ಬೆಂಗಳೂರು:ಅನರ್ಹ ಶಾಸಕ ಎಂಟಿಬಿ ನಾಗರಾಜ್ ಕ್ಷೇತ್ರವಾದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯಲ್ಲಿ ಮಾಜಿ ಸಚಿವ ಕೃಷ್ಣಬೈರೇಗೌಡರು ಸಭೆ ನಡೆಸಿ ಸೆಪ್ಟೆಂಬರ್ 21 ರಂದು ರ‍್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ.
ಎಂಟಿಬಿ ನಾಗರಾಜ್ ವಿರುದ್ಧ ಕಾಂಗ್ರೆಸ್ನಿಂದ ಸೆಪ್ಟೆಂಬರ್ 21ರಂದು ಪ್ರತಿಭಟನಾ ರ‍್ಯಾಲಿ.. - Protest aganist MTB Nagaraj by Congress
ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಪ್ರತಿಭಟನೆ ನಡೆಸಲು ಕಾಂಗ್ರೆಸ್ ನಿರ್ಧರಿಸಿದ್ದು, ಸೆಪ್ಟಂಬರ್ 21ರಂದು ಮಾಜಿ ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ಧರಣಿ ನಡೆಯಲಿದೆ.
ಮಾಜಿ ಸಚಿವ ಕೃಷ್ಣಬೈರೆಗೌಡ
ಹೊಸಕೋಟೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕ್ಷೇತ್ರದ ಕಾಂಗ್ರೆಸ್ ಮುಖಂಡರೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ರು. ಈ ತಿಂಗಳ 21ರಂದು ಹೊಸಕೋಟೆ ಪಟ್ಟಣದಲ್ಲಿ ಎಂಟಿಬಿ ನಾಗರಾಜ್ ವಿರುದ್ಧ ಪ್ರತಿಭಟನಾ ರ‍್ಯಾಲಿ ನಡೆಸಲು ತೀರ್ಮಾನಿಸಿದ್ದಾರೆ.
ಅನರ್ಹ ಶಾಸಕ ಎಂಟಿಬಿ ನಾಗರಾಜ್ ವಿರುದ್ಧ ಮೊದಲು ಸೆಪ್ಟೆಂಬರ್ 17ರಂದು ರ‍್ಯಾಲಿ ಮಾಡಲು ನಿರ್ಧರಿಸಿದ್ರು. ಆದರೆ, ಇವತ್ತು ಡಿಕೆಶಿ ಜಾಮೀನು ಅರ್ಜಿಯ ತೀರ್ಪು ಹೊರಬೀಳುವ ಕಾರಣ ಅದನ್ನ 21ಕ್ಕೆ ಮುಂದೂಡಿರುವುದಾಗಿ ಕೃಷ್ಣಬೈರೇಗೌಡ ಅವರು ಸಭೆ ಬಳಿಕ ಮಾಧ್ಯಮದವರಿಗೆ ತಿಳಿಸಿದ್ದಾರೆ.