ಬೆಂಗಳೂರು:ಖಾಸಗಿ ಸಾರಿಗೆ ಸಂಘಟನೆಗಳು ಇಂದು ಸರ್ಕಾರದ ವಿರುದ್ದ ಬಂದ್‌ಗೆ ಕರೆ ನೀಡಿದ್ದು, ರಸ್ತೆಗಿಳಿದ ಕೆಲವು ಆಟೋಗಳು ಮತ್ತು ಕ್ಯಾಬ್ಗಳ ವಿರುದ್ದ ಪ್ರತಿಭಟನಾನಿರತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಂದ್ ನಡುವೆ ಸೇವೆ ಸಲ್ಲಿಸುತ್ತಿರುವ ಕೆಲವು ಆಟೋ, ಕ್ಯಾಬ್, ರ‍್ಯಾಪಿಡೋ ಹಾಗೂ ಟ್ಯಾಕ್ಸಿ ಚಾಲಕರ ಮೇಲೆ ಕೆಲ ಪ್ರತಿಭಟನಾಕಾರರು ಹಲ್ಲೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಸಂಗೊಳ್ಳಿ ರಾಯಣ್ಣ ಫ್ಲೈ ಓವರ್ ಮೇಲೆ ರ‍್ಯಾಪಿಡೋ ಚಾಲಕನನ್ನು ತಡೆದ 10ಕ್ಕೂ ಹೆಚ್ಚು ಪ್ರತಿಭಟನಾಕಾರರ ತಂಡ ಆತನ ದ್ವಿಚಕ್ರ ವಾಹನ ಕೆಳಕ್ಕೆ ಬೀಳಿಸಿ ಹಲ್ಲೆ ನಡೆಸಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಖಾಸಗಿ ಸಾರಿಗೆ ಬಂದ್, ಬೇಡಿಕೆ ಈಡೇರಿಸಲು ಆಗ್ರಹ; ಸರ್ಕಾರದಿಂದ ಹೆಚ್ಚುವರಿ ಬಸ್ ವ್ಯವಸ್ಥೆ
ದಿನದ ಸಂಪಾದನೆ ನಂಬಿಕೊಂಡು ಬದುಕುತ್ತಿದ್ದಾರೆ. ಸಾಲ ಪಡೆದು ಖರೀದಿಸಿರುವ ವಾಹನಗಳ ಇಎಂಐ ಕಟ್ಟಬೇಕಿದೆ ಎಂದು ಕೆಲವು ಚಾಲಕರು ಎಂದಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಂಥವರನ್ನು ಗಮನಿಸಿ ಆಕ್ರೋಶ ವ್ಯಕ್ತಪಡಿಸುತ್ತಿರುವ ಕೆಲ ಪ್ರತಿಭಟನಾಕಾರರು, ಅವರನ್ನು ತಡೆದು ಹಲ್ಲೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಮೌರ್ಯ ಸರ್ಕಲ್‌ನಲ್ಲಿ ಈ ಘಟನೆ ನಡೆಯಿತು. ಚಾಲಕನೊಬ್ಬ ವೈಟ್ ಬೋರ್ಡ್ ಕಾರಲ್ಲಿ ಪ್ರಯಾಣಿಕನನ್ನು ಕರೆದೊಯ್ಯುತ್ತಿದ್ದಾಗ ಅಡ್ಡಗಟ್ಟಿ ಕಾರು ಕೀ ಕಸಿದು, ಚಕ್ರದ ಗಾಳಿ ತೆಗೆದು ಆಕ್ರೋಶ ಹೊರಹಾಕಿದರು.