ಬೆಂಗಳೂರು: ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳ ಪ್ರತಿಭಟನೆಯಿಂದ ಒಂದೇ ದಿನಕ್ಕೆ ಬಾರ್ ಕ್ಲೋಸ್ ಆದ ಘಟನೆ ಯಲಹಂಕ ತಾಲೂಕಿನ ರಾಜನಕುಂಟೆಯ ದಿಬ್ಬೂರು ಗ್ರಾಮದ ಬಳಿ ನಡೆದಿದೆ.
ಬಾರ್ ಮುಚ್ಚುವಂತೆ ವಿದ್ಯಾರ್ಥಿಗಳಿಂದ ಪ್ರತಿಭಟನೆ: ಒಂದೇ ದಿನಕ್ಕೆ ಬಾರ್ ಕ್ಲೋಸ್ ಬುಧವಾರ ಓಪನ್ ಆಗಿದ್ದ ಬಾರ್ನಿಂದ ಪಕ್ಕದಲ್ಲೇ ಇದ್ದ ರೆಸಿಡೆನ್ಸಿ ಯುನಿವರ್ಸಿಟಿ ಕಾಲೇಜು ವಿದ್ಯಾರ್ಥಿಗಳಿಗೆ ಸಾಕಷ್ಟು ತೊಂದರೆಯಾಗಿತ್ತು. ಅಲ್ಲದೇ ಈ ರಸ್ತೆಯಲ್ಲಿ ಸಾಕಷ್ಟು ಅಪಘಾತಗಳು ಸಂಭವಿಸಿವೆ. ಇದರಿಂದ ಬೇಸತ್ತ ಸ್ಥಳೀಯರು ಹಾಗೂ ವಿದ್ಯಾರ್ಥಿಗಳು ಬಾರ್ ಮುಂದೆ ರಸ್ತೆ ತಡೆದು ಪ್ರತಿಭಟನೆ ನಡೆಸಿದ್ರು. ಅಬಕಾರಿ ಇಲಾಖೆಗೆ ಧಿಕ್ಕಾರ ಕೂಗಿದ್ದಲ್ಲದೇ ನ್ಯಾಯ ಸಿಗುವವರೆಗೂ ಹೋರಾಟ ಮಾಡುವುದಾಗಿ ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ಜಾಗ ಕೃಷಿ ಜಮೀನಾಗಿದ್ದು, ನಿಯಮವನ್ನು ಗಾಳಿಗೆ ತೂರಿ ಬಾರ್ ನಿರ್ಮಾಣ ಮಾಡಲಾಗಿದೆ ಎನ್ನುವ ಮಾತು ಕೇಳಿಬಂದಿದೆ. ವಿದ್ಯಾಸಂಸ್ಥೆಯ ಸನಿಹದಲ್ಲಿ ಬಾರ್ ತೆರೆಯುವಂತಿಲ್ಲ. ಅಲ್ಲದೇ ಇದಕ್ಕೆ ಅಬಕಾರಿ ಇಲಾಖೆ ಎನ್ಒಸಿ ಹೇಗೆ ಕೊಟ್ಟಿದೆ. ಇದನ್ನು ತೆರೆಯಲು ಅಧಿಕಾರಿಗಳು ಅನುಮತಿ ನೀಡಿದ್ದಾರೆ. ಇದನ್ನು ಕೂಡಲೇ ಮುಚ್ಚಬೇಕು ಎಂದು ಆಗ್ರಹಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು.
ಇನ್ನು ಪ್ರತಿಭಟನೆ ಸ್ಥಳಕ್ಕೆ ಆಗಮಿಸಿದ ಯಲಹಂಕ ತಹಶಿಲ್ದಾರ್ ರಘು ಮೂರ್ತಿ, ಸ್ಥಳ ಪರಿಶೀಲಿಸಿ ಬಾರ್ ಮಾಲೀಕರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಬಾರ್ ಮುಚ್ಚುವಂತೆ ಹೇಳಿದ್ದಲ್ಲದೆ, ಹೇಳಿ ಸ್ವತಃ ಅವರೇ ನಿಂತು ಬಾರ್ ಮುಚ್ಚಿಸಿದ್ದಾರೆ.