ಕರ್ನಾಟಕ

karnataka

ETV Bharat / state

"ಬೃಹತ್ ಬೆಂಗಳೂರಿನ ಬೃಹತ್ ಭ್ರಷ್ಟಾಚಾರದ ಸ್ಮಾರಕಗಳು": ಆಮ್​​ಆದ್ಮಿ ಪಕ್ಷದಿಂದ ವಿನೂತನ ಪ್ರತಿಭಟನೆ - ಆಮ್ ಆದ್ಮಿ ಪಕ್ಷ

ಬೆಂಗಳೂರು ನಗರದಾದ್ಯಂತ ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಆಗ್ರಹಿಸಿ "ಬೃಹತ್ ಬೆಂಗಳೂರಿನ ಬೃಹತ್ ಭ್ರಷ್ಟಾಚಾರದ ಸ್ಮಾರಕಗಳು" ಎನ್ನುವ ವಿನೂತನ ಪ್ರತಿಭಟನೆಯನ್ನು ಆಮ್ ಆದ್ಮಿ ಪಕ್ಷದಿಂದ ಡಿ. 18 ರಂದು ಹಮ್ಮಿಕೊಳ್ಳಲಾಗಿದೆ.

Bangalore
ಆಮ್​ ಆದ್ಮಿ ಪಕ್ಷದ ಮುಖಂಡ ಡಾ.ರಾಧಾಕೃಷ್ಣ

By

Published : Dec 16, 2020, 6:12 PM IST

ಬೆಂಗಳೂರು: ನಗರದಾದ್ಯಂತ ಅರ್ಧಕ್ಕೆ ನಿಂತ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಮುಗಿಸುವಂತೆ ಆಗ್ರಹಿಸಿ "ಬೃಹತ್ ಬೆಂಗಳೂರಿನ ಬೃಹತ್ ಭ್ರಷ್ಟಾಚಾರದ ಸ್ಮಾರಕಗಳು" ಎನ್ನುವ ವಿನೂತನ ಪ್ರತಿಭಟನೆಯನ್ನು ಆಮ್ ಆದ್ಮಿ ಪಕ್ಷದಿಂದ ಡಿ. 18 ರಂದು ಹಮ್ಮಿಕೊಳ್ಳಲಾಗಿದೆ ಎಂದು ಆಮ್​ ಆದ್ಮಿ ಪಕ್ಷದ ಮುಖಂಡ ಡಾ.ರಾಧಾಕೃಷ್ಣ ಹೇಳಿದರು.

ಆಮ್​ ಆದ್ಮಿ ಪಕ್ಷದ ಮುಖಂಡ ಡಾ.ರಾಧಾಕೃಷ್ಣ ಪ್ರತಿಕ್ರಿಯೆ

ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋರಮಂಗಲ 100 ಅಡಿ ಮುಖ್ಯರಸ್ತೆಯಿಂದ ಈಜೀಪುರ ಮುಖ್ಯರಸ್ತೆ - ಒಳವರ್ತುಲ ರಸ್ತೆ ಜಂಕ್ಷನ್​ನಿಂದ ಕೇಂದ್ರಿಯ ಸದನ ಜಂಕ್ಷನ್​​​​ವರೆಗೆ ನಿರ್ಮಾಣ ಮಾಡುತ್ತಿರುವ ಮೇಲ್ಸೇತುವೆ ಕಾಮಗಾರಿ ಕಳೆದ 4 ವರ್ಷಗಳಿಂದ ನನೆಗುದಿಗೆ ಬಿದ್ದಿದೆ. ಕಾಮಗಾರಿಯನ್ನು ಶೀಘ್ರ ಮುಗಿಸುವಂತೆ ಒತ್ತಾಯಿಸಿ ಕೋರಮಂಗಲ ನಿವಾಸಿಗಳ ಜೊತೆಗೂಡಿ ಡಿ. 18 ರಂದು ಬೆಳಗ್ಗೆ 11 ಗಂಟೆಗೆ ಕೋರಮಂಗಲದ ಸೋನಿ ವರ್ಲ್ಡ್ ಸರ್ಕಲ್ ಬಳಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಡಾ. ರಾಧಾಕೃಷ್ಣ ತಿಳಿಸಿದರು.

ಈಗಾಗಲೇ ಶಿವಾನಂದ ಸರ್ಕಲ್ ಮೇಲ್ಸೇತುವೆ ಕಾಮಗಾರಿ ವಿಳಂಬ ಖಂಡಿಸಿ ಪ್ರತಿಭಟನೆ ಮಾಡಿದ್ದ ಎಎಪಿ ಬೆಂಗಳೂರಿನ ತುಂಬಾ ಎಲ್ಲೆಲ್ಲಿ ಇಂತಹ ಸರ್ಕಾರಿ ನಿರ್ಮಿತ ಭ್ರಷ್ಟಾಚಾರದ ಸ್ಮಾರಕಗಳು ಇವೆ ಎಂಬುದನ್ನು ಸರಣಿ ಪ್ರತಿಭಟನೆಗಳ ಮೂಲಕ ಜನರ ಗಮನಕ್ಕೆ ತರಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ "ಬೃಹತ್ ಭ್ರಷ್ಟಾಚಾರ ಸ್ಮಾರಕಗಳ ನಗರ" ಎಂದು ಹೊಸದಾಗಿ ನಾಮಕರಣ ಮಾಡಲಾಗುವುದು ಎಂದರು.

ರಾಜ್ಯ ರಾಜಧಾನಿ ಬೆಂಗಳೂರಿನ ತುಂಬಾ ಅರ್ಧಕ್ಕೆ ನಿಂತ ಮೇಲ್ಸೇತುವೆ ಕಾಮಗಾರಿ, ರಸ್ತೆ, ಚರಂಡಿ, ಪಾದಚಾರಿ ಮಾರ್ಗ, ಮಳೆ ನೀರು ಕಾಲುವೆ, ರಾಜಕಾಲುವೆ ತಡೆ ಗೋಡೆಗಳು, ಕಟ್ಟಡಗಳೇ ತುಂಬಿ ಕೊಂಡಿವೆ. ಇವುಗಳನ್ನು ಸರ್ಕಾರಿ ನಿರ್ಮಿತ ಆಧುನಿಕ ಸ್ಮಾರಕಗಳನ್ನಾಗಿ ಉಳಿಸಿಕೊಂಡಿರುವ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಚುರುಕು ಮುಟ್ಟಿಸುವ ಸಲುವಾಗಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು.

ಕಳೆದ ಹತ್ತು ವರ್ಷಗಳಲ್ಲಿ ನೂರಾರು ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ ಅವುಗಳನ್ನು ಅರ್ಧಕ್ಕೆ ನಿಲ್ಲಿಸಿ ಜನರ ದುಡ್ಡನ್ನು ಖರ್ಚು ಮಾಡಿ ನಗರವನ್ನು ನರಕ ಮಾಡಲಾಗಿದೆ. ಕಾಮಗಾರಿಗಳನ್ನು ಸಕಾಲಕ್ಕೆ ಮುಗಿಸದೇ ಜನಸಾಮಾನ್ಯರು ನಲುಗುವಂತೆ ಮಾಡಲಾಗಿದೆ. ಎಲ್ಲ ಕಾಮಗಾರಿಗಳ ವೆಚ್ಚವನ್ನು ವರ್ಷದಿಂದ ವರ್ಷಕ್ಕೆ ದುಪ್ಪಟ್ಟು ಮಾಡುತ್ತಾ ತೆರಿಗೆ ದುಡ್ಡನ್ನು ಕಬಳಿಸಲಾಗುತ್ತಿದೆ ಎಂದು ಆರೋಪಿಸಿದರು.

ABOUT THE AUTHOR

...view details