ಆನೇಕಲ್:ಕಳೆದ ಎಂಟು ತಿಂಗಳಿನಿಂದ ಮಾಸಾಶನಕ್ಕಾಗಿ ಕಾಯುತ್ತಿರುವ ವಿಶೇಷ ಚೇತನರು ತಾಲೂಕಿನ ಚೂಡಸಂದ್ರದಲ್ಲಿ ಬೀದಿಗಿಳಿದು ಹೋರಾಟ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಆನೇಕಲ್: ಮಾಸಾಶನಕ್ಕಾಗಿ ಆಗ್ರಹಿಸಿ ವಿಶೇಷ ಚೇತನರಿಂದ ಪ್ರತಿಭಟನೆ - anekal protest news
ಕಳೆದ ಜನವರಿಯಿಂದ ವಿಶೇಷ ಚೇತನರಿಗೆ ನೀಡಬೇಕಾಗಿರುವ ಮಾಸಾಶನವನ್ನು ನೀಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ನೀವು ನಿಮ್ಮ ಆಧಾರ್ ಕಾರ್ಡ್ ಅಪ್‍ಡೇಟ್ ಮಾಡಿಸಿ, ಮಾಸಾಶನ ಬರುತ್ತದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ಅಪ್‍ಡೇಟ್ ಮಾಡಿಸಿದರೂ ಇತ್ತ ಸರ್ಕಾರ ಮಾತ್ರ ನಿರ್ಲಕ್ಷ್ಯ ವಹಿಸುತ್ತಿದೆ ಎಂದು ವಿಶೇಷ ಚೇತನರು ಆಕ್ರೋಶ ವ್ಯಕ್ತಪಡಿಸಿದರು.
ಕೊರೊನಾ ತಂದಿಟ್ಟ ಸಂಕಷ್ಟಕ್ಕೆ ಸಕಲವೂ ಸೊರಗಿ ಹೋಗಿರುವ ಈ ಸಂದರ್ಭದಲ್ಲಿ ಸರ್ಕಾರಗಳು ಕನಿಷ್ಠ ಸೌಲಭ್ಯ ಒದಗಿಸಲೇಬೇಕಾದವರಿಗೆ ಎಳ್ಳು ನೀರು ಬಿಟ್ಟು ಕೈಚೆಲ್ಲಿ ಕುಳಿತಿವೆ. ಅಂತಹವರಲ್ಲಿ ವಿಶೇಷ ಚೇತನರ ಸಮುದಾಯವೂ ಒಂದು. ಹುಟ್ಟಿನಿಂದಲೇ ಸಮಾಜದ ಸಾಮಾನ್ಯ ಬದುಕಿನಿಂದ ದೂರ ಉಳಿದಿರುವ ನಿರ್ಲಕ್ಷಿತರು. ಸಾಮಾನ್ಯ ಜನರೇ ಲಾಕ್ಡೌನ್ ಸಂದರ್ಭದಲ್ಲಿ ತತ್ತರಿಸಿ ಹೋಗಿದ್ದಾರೆ. ಇನ್ನು ಸರ್ಕಾರದ ಮಾಸಾಶನದಿಂದಲೇ ಜೀವನ ನಡೆಸುತ್ತಿರುವವರಿಗೆ ಮಾಸಾಶನ ಸಿಗದೆ ಅಕ್ಷರಶಃ ಬೀದಿಪಾಲಾಗುವ ಹಂತಕ್ಕೆ ಬಂದಿದ್ದಾರೆ.
ಕಳೆದ ಎಂಟು ತಿಂಗಳಿನಿಂದ ಮಾಸಾಶನಕ್ಕಾಗಿ ಕಾಯುತ್ತಿರುವ ವಿಶೇಷ ಚೇತನರಿಗೆ ಸರ್ಕಾರ ಕಿಂಚಿತ್ತೂ ಗಮನ ಹರಿಸದೆ ಕಣ್ಮುಚ್ಚಿ ಕುಳಿತಿದೆ. ಹಾಗಾಗಿ ಹಣ ಬಿಡುಗಡೆಯಾಗದಿದ್ದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಿದ್ದಾರೆ. ಕಳೆದ ಜನವರಿಯಿಂದ ವಿಶೇಷ ಚೇತನರಿಗೆ ನೀಡಬೇಕಾಗಿರುವ ಮಾಸಾಶನವನ್ನು ನೀಡಿಲ್ಲ. ಅಧಿಕಾರಿಗಳನ್ನು ಕೇಳಿದರೆ ನೀವು ನಿಮ್ಮ ಆಧಾರ್ ಕಾರ್ಡ್ ಅಪ್‍ಡೇಟ್ ಮಾಡಿಸಿ ಮಾಸಾಶನ ಬರುತ್ತದೆ ಎಂಬ ಹಾರಿಕೆ ಉತ್ತರ ನೀಡುತ್ತಿದ್ದಾರೆ. ಆದರೆ ಆಧಾರ್ ಕಾರ್ಡ್ ಅಪ್‍ಡೇಟ್ ಮಾಡಿಸಿದರೂ ಇತ್ತ ಸರ್ಕಾರ ಮಾತ್ರ ಮಾಸಾಶನವನ್ನ ಅಕೌಂಟ್‍ಗೆ ಹಾಕುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.