ ಸಂಬಂಧ ಪೊಲೀಸ್​ ಪಕ್ರಟಣೆ ಬಿಡುಗಡೆ ಮಾಡಿರುವ ನಗರ ಪೊಲೀಸ್​ ಆಯುಕ್ತರು, ಕೇಂದ್ರ ಹಾಗೂ ಆಗ್ನೇಯದಿಂದ ತಲಾ ಒಂದೊಂದು ಪ್ರಕರಣ ದಾಖಲಾಗಿದ್ದು, ಒಟ್ಟು ಮೂವರನ್ನು ಬಂಧಿಸಲಾಗಿದೆ. ಉತ್ತರ ವಿಭಾಗದಿಂದ ಎರಡು ಪ್ರಕರಣಗಳು ದಾಖಲಾಗಿದ್ದು, ಒಟ್ಟು ಆರು ಮಂದಿಯನ್ನು ಬಂಧಿಸಲಾಗಿದೆ. ಈಶಾನ್ಯ ವಿಭಾಗದಿಂದ ಎರಡು ಪ್ರಕರಣಗಳು ದಾಖಲಾಗಿದ್ದು, ಮೂವರನ್ನು ಬಂಧಿಸಲಾಗಿದೆ. ಪಶ್ಚಿಮ ವಿಭಾಗದಲ್ಲಿ ಏಳು ಪ್ರಕರಣಗಳು ದಾಖಲಾಗಿದ್ದು ಆರೋಪಿಗಳನ್ನು ಬಂಧನಕ್ಕೆ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಒಟ್ಟು 13 ಪ್ರಕರಣಗಳಲ್ಲಿ 12 ಜನರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಖಾಸಗಿ ಸಾರಿಗೆ ಸಂಘಟನೆಗಳ‌ ಒಕ್ಕೂಟದಿಂದ ಬಂದ್​ : ಎರಡು ಬೇಡಿಕೆ ಬಿಟ್ಟು ಉಳಿದೆಲ್ಲಾ ಬೇಡಿಕೆ ಈಡೇರಿಕೆಗೆ ಬದ್ದ.. ಸಚಿವ ರಾಮಲಿಂಗಾರೆಡ್ಡಿ ಭರವಸೆ

Last Updated : Sep 11, 2023, 8:57 PM IST

ABOUT THE AUTHOR

...view details