ಕರ್ನಾಟಕ

karnataka

By

Published : Nov 1, 2019, 12:11 PM IST

Updated : Nov 1, 2019, 1:35 PM IST

ETV Bharat / state

ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ ಮಾಡಲು ಬಂದವರು ಸಿಹಿ ತಿನ್ನಿಸಿ ಜಯಘೋಷ ಹಾಕಿದರು!

ಕನ್ನಡ ಧ್ವಜಾರೋಹಣ ಬದಲು ಕೇವಲ ರಾಷ್ಟ್ರ ಧ್ವಜಾರೋಹಣ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಕಾರಣಕ್ಕೆ  ಕನ್ನಡಪರ ಸಂಘಟನೆಗಳ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಆದರೆ ನಾಡ ಧ್ವಜಾರೋಹಣ ನೆರವೇರಿಸಿದ್ದನ್ನು ನೋಡಿ ಪ್ರತಿಭಟಿಸುವ ಬದಲು ಸಿಹಿ ಹಂಚಿ ಜಯಘೋಷ ಕೂಗಿ ತೆರಳಿದರು

ಬಿಜೆಪಿ ಕಚೇರಿ ಮುಂದೆ ಪ್ರತಿಭಟನೆ

ಬೆಂಗಳೂರು: ಕನ್ನಡ ಧ್ವಜಾರೋಹಣ ಬದಲು ಕೇವಲ ರಾಷ್ಟ್ರ ಧ್ವಜಾರೋಹಣ ನಡೆಸಲು ನಿರ್ಧರಿಸಲಾಗಿದೆ ಎನ್ನುವ ಕಾರಣಕ್ಕೆ ಕನ್ನಡಪರ ಸಂಘಟನೆಗಳ ಬಿಜೆಪಿ ಕಚೇರಿಗೆ ಮುತ್ತಿಗೆ ಹಾಕಲು ಆಗಮಿಸಿದ್ದರು. ಆದರೆ ನಾಡ ಧ್ವಜಾರೋಹಣ ನೆರವೇರಿಸಿದ್ದನ್ನು ನೋಡಿ ಪ್ರತಿಭಟಿಸುವ ಬದಲು ಸಿಹಿ ಹಂಚಿ ಜಯಘೋಷ ಕೂಗಿ ತೆರಳಿದರು.

ಪ್ರತಿಭಟನೆ ಮಾಡಲು ಬಂದು ಸಿಹಿ ತಿನ್ನಿಸಿದ ಕನ್ನಡ ಪರ ಹೋರಾಟಗಾರರು!

ನಾಡ ಧ್ವಜಾರೋಹಣ ಮಾಡದಂತೆ ಸರ್ಕಾರ ಆದೇಶ ಹೊರಡಿಸಿ ಕನ್ನಡ ವಿರೋಧಿ ಧೋರಣೆ ಅನುಸರಿಸಿದೆ ಎಂದು ಆರೋಪಿಸಿ ‌ಕೆಲ ಕನ್ನಡ ಪರ ಸಂಘಟನೆಯ ಕಾರ್ಯಕರ್ತರು ಬಿಜೆಪಿ ಕಚೇರಿ ಮುತ್ತಿಗೆ ಯತ್ನ ನಡೆಸಿದರು. ಆದರೆ, ಬಿಜೆಪಿ ಕಚೇರಿ ಮುಂದೆ ಕಾರ್ಯಕರ್ತರನ್ನು ತಡೆದ ಪೊಲೀಸರು ಕಚೇರಿಯೊಳಗೆ ತೆರಳಲು ಪ್ರತಿಭಟನಾಕಾರರಿಗೆ ಅನುಮತಿ ನಿರಾಕರಿಸಿದರು. ಈ ವೇಳೆ ಪೊಲೀಸರು ಮತ್ತು ಕನ್ನಡ ಪರ ಒಕ್ಕೂಟದ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಬಳಿಕ ನಾಡ ಧ್ವಜ ಹಾಗೂ ರಾಷ್ಟ್ರ ಧ್ವಜ ಎರಡನ್ನೂ ಕಂಡು ಪರಸ್ಪರ ಸಿಹಿ ಹಂಚಿ, ಕನ್ನಡಪರ ಜಯ ಘೋಷ ಕೂಗಿದರು.

Last Updated : Nov 1, 2019, 1:35 PM IST

ABOUT THE AUTHOR

...view details