ಕೆ.ಆರ್.ಪುರ(ಬೆಂಗಳೂರು): ರಾಜ್ಯ ಸರ್ಕಾರದ ಗುತ್ತಿಗೆ ಹಾಗೂ ಹೊರ ಗುತ್ತಿಗೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಗುತ್ತಿಗೆ ನೌಕರರ ಪ್ರತಿಭಟನೆ ರಾಜ್ಯ ಆರೋಗ್ಯ, ವೈದ್ಯಕೀಯ, ಶಿಕ್ಷಣ ಇಲಾಖೆ, ರಾಷ್ಟ್ರೀಯ ಆರೋಗ್ಯ ಅಭಿಯಾನದ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರು ಭಾರತೀಯ ಮಜ್ದೂರ್ ಸಂಘದೊಂದಿಗೆ ವಿವಿಧ ಬೇಡಿಕೆಗಳು ಈಡೇರಿಸುಂತೆ ಒತ್ತಾಯಿಸಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿದರು.
ಸರ್ಕಾರದ ಗುತ್ತಿಗೆ ಮತ್ತು ಹೊರ ಗುತ್ತಿಗೆ ನೌಕರರಿಗೆ ಗುತ್ತಿಗೆ ಎಂಬ ಜೀತ ಪದ್ದತಿ ಕೈಬಿಟ್ಟು, ಸೇವಾ ಭತ್ಯೆ, ಸಮಾನ ಕೆಲಸಕ್ಕೆ ಸಮಾನ ವೇತನ, ವಿಮೆ, ಹೆಚ್.ಆರ್ ಪಾಲಿಸಿ, ಪರಿಷ್ಕೃತ ವೇತನ, ವೈದ್ಯಕೀಯ ಸೌಲಭ್ಯ, ಮಹಿಳಾ ಸಿಬ್ಬಂದಿ ಕುಟುಂಬದ ಶಸ್ತ್ರಚಿಕಿತ್ಸೆಗೆ ರಜೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿದರು.
ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರಿಗೆ ಸೇವಾ ಭದ್ರತೆ ನೀಡಿ ಸರ್ಕಾರಿ ನೌಕರರಂತೆ ಖಾಯಂಗೊಳಿಸಬೇಕು. ಕಡಿಮೆ ವೇತನ ಇದ್ದರೂ ಸರ್ಕಾರಿ ಕೆಲಸ ಎಂದು ಬಿಪಿಎಲ್ ಕಾರ್ಡ್ ನೀಡುತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಮೃತಪಟ್ಟ ಗುತ್ತಿಗೆ ಮತ್ತು ಹೊರಗುತ್ತಿಗೆ ನೌಕರರು ಕುಟುಂಬಕ್ಕೆ ಸರ್ಕಾರ ಘೋಷಿಸಿದ ಅಪತ್ತು ಪರಿಹಾರ ಧನ ಇತರ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.