ಬೆಂಗಳೂರು : 25 ತಿಂಗಳ ಬಾಕಿ ಬಿಲ್‌ಗಾಗಿ ಒತ್ತಾಯಿಸಿ ಬಿಬಿಎಂಪಿ ಗುತ್ತಿಗೆದಾರರ ಸಂಘದಿಂದ ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು.
ಬಾಕಿ ಉಳಿದಿರುವ ಬಿಲ್ ಪಾವತಿಸುವಂತೆ ಬಿಬಿಎಂಪಿ ಗುತ್ತಿಗೆದಾರರಿಂದ ಪ್ರತಿಭಟನೆ
ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ನೇತೃತ್ವದಲ್ಲಿ 25 ತಿಂಗಳ ಬಾಕಿ ಬಿಲ್‌ಗಾಗಿ ಒತ್ತಾಯಿಸಿ ಬಿಬಿಎಂಪಿ ಆವರಣದಲ್ಲಿ ಪ್ರತಿಭಟನೆ ನಡೆಸಲಾಯಿತು..
ಗುತ್ತಿಗೆದಾರರಿಂದ ಪ್ರತಿಭಟನೆ
ಬಿಬಿಎಂಪಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆ.ಟಿ. ಮಂಜುನಾಥ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಾಕಿ ಪಾವತಿ ಬಿಡುಗಡೆ ಮಾಡಿ ಎಂದು ಗುತ್ತಿಗೆ ಕಾರ್ಮಿಕರು ಒತ್ತಾಯಿಸಿ ಬಿಬಿಎಂಪಿ ಅಧಿಕಾರಿಗಳು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಗುತ್ತಿಗೆ ಕಾರ್ಮಿಕರು ಭ್ರಷ್ಟ ಬಿಬಿಎಂಪಿ ಅಧಿಕಾರಿಗಳಿಗೆ ಧಿಕ್ಕಾರ, ನಮ್ಮ ಹಣ ನಮಗೆ ಕೊಡಿ, ಬೇಕೇ ಬೇಕು ನ್ಯಾಯ ಬೇಕು ಎಂದು ಘೋಷಣೆ ಕೂಗಿ ಬಾಕಿ ಉಳಿದಿರುವ ಬಿಲ್ನ ಪಾವತಿಸುವಂತೆ ಗುತ್ತಿಗೆ ಕಾರ್ಮಿಕರು ಆಗ್ರಹಿಸಿದರು.