ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ - ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಕಲ್ಪಿಸುವಂತೆ ಪ್ರತಿಭಟನೆ

ವಲಸೆ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳು ಉಲ್ಲಂಘಟನೆಯಾಗುತ್ತಿವೆ. ಸರ್ಕಾರ ರೈಲು ರದ್ದು ಮಾಡುವ ಮೂಲಕ ದೌರ್ಜನ್ಯ ಮಾಡುತ್ತಿದೆ ಎಂದು ಆರೋಪಿಸಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಯಿತು.

Protest in Bangalore
ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

By

Published : May 7, 2020, 8:03 PM IST

ಬೆಂಗಳೂರು: ವಲಸೆ ಕಾರ್ಮಿಕರ ಸಾಂವಿಧಾನಿಕ ಹಕ್ಕುಗಳು ಉಲ್ಲಂಘಟನೆಯಾಗುತ್ತಿವೆ. ಸುರಕ್ಷಿತವಾಗಿ ಊರು ಸೇರಲು ಉಚಿತ ಪ್ರಯಾಣದ ವ್ಯವಸ್ಥೆಗೆ ಒತ್ತಾಯಿಸಿ ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದರು.

ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ
ವಲಸೆ ಕಾರ್ಮಿಕರಿಗೆ ವಾಹನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ಪ್ರತಿಭಟನೆ

ಉತ್ತರ ಪ್ರದೇಶದ ಗೋರಖ್​ಪುರಕ್ಕೆ ನಡೆದುಕೊಂಡೇ ಹೋಗಲು ವಲಸೆ ಕಾರ್ಮಿಕರು ನಿರ್ಧರಿಸಿದ್ದಾರೆ. ಆದರೆ ಪೋಲೀಸರು ಅವರನ್ನು ಬಿಡುತ್ತಿಲ್ಲ. ಊಟ-ವಸತಿಯ ಸೌಲಭ್ಯವಿಲ್ಲದ ಕಾರಣ ಕಂಗೆಟ್ಟು ಊರ ಕಡೆಗೆ ನಡೆಯುತ್ತಿದ್ದಾರೆ. ಹೆಚ್ಚಿನ ಕಾರ್ಮಿಕರು ಕಟ್ಟಡ ನಿರ್ಮಾಣ, ಟೈಲ್ಸ್ ಕೆಲಸಗಳಲ್ಲಿ ತೊಡಗಿದ್ದರು. ಈಗ ಕೆಲಸ ಕೊಟ್ಟರೂ ನಮಗೆ ಕೆಲಸ ಬೇಡ. ಊರಿನ ಕಡೆಗೆ ಹೋಗಬೇಕು. ಇಷ್ಟು ದಿನ ಖಾಲಿ ಹೊಟ್ಟೆಯಲ್ಲಿ ಇದ್ದು ಸಾಕಾಗಿದೆ ಎಂದು ತಮ್ಮ ಅಳಲು ತೋಡಿಕೊಂಡಿದ್ದಾರೆ.

ಮುಖ್ಯಮಂತ್ರಿಗಳು ರಿಯಲ್ ಎಸ್ಟೇಟ್ ಡೆವಲಪರ್ಸ್ ಜೊತೆಗಿನ ಮಾತುಕತೆ ಬಳಿಕ ರೈಲುಗಳನ್ನು ರದ್ದು ಮಾಡಿರುವುದು ಆಘಾತಕಾರಿ ಬೆಳವಣಿಗೆ. ಕಾರ್ಮಿಕರು ಈವರೆಗೆ ವೇತನವಿಲ್ಲದೆ, ದಿನಸಿ ಕಿಟ್ ಸೌಲಭ್ಯ ಎಲ್ಲರಿಗೂ ಸಿಗದೆ ಪರದಾಡಿದ್ದರು. ಸರ್ಕಾರ ಈಗ ರೈಲು ರದ್ದು ಮಾಡುವ ಮೂಲಕ ದೌರ್ಜನ್ಯ ಮಾಡುತ್ತಿದೆ. ಇದು ಕಾರ್ಮಿಕ ನಿಯಮಗಳ ಉಲ್ಲಂಘಟನೆಯಾಗಿದೆ ಎಂದು ನಗರದಲ್ಲಿ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಿದರು.

ABOUT THE AUTHOR

...view details