ಕರ್ನಾಟಕ

karnataka

ETV Bharat / state

NSUI ನೂತನ ಅಧ್ಯಕ್ಷರ ಬದಲಾವಣೆಗೆ ಆಗ್ರಹ.. ಡಿಕೆಶಿ ನಿವಾಸದೆದುರು ಕಾರ್ಯಕರ್ತರ ಪ್ರತಿಭಟನೆ - ಎನ್​ಎಸ್​ಯುಐ ಕಾರ್ಯಕರ್ತರ ಪ್ರತಿಭಟನೆ

NSUI ನೂತನ ಅಧ್ಯಕ್ಷರನ್ನು ಬದಲಿಸುವಂತೆ ಒತ್ತಾಯಿಸಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್​ ನಿವಾಸದ ಮುಂಭಾಗ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು.

Nsui new president  keerthi ganesha
ಡಿಕೆಶಿ ನಿವಾಸ ಮುಂಭಾಗ ಪ್ರತಿಭಟನೆ

By

Published : Jul 19, 2021, 6:03 PM IST

ಬೆಂಗಳೂರು:NSUI ಅಧ್ಯಕ್ಷರನ್ನು ಬದಲಾಯಿಸುವಂತೆ ಒತ್ತಾಯಿಸಿ ಕಾರ್ಯಕರ್ತರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿವಾಸದ ಮುಂಭಾಗ ಪ್ರತಿಭಟನೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷರ ಸದಾಶಿವನಗರ ನಿವಾಸದ ಮುಂಭಾಗ ಆಗಮಿಸಿದ ಎನ್​ಎಸ್​ಯುಐ ಕಾರ್ಯಕರ್ತರು, ಎನ್​ಎಸ್​ಯುಐ ನೂತನ ಅಧ್ಯಕ್ಷ ಕೀರ್ತಿ ಗಣೇಶ್ ಅವರನ್ನು ಬದಲಾವಣೆ ಮಾಡುವಂತೆ ಘೋಷಣೆ ಕೂಗಿದರು.

ಡಿಕೆಶಿ ನಿವಾಸ ಮುಂಭಾಗ ಪ್ರತಿಭಟನೆ

ಈ ಸಂದರ್ಭ ನಿವಾಸದಲ್ಲಿದ್ದ ಡಿ ಕೆ ಶಿವಕುಮಾರ್ ಹೊರಬಂದು ಘೋಷಣೆ ಕೂಗದಂತೆ ಸೂಚನೆ ನೀಡಿದರು. ಇದಾದ ಬಳಿಕ ಸುಮ್ಮನಾದ ಕಾರ್ಯಕರ್ತರು, ತಮ್ಮ ಬೇಡಿಕೆಯನ್ನು ಡಿಕೆಶಿ ಮುಂದಿಟ್ಟರು. ಕಾರ್ಯಕರ್ತರ ಅಹವಾಲು ಆಲಿಸಿದ ಡಿಕೆಶಿ, ನಾನು ದೆಹಲಿಗೆ ಹೋಗಿ ಬರುತ್ತೇನೆ. ಬಂದ ಬಳಿಕ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ವಿದ್ಯಾರ್ಥಿ ಸಂಘಟನೆಯಾಗಿರುವ ಎನ್​ಎಸ್​ಯುಐನ ನೂತನ ಅಧ್ಯಕ್ಷರನ್ನಾಗಿ ಕೀರ್ತಿ ಗಣೇಶ ಎನ್ ಜಿ ಅವರನ್ನು ಆಯ್ಕೆ ಮಾಡಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ ಸಿ ವೇಣುಗೋಪಾಲ್ ಶುಕ್ರವಾರ ಆದೇಶ ಹೊರಡಿಸಿದ್ದರು. ಎನ್‌ಎಸ್‌ಯುಐ ಕರ್ನಾಟಕ ಘಟಕದ ಅಧ್ಯಕ್ಷ ಸ್ಥಾನಕ್ಕಾಗಿ ಹಲವರು ಪೈಪೋಟಿ ನಡೆಸುತ್ತಿದ್ದರು. ತಿಂಗಳ ಹಿಂದೆಯಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ರಾಜ್ಯ ಎನ್‌ಎಸ್‌ಯುಐ ಅಧ್ಯಕ್ಷ ಸ್ಥಾನಕ್ಕೆ ಕೀರ್ತಿ ಗಣೇಶ್ ಮತ್ತು ಮೂವರು ಕಾರ್ಯಾಧ್ಯಕ್ಷರುಗಳ ಸ್ಥಾನಕ್ಕೆ ಜಯೇಂದರ್ ಶಾಹಿ, ಪ್ರಜ್ವಲ್ ಹಾಗೂ ಪ್ರಖ್ಯಾತ್ ಎನ್.ಪಿ ಹೆಸರನ್ನ ಶಿಫಾರಸು ಮಾಡಿ ಕಳುಹಿಸಿದ್ದರು.

ಇದರ ಆಧಾರದ ಮೇಲೆ ಪಕ್ಷದ ಹೈಕಮಾಂಡ್ ಆದೇಶ ಹೊರಡಿಸಿದೆ. ಆದರೆ ಇದನ್ನು ಖಂಡಿಸಿ ಇಂದು ದಿಢೀರ್ ಪ್ರತಿಭಟನೆ ನಡೆದಿದ್ದು, ಡಿಕೆಶಿ ದಿಲ್ಲಿಯಿಂದ ವಾಪಸಾದ ನಂತರ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.

ABOUT THE AUTHOR

...view details