ಕರ್ನಾಟಕ

karnataka

ETV Bharat / state

ನಮ್ಮನ್ನೂ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಿ: ಖಾಸಗಿ ಶಾಲಾ ಶಿಕ್ಷಕರ ಒತ್ತಾಯ - ಖಾಸಗಿ ಶಾಲಾ ಶಿಕ್ಷಕರನ್ನ ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಲು ಒತ್ತಾಯ

ಖಾಸಗಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಂಗಳೂರಿನ ಫ್ರೀಡಂ‌ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಸಿದರು.

Protest by private school teachers
ಖಾಸಗಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ಪ್ರತಿಭಟನೆ

By

Published : Dec 15, 2020, 2:22 PM IST

ಬೆಂಗಳೂರು: ನಗರದ ಫ್ರೀಡಂ‌ ಪಾರ್ಕ್‌ನಲ್ಲಿ ಇಂದು ಖಾಸಗಿ ಶಾಲಾ ಮತ್ತು ಮಕ್ಕಳ ಕಲ್ಯಾಣ ಸಂಘ ಸೇರಿದಂತೆ ಇನ್ನಿರ ಖಾಸಗಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿ ಪ್ರತಿಭಟನೆ ನಡೆಸಿದರು.

ಖಾಸಗಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗಳ ಪ್ರತಿಭಟನೆ

ಶಿಕ್ಷಕರ ಮೂಲಭೂತ ಹಕ್ಕುಗಳಿಗಾಗಿ ಹೋರಾಟದ ಕುರಿತು ಮತ್ತು ಶಾಲೆಗಳನ್ನು ಸ್ಥಗಿತಗೊಳಿಸಿರುವುದರಿಂದ ಖಾಸಗಿ ಶಾಲೆಗಳ ನಿರ್ವಾಹಕರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಪ್ರತಿಭಟನೆಯಲ್ಲಿ ದನಿ ಎತ್ತಿದರು. ಜೊತೆಗೆ, ಶಿಕ್ಷಕರಿಗೆ ಮತ್ತು ಬೋಧಕೇತರ ಸಿಬ್ಬಂದಿಗಳಿಗೆ ಸರ್ಕಾರದ ವತಿಯಿಂದ ವಿಶೇಷ ಪ್ಯಾಕೇಜ್ ಬಿಡುಗಡೆ ಮಾಡಬೇಕು. ಸಂಪೂರ್ಣ ಸುರಕ್ಷತೆ ಮತ್ತು ಮುನ್ನೆಚ್ಚರಿಕೆಗಳೊಂದಿಗೆ ಶಾಲೆಗಳನ್ನು ನಡೆಸಲು ಶಾಲೆಗಳಿಗೆ ಸರಿಯಾದ ಎಸ್.ಓ.ಪಿ ಒದಗಿಸಿ ಶಾಲೆಗಳನ್ನು ತೆರೆಯಲು ಅನಮತಿ ನೀಡಬೇಕೆಂಬ ಒತ್ತಾಯ ಕೇಳಿಬಂತು.

ಇನ್ನು ಶಿಕ್ಷಕರನ್ನು ಕೊರೊನಾ ವಾರಿಯರ್ಸ್​ ಎಂದು ಪರಿಗಣಿಸಬೇಕು. ಕೊರೊನಾ ಲಸಿಕೆಯನ್ನು ಅವರಿಗೆ ಆದ್ಯತೆಯಾಗಿ ನೀಡಬೇಕು. ಖಾಸಗಿ ಶಾಲಾ ಶಿಕ್ಷಕರು ಮತ್ತು ಬೋಧಕೇತರ ಸಿಬ್ಬಂದಿಗೆ ಪ್ರತ್ಯೇಕ ವಿಮಾ ಸೌಲಭ್ಯ ಒದಗಿಸಬೇಕು. ಜೊತೆಗೆ ಕಡ್ಡಾಯವಾಗಿ ಶೈಕ್ಷಣಿಕ ವರ್ಷದ ಪ್ರವೇಶ ಪ್ರಕ್ರಿಯೆಯನ್ನು ಪ್ರತಿ ವಿದ್ಯಾರ್ಥಿಗೆ ನೀಡಬೇಕು. ಹಾಗೂ ಬಡ್ತಿ ಮುಂದುವರೆಸಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.

ಓದಿ: ವಿಧಾನ ಪರಿಷತ್​ನಲ್ಲಿ ಹೈಡ್ರಾಮಾ - ಬಿಜೆಪಿ-ಕಾಂಗ್ರೆಸ್​ ಸದಸ್ಯರ ಮಧ್ಯೆ ಕಿತ್ತಾಟ

For All Latest Updates

ABOUT THE AUTHOR

...view details