ಕರ್ನಾಟಕ

karnataka

ETV Bharat / state

ಕಾಶ್ಮೀರ ವಿವಾದ ಸಂಬಂಧ ಪ್ರತಿಭಟನೆ ವೇಳೆ ಗದ್ದಲ: ಪೊಲೀಸರ ಮಧ್ಯಪ್ರವೇಶ - 370 ಮತ್ತು 35ಎ ರದ್ದು ಖಂಡಿಸಿ ಪ್ರತಿಭಟನೆ

ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ಮತ್ತು 35ಎ ರದ್ದು ಮಾಡಿರುವುದನ್ನ ಖಂಡಿಸಿ ನಗರದ ಟೌನ್ ಹಾಲ್ ಎದುರು ಪ್ರತಿಭಟನೆ ಮಾಡಲಾಯಿತು.

ಆರ್ಟಿಕಲ್ 370 ಮತ್ತು 35ಎ ರದ್ದು ಖಂಡಿಸಿ ಪ್ರತಿಭಟನೆ

By

Published : Aug 6, 2019, 4:10 AM IST

ಬೆಂಗಳೂರು:ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ ಆರ್ಟಿಕಲ್ 370 ಮತ್ತು 35ಎ ರದ್ದು ಮಾಡಿರುವುದನ್ನ ಖಂಡಿಸಿ ನಗರದ ಟೌನ್ ಹಾಲ್ ಎದುರು ಪ್ರತಿಭಟನೆ ಮಾಡಲಾಯಿತು.

ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ರದ್ದು ಮಾಡಿದ ಹಿನ್ನೆಲೆಯಲ್ಲಿ ನಗರದ ಟೌನ್ ಹಾಲ್ ಎದುರು ಆರ್ಟಿಕಲ್ 370 ರದ್ದು ವಿರೋಧಿಸಿ ಕೆಲ ಹೋರಾಟಗಾರರು ಪ್ರತಿಭಟನೆ ನಡೆಸಿ, ಬಿಜೆಪಿ ಸರ್ಕಾರ ಪಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದೆ ಎಂದು ಘೋಷಣೆ ಕೂಗಿದರು.

ಆರ್ಟಿಕಲ್ 370 ಮತ್ತು 35ಎ ರದ್ದು ಖಂಡಿಸಿ ಪ್ರತಿಭಟನೆ

ಈ ನಿರ್ಧಾರ ಕೈಗೊಳ್ಳಲುವ ಮುನ್ನ ಅಲ್ಲಿನ ಸ್ಥಳೀಯ ಜನರ ಜೊತೆ ಚರ್ಚೆ ನಡೆಸಿ ಸಾಧಕ ಬಾಧಕಗಳ ಬಗ್ಗೆ ಚಿಂತಿಸಬೇಕಿತ್ತು, ಆದರೆ ಕೇಂದ್ರ ಸರ್ಕಾರ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಎಂದರು.

ನಾವು ಸದಾ ಕಾಶ್ಮೀರದ ಬೆಂಬಲಕ್ಕೆ ನಿಲ್ಲುತ್ತೇವೆ ಎಂಬ ಘೋಷ ವಾಕ್ಯಗಳು ಸದ್ಯ ಪರ ವಿರೋಧ ಚರ್ಚೆಗಳಿಗೆ ಕಾರಣವಾಗಿದೆ. ಈ ಹೋರಾಟದ ಮಧ್ಯೆ ಬಿಜೆಪಿ ಪರವಾಗಿ ಮೋದಿಗೆ ಜೈಕಾರ ಹಾಕಿದ ಇನ್ನೊಂದು ತಂಡ ಪ್ರವೇಶ ಪಡೆದು ಕೆಲ ಸಮಯಗಳ ಕಾಲ ಗದ್ದಲ ಉಂಟಾಗಿದ್ದು ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ABOUT THE AUTHOR

...view details