ಬೆಂಗಳೂರು: ಇಂದಿರಾ ಕ್ಯಾಂಟೀನ್ಗಳನ್ನ ಮುಚ್ಚದಂತೆ ಆಗ್ರಹಿಸಿ ಸರ್ಕಾರದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಇಂದಿರಾ ಕ್ಯಾಂಟೀನ್ ಮುಚ್ಚಬೇಡಿ... ಹೋಳಿಗೆ-ತುಪ್ಪದ ಊಟ ನೀಡಿ ಕರವೇ ಪ್ರತಿಭಟನೆ - Karnataka Rakshana Vedike
ಸರ್ಕಾರ ಇಂದಿರಾ ಕ್ಯಾಂಟೀನ್ ಮುಚ್ಚುವ ನಿರ್ಧಾರವನ್ನು ಈ ಕೂಡಲೇ ಕೈಬಿಡಬೇಕೆಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ಹೋಳಿಗೆ ತುಪ್ಪದ ಊಟ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ಹೋಳಿಗೆ ಊಟ ನೀಡಿ ಕರವೇ ಪ್ರತಿಭಟನೆ
ನಗರದ ನಂದಿನಿ ಲೇಔಟ್ನ ಇಂದಿರಾ ಕ್ಯಾಂಟೀನ್ ಮುಂದೆ ಸಾರ್ವಜನಿಕರಿಗೆ ಉಚಿತವಾಗಿ ಹೋಳಿಗೆ ತುಪ್ಪದ ಊಟ ನೀಡುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು.
ರಾಜ್ಯ ಸರ್ಕಾರದಿಂದ ಇಂದಿರಾ ಕ್ಯಾಂಟೀನ್ಗಳಿಗೆ ಅನುದಾನ ಸಿಗದ ಹಿನ್ನೆಲೆ ಇಂದಿರಾ ಕ್ಯಾಂಟೀನ್ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಸರ್ಕಾರ ಇಂದಿರಾ ಕ್ಯಾಂಟೀನ್ಗಳನ್ನ ನಡೆಸಲು ದುಡ್ಡಿಲ್ಲ ಅನ್ನುತ್ತಿದೆ. ನಿಮ್ಮಿಂದ ಆಗಲ್ಲ ಅಂದ್ರೆ ಹೇಳಿ, ನಾವು ಹಣ ಕೊಡುತ್ತೇವೆ. ಆದರೆ ಇಂದಿರಾ ಕ್ಯಾಂಟೀನ್ನ್ನು ಮುಚ್ಚಬೇಡಿ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.