ಕರ್ನಾಟಕ

karnataka

ETV Bharat / state

ಪ್ರಜಾ ಪ್ರಭುತ್ವ ವಿರೋಧಿ ಪೌರತ್ವ ಕಾಯಿದೆ ಖಂಡಿಸಿ ಆನೆಕಲ್​ನಲ್ಲಿ ಪ್ರತಿಭಟನೆ - ಆನೇಕಲ್​ನಲ್ಲಿ ಪ್ರತಿಭಟನೆ

ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಐಕ್ಯತಾ ವೇದಿಕೆಯ ಸಂಘಟಕರು ಆನೇಕಲ್​ನಲ್ಲಿ ಪ್ರತಿಭಟನೆ ನಡೆಸಿದ್ದಾರೆ.

protest
ಪ್ರತಿಭಟನೆ

By

Published : Dec 18, 2019, 7:01 AM IST

ಆನೇಕಲ್: ಕೇಂದ್ರ ಸರ್ಕಾರದ ಪೌರತ್ವ ಕಾಯ್ದೆಯನ್ನು ವಿರೋಧಿಸಿ ಐಕ್ಯತಾ ವೇದಿಕೆಯ ಸಂಘಟಕರು ಆನೇಕಲ್​ನಲ್ಲಿ ಪ್ರತಿಭಟನೆ ನಡೆಸಿದರು.

ಪೌರತ್ವ ಕಾಯಿದೆ ಖಂಡಿಸಿ ಆನೆಕಲ್​ನಲ್ಲಿ ಪ್ರತಿಭಟನೆ

ಆನೇಕಲ್ ಪಟ್ಟಣದ ಡಾ ಬಿ.ಆರ್ ಅಂಬೇಡ್ಕರ್ ಗ್ರಂಥಾಲಯದಿಂದ ಪ್ರತಿಭಟನಾ ಮೆರವಣಿಗೆ ಹೊರಟ ಐಕ್ಯತಾ ವೇದಿಕೆಯ ಸಂಘಟಕರು ಮಹಾತ್ಮಾ ಗಾಂಧಿ ವೃತ್ತದಲ್ಲಿ ಸಮಾವೇಶಗೊಂಡರು. ತಮಿಳುನಾಡಿನ ಸಂಘಟಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು.

ಪ್ರತಿಭಟನಾ ಮೆರವಣಿಗೆಯಲ್ಲಿ ಪೌರತ್ವ ಕಾಯಿದೆ ಜಾರಿ ಖಂಡಿಸಿ ಧಿಕ್ಕಾರ ಕೂಗಿದರು.‌ ದೆಹಲಿಯಲ್ಲಿ ಪೊಲೀಸರು ಅಲಿಘರ್​ ವಿದ್ಯಾನಿಲಯದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿರುವುದನ್ನು ಖಂಡಿಸಿ, ಇದರಲ್ಲಿ ಆರ್​ಎಸ್​ಎಸ್​ ಅವರ ಕೈವಾಡವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ ಕರ್ನಾಟಕದ ಸಾರಾ ಮಹೇಶ್ ದಲಿತರ ಮೇಲೆರಗಿರುವುದಕ್ಕೆ ತೀವೃ ವಿರೋಧ ವ್ಯಕ್ತಪಡಿಸಿದ ಸಂಘಟಕರು ಇದು ಕೊನೆಯಾಗದಿದ್ದರೆ ಸಾರಾ ಮಹೇಶ್​ ಅವರನ್ನು ಎದುರಿಸಲು ಯುವಕರ ದಂಡು ಸಿದ್ದವಿದೆ ಎಂದು ಎಚ್ಚರಿಸಿದರು.

ABOUT THE AUTHOR

...view details