ಬೆಂಗಳೂರು :ರಾಜ್ಯದ ವಿವಿಧೆಡೆಯಿಂದ ರಾಜಧಾನಿಗೆ ಬಂದಿರುವ ರೈತರು, ಭೂ ಸುಧಾರಣೆ ಕಾಯ್ದೆ, ಎಪಿಎಂಸಿ ಕಾಯ್ದೆ ಹಾಗೂ ವಿದ್ಯುತ್ ಕಾಯ್ದೆ ತಿದ್ದುಪಡಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಪರಿಣಾಮ ಫ್ರೀಡಂ ಪಾರ್ಕ್ ಸುತ್ತಲಿನ ರಸ್ತೆಗಳಲ್ಲಿ ತೀವ್ರ ಟ್ರಾಫಿಕ್ ಜಾಮ್ ಉಂಟಾಗಿದೆ.
ವಿವಿಧ ಜಿಲ್ಲೆಗಳಿಂದ ಟೆಂಪೋ, ಕಾರು, ಬಸ್‌ಗಳ ಮೂಲಕ ಬೆಂಗಳೂರಿಗೆ ಬಂದಿರುವ ರೈತರು, ಸರ್ಕಾರದ ವಿರುದ್ಧ ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಹಿನ್ನೆಲೆ, ಮೆಜೆಸ್ಟಿಕ್, ಆನಂದ್ ರಾವ್ ಸರ್ಕಲ್, ಸಂಗೊಳ್ಳಿ ರಾಯಣ್ಣ ಮೇಲ್ಸೇತುವೆ, ಶೇಷಾದ್ರಿ ರಸ್ತೆಗಳನ್ನು ಬಂದ್ ಮಾಡಲಾಗಿದೆ.