ಕರ್ನಾಟಕ

karnataka

ETV Bharat / state

ವಲಸೆ ಕಾರ್ಮಿಕರ ಗಲಾಟೆ, ಗಡಿಯಲ್ಲಿ ಗಡಿಬಿಡಿ: ಹೈರಾಣಾದ ಅತ್ತಿಬೆಲೆ ಪೊಲೀಸರು - ವಲಸೆ ಕಾರ್ಮಿಕರು

ಗಾಯದ ಮೇಲೆ ಬರೆ ಎಳೆದ ಹಾಗೆ ವಲಸೆ ಕಾರ್ಮಿಕರನ್ನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಮೈಗ್ರೆಂಟ್ಸ್ ಪಟ್ಟಿ ಮಾಡಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲು ಸೂಚಿಸಿದೆ. ಅತ್ತ ಕನ್ನಡ ಬರದ ಕಾರ್ಮಿಕರು ಇತ್ತ ಹಿಂದಿ ಬರದ ಪೊಲೀಸರು ವಲಸಿಗರನ್ನು ಹದ್ದುಬಸ್ತಿನಲ್ಲಿಡುವ ಸಂಕಷ್ಟ ಎದುರಿಸುತ್ತಿದ್ದಾರೆ.

Migrant workers
ವಲಸೆ ಕಾರ್ಮಿಕರು

By

Published : May 11, 2020, 1:15 PM IST

ಆನೇಕಲ್:ಸರ್ಕಾರ ಅಂತರರಾಜ್ಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣಿಡಲು ಗಡಿ ಪೊಲೀಸ್ ಠಾಣೆಗಳಿಗೆ ಆದೇಶ ಹೊರಡಿಸಿದೆ. ಈ ಸೇವೆಯಲ್ಲಿ ಅತ್ತಿಬೆಲೆ ಗಡಿಯಲ್ಲಿ ಕನಿಷ್ಠ ಸಿಬ್ಬಂದಿಯನ್ನಿಟ್ಟು ನಿಭಾಯಿಸಲು ಪರದಾಡುತ್ತಿದ್ದಾರೆ.

ಅತ್ತಿಬೆಲೆ ಠಾಣೆ ಮುಂದೆ ವಲಸೆ ಕಾರ್ಮಿಕರ ಗಲಾಟೆ

ಇದರ ಬೆನ್ನಲ್ಲೇ ಗಾಯದ ಮೇಲೆ ಬರೆ ಎಳೆದ ಹಾಗೆ ವಲಸೆ ಕಾರ್ಮಿಕರನ್ನ ಅತ್ತಿಬೆಲೆ ಪೊಲೀಸ್ ಠಾಣೆ ವ್ಯಾಪ್ತಿಯ ಮೈಗ್ರೆಂಟ್ಸ್ ಪಟ್ಟಿ ಮಾಡಿ ಅವರವರ ರಾಜ್ಯಗಳಿಗೆ ಕಳುಹಿಸಿಕೊಡಲು ಸೂಚಿಸಿದೆ. ಅತ್ತ ಕನ್ನಡ ಬರದ ಕಾರ್ಮಿಕರು ಇತ್ತ ಹಿಂದಿ ಬರದ ಪೊಲೀಸರು ವಲಸಿಗರನ್ನು ಹದ್ದುಬಸ್ತಿನಲ್ಲಿಡುವ ಸಂಕಷ್ಟ ಎದುರಿಸುತ್ತಿದ್ದಾರೆ.

ಅತ್ತಿಬೆಲೆ ಪೊಲೀಸ್ ವ್ಯಾಪ್ತಿಯಾಚೆಯ ಸೂರ್ಯಸಿಟಿ, ಎಲೆಕ್ಟ್ರಾನಿಕ್​ ಸಿಟಿ ಹಾಗೂ ತಮಿಳುನಾಡಿನ ಸಿಪ್ಕಾಟ್ ಪಿಕೀಸ್ ಠಾಣಾ ವ್ಯಾಪ್ತಿಯ ನೂರಾರು ಕಾರ್ಮಿಕರು ಅತ್ತಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಜಮಾಯಿಸಿ ಅರಚಾಟ, ಕಿರಚಾಟ ನಡೆಸಿ ಗದ್ದಲ ಎಬ್ಬಿಸುತ್ತಿದ್ದಾರೆ. ಇದು ಇಲ್ಲಿನ ಪೊಲೀಸರಿಗೆ ತಲೆನೋವಾಗಿದೆ.

ABOUT THE AUTHOR

...view details