ಆನೇಕಲ್/ಬೆಂಗಳೂರು :ಸರ್ಜಾಪುರದಲ್ಲಿ ನಡೆದ ರೇಷ್ಮೆ ಬೆಳೆಗಾರರ ಸಹಕಾರ ಸಂಘ ಹಾಗೂ ರೈತರ ಸೇವಾ ಸಹಕಾರ ಸಂಘ ಚುನಾವಣೆ ಗೊಂದಲದ ಗೂಡಾಗಿದೆ ಎಂದು ಪ್ರತಿಭಟನೆ ನಡೆಯಿತು.
ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದ ಚುನಾವಣೆ ಮುಂದೂಡಬೇಕೆಂದು ಆನೇಕಲ್ ಶಾಸಕ ಬಿ. ಶಿವಣ್ಣ ನೇತೃತ್ವದ ಗುಂಪು ಪಟ್ಟು ಹಿಡಿದಿದೆ. ಚುನಾವಣೆಯಲ್ಲಿ ಬಿಜೆಪಿಯ ಕೆಲ ಪ್ರಭಾವಿಗಳು ಉಚ್ಛ ನ್ಯಾಯಾಲಯದಿಂದ 700 ಮತದಾರರನ್ನು ಕಳೆದ 18 ರಂದು ಪಟ್ಟಿಯಲ್ಲಿ ಸೇರಿಸಲು ಆದೇಶ ಮಾಡಲಾಗಿದೆ. ಚುನಾವಣಾಧಿಕಾರಿಗಳಿಗೆ ಆ ಪ್ರತಿಯನ್ನು ಸಲ್ಲಿಸಿ ವಂಚಿಸಿದೆ ಎಂದು ಕಾಂಗ್ರೆಸ್ ಅಭ್ಯರ್ಥಿಗಳು ದೂರಿದ್ದಾರೆ. ಕಳೆದ 18 ರಂದು ಆದೇಶವಾದ ಪ್ರತಿ ಬಗ್ಗೆ ಯಾರಿಗೂ ತಿಳಿಸದೇ ಕೆಲ ಪ್ರಭಾವಿಗಳೇ ಕೋರ್ಟಿನಿಂದ ಪಡೆದು ಮೊದಲೇ ನೀಡುವ ಅಗತ್ಯವೇನಿತ್ತು ಎಂದು ಶಾಸಕ ಬಿ. ಶಿವಣ್ಣ ಪ್ರಶ್ನಿಸಿದ್ದಾರೆ.