ಬೆಂಗಳೂರು: ಖಾಸಗಿ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳು (ರೂಪ್ಸಾ) ಇದೇ 20ರಿಂದ ಶಾಲೆಗಳನ್ನು ಮುಚ್ಚಿ ಆನ್ಲೈನ್ ಕ್ಲಾಸ್ ಬಂದ್ ಮಾಡುವ ನಿರ್ಧಾರ ಕೈಗೊಂಡಿವೆ.
ಸರ್ಕಾರ ಶಾಲೆಗಳನ್ನ ಪುನಾರಂಭಿಸುವ ಸಮಯದಲ್ಲಿ ಶಾಲೆಗಳನ್ನ ಮುಚ್ಚಲು ರೂಪ್ಸಾ ಮುಂದಾಗಿದೆ. ಈಗಾಗಲೇ ಜಿಲ್ಲಾ ಕೇಂದ್ರಗಳಲ್ಲಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಮಾಡಿರುವ ಶಿಕ್ಷಣ ಸಂಸ್ಥೆಗಳು, ಈ ತಿಂಗಳ 10ನೇ ತಾರೀಖಿನವರೆಗೆ ಸರ್ಕಾರಕ್ಕೆ ಗಡುವು ಸಹ ನೀಡಿವೆ. ಇದೀಗ ಅಂತಿಮವಾಗಿ ಶಾಲೆಗಳನ್ನ ಬಂದ್ ಮಾಡಿ ಪ್ರತಿಭಟನೆಗೆ ಇಳಿಯಲು ನಿರ್ಧಾರ ಮಾಡಿವೆ.
ಸರ್ಕಾರದ ಮುಂದೆ ಮಾನ್ಯತೆ ಪಡೆದ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟದ ಬೇಡಿಕೆಗಳೇನು?
- 10-11-2020ರಂದು ಹೊರಡಿಸಿರುವ ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯ.
- ರಾಜ್ಯದಲ್ಲಿ ಇದುವರೆಗೂ ಸ್ವಾಭಾವಿಕ ಬೆಳವಣಿಗೆ ಅಡಿಯಲ್ಲಿ ಸಲ್ಲಿಸಿದ ತಿರಸ್ಕೃತ ಅರ್ಜಿಯನ್ನ ಕೋವಿಡ್-19 ಪರಿಸ್ಥಿತಿಗೆ ಅನುಗುಣವಾಗಿ ಕಾಲಾವಕಾಶ ನೀಡಿ ಅನುಮತಿ.
- 5 ಸಾವಿರ ಶಾಲೆಗಳ ನೋಂದಾವಣೆಗೆ (ರಿನೀವಲ್) ಸಲ್ಲಿಸಿದ ಶಾಲೆಗಳ ಪೆಡ್ಡಿಂಗ್ ಇರುವ ಅರ್ಜಿಗಳನ್ನು ಅದಾಲತ್ ರೂಪದಲ್ಲಿ ಏಕಕಾಲಕ್ಕೆ ವಿಲೇವಾರಿ ಮಾಡಬೇಕು.
- 124 ಶಾಲೆಗಳನ್ನು ಮುಚ್ಚುವ ನಿರ್ಧಾರ ಹಿಂಪಡೆಯಬೇಕು.
- 25 ವರ್ಷಗಳಿಂದ ಅನುದಾನಕ್ಕೆ ಒಳಪಡದೆ ಇದ್ದ ಶಾಲೆಗಳನ್ನ ಅನುದಾನಕ್ಕೆ ಒಳಪಡಿಸಬೇಕು.
- ಇದುವರೆಗೂ ಖಾಸಗಿ ಶಾಲಾ ಶಿಕ್ಷಕರು ಸಂಬಳ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಅವರಿಗೆ ಆರ್ಥಿಕ ಪ್ಯಾಕೇಜ್ ಘೋಷಣೆ ಮಾಡಬೇಕು.
- ಆರ್ಥಿಕ ಸಂಕಷ್ಟದಲ್ಲಿರುವ ಶಾಲೆಗಳ ವಾಹನಗಳ ಸಾಲಗಳ ಮರುಪಾತಿ ಮುಂದೂಡಬೇಕು.
- ಶಾಲೆಗಳ ಕಟ್ಟಡಗಳು ಸುರಕ್ಷತಾ ಪ್ರಮಾಣ ಪತ್ರದ ಅಗತ್ಯತೆಯ ಕುರಿತು ಸುತ್ತೋಲೆ ಮರು ಪರಿಶೀಲನೆಗೆ ಒತ್ತಾಯ.
ಶಿಕ್ಷಣ ಇಲಾಖೆ ಹೊರಡಿಸಿರುವ ಸುತ್ತೋಲೆಯಲ್ಲಿ ಇರುವ ಅಂಶಗಳೇನು?
- ಖಾಸಗಿ ಶಾಲೆಗಳು ಕಟ್ಟಡ ಮಾನದಂಡ ಅಳವಡಿಸಿಕೊಳ್ಳುವ ಬಗ್ಗೆ ಸೂತ್ತೋಲೆ.
- ಸರ್ಕಾರದ ಈ ಸುತ್ತೋಲೆಗೆ ಖಾಸಗಿ ಶಾಲೆಗಳ ಒಕ್ಕೂಟದಿಂದ ಆಕ್ರೋಶ.
- ಶಾಲೆಗಳ ಕಟ್ಟಡ ಮಾನದಂಡದ ಬಗ್ಗೆ ಸುರಕ್ಷತಾ ಪ್ರಮಾಣ ಪತ್ರ ಕಡ್ಡಾಯ.
- ಕೋರ್ಟ್ ತೀರ್ಪಿನ್ವಯ, ಅನುದಾನಿತ ಹಾಗೂ ಖಾಸಗಿ ಶಾಲೆಗಳ ಕಟ್ಟಡ ಹಾಗೂ ಕಟ್ಟಡದ ಗುಣಮಟ್ಟದ ಬಗ್ಗೆ ನ್ಯಾಷನಲ್ ಬಿಲ್ಡಿಂಗ್ ಕೋಡ್ನಲ್ಲಿ ಸರ್ಟಿಫಿಕೇಟ್ ಪಡೆಯುವುದು ಕಡ್ಡಾಯ.
- ಅಗ್ನಿಶಾಮಕ ಇಲಾಖೆಯಿಂದಲೂ ಅಗ್ನಿನಂದಕ ಉಪಕರಣಗಳ ಲಭ್ಯತೆ ಬಗ್ಗೆ ಸರ್ಟಿಫಿಕೇಟ್ ಕಡ್ಡಾಯ.
- ಹೊಸ ಹಾಗೂ ನವೀಕರಣ, ಕಟ್ಟಡದ ಪ್ರಸ್ತುತ ಸ್ಥಿತಿ ಬಗ್ಗೆ ಸರ್ಟಿಫಿಕೇಟ್ ಪಡೆಯೋದು ಕಡ್ಡಾಯ.
- ಸುರಕ್ಷಿತ ಕ್ರಮ ವಹಿಸದ ಶಾಲೆಗಳ ವಿರುದ್ಧ ಸರ್ಕಾರದ ಚಾಟಿ.
- ಸರ್ಟಿಫಿಕೇಟ್ ಇಲ್ದೇ ಇರೋ ಶಾಲೆಗಳ ಅನುಮತಿ ರದ್ದು.