ಕರ್ನಾಟಕ

karnataka

ETV Bharat / state

ಮಂತ್ರಿ ಡೆವಲಪರ್ಸ್ ವಿರುದ್ಧ ಪ್ರತಿಭಟನೆ - undefined

ಮಂತ್ರಿ ಡೆವಲಪರ್ಸ್ ಬಿಲ್ಡರ್ಸ್ ಕಂಪನಿಗಳಿಂದ ಮೋಸ ಆಗಿದೆ ಎಂದು ಆರೋಪಿಸಿ ಸಂತ್ರಸ್ತರು ನಮ್ಮ ಬೆಂಗಳೂರು, ಯೂನೈಟೆಡ್ ಬೆಂಗಳೂರು ಸದಸ್ಯರು ಒಗ್ಗೂಡಿ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಪ್ರತಿಭಟನೆ

By

Published : May 18, 2019, 11:05 PM IST

ಬೆಂಗಳೂರು: ಮಂತ್ರಿ ಡೆವಲಪರ್ಸ್ ಬಿಲ್ಡರ್ಸ್ ಕಂಪನಿಗಳಿಂದ ಮೋಸ ಆಗಿದೆ ಎಂದು ಆರೋಪಿಸಿ ಸಂತ್ರಸ್ತರು ನಮ್ಮ ಬೆಂಗಳೂರು, ಯೂನೈಟೆಡ್ ಬೆಂಗಳೂರು ಸದಸ್ಯರು ಒಗ್ಗೂಡಿ ನಗರದ ಟೌನ್ ಹಾಲ್ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದರು.

ಮಂತ್ರಿ ಡೆವಲಪರ್ಸ್ ವಿರುದ್ಧ ಪ್ರತಿಭಟನೆ

ಮಂತ್ರಿ ಡೆವಲಪರ್ಸ್​ನ, ಮಂತ್ರಿ ವೆಬ್ ಸಿಟಿ ಎನ್ನುವ ಪ್ರಾಜೆಕ್ಟ್​ನಿಂದ ಮೋಸಗೊಂಡವರು ಪ್ರತಿಭಟನೆ ನಡೆಸಿದರು. ಈ ಪ್ರಾಜೆಕ್ಟ್ ಆರು ವರ್ಷ ಹಿಂದೆಯೇ ಕಂಪ್ಲೀಟ್ ಆಗಬೇಕಿತ್ತು. ಆದ್ರೆ ಇದನ್ನು ನಂಬಿ ಸಾಲ ತಗೊಂಡವರು, ಸಾಲ ಕಟ್ಟಲೂ ಆಗದೆ ಸದ್ಯ ಇರುವ ಮನೆಯ ಬಾಡಿಗೆಯನ್ನೂ ಕಟ್ಟಿಕೊಂಡು ತೊಂದರೆ ಅನುಭವಿಸುತ್ತಿದ್ದಾರಂತೆ.

ಅಲ್ಲದೆ ಕೋರ್ಟ್​ನಲ್ಲಿ ಬಂದಿರುವ ರೇರಾ ಜಡ್ಜ್​​ಮೆಂಟ್​​​ಗಳನ್ನೂ ಮಂತ್ರಿ ಡೆವಲಪರ್ಸ್ ಕ್ಯಾರೆ ಎನ್ನುತ್ತಿಲ್ಲ. ಕೋರ್ಟ್​ನಲ್ಲಿ 120 ಕೇಸ್​ಗಳಿವೆ. ಅರವತ್ತು ಜಡ್ಜ್​ಮೆಂಟ್​ಗಳು ಗ್ರಾಹಕರ ಪರವಾಗಿ ಬಂದಿವೆ. ಆದರೂ ದುಡ್ಡೂ ವಾಪಾಸ್ ಕೊಡದೆ, ಜನರಿಗೆ ಸರಿಯಾದ ಮನೆ ಕೊಡಲೂ ಮುಂದಾಗುತ್ತಿಲ್ಲ. ಇನ್ನು ಕೊಟ್ಟ ಮನೆಗಳಲ್ಲೂ ಮೂಲ ಸೌಕರ್ಯ ಕೊರತೆಗಳಿವೆ. ಅನ್ಯಾಯ ಪ್ರಶ್ನಿಸಲು ಯಾರೂ ಕೈಗೆ ಸಿಗುತ್ತಿಲ್ಲ. ಎಲ್ಲರೂ ಫಾರಿನ್​ನಲ್ಲಿ ಓಡಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಇನ್ನೆಷ್ಟೋ ಜನರು ಕಾಯಿಲೆಯಿಂದ ಬಳಲುತ್ತಿರುವವರು, ದುಡ್ಡಿನ ಸಮಸ್ಯೆಯಿಂದ ಕುಟುಂಬಸ್ಥರನ್ನು ಕಳೆದುಕೊಂಡವರು ಹಾಗೂ ಪ್ರತಿನಿತ್ಯ ಬ್ಯಾಂಕ್ ಕಿರಿಕಿರಿ ಅನುಭವಿಸಿತ್ತಿರುವವರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಹೀಗಾಗಿ ರೇರಾ ಕಾಯ್ದೆಯನ್ನು ಬಲಪಡಿಸಿ, ರೇರಾ ಕಚೇರಿಯ ಸಿಬ್ಬಂದಿ ಹೆಚ್ಚು ಮಾಡಿ ಗ್ರಾಹಕರನ್ನು ಮೋಸಗಳಿಂದ ರಕ್ಷಿಸಿ ಎಂದು ಆಗ್ರಹಿಸಿದರು. ಅಲ್ಲದೆ ಮಂತ್ರಿ ಡೆವಲಪರ್ಸ್​ನ್ನ ಬ್ಲಾಕ್ ಲಿಸ್ಟ್​ಗೆ ಸೇರಿಸಿ, ಬಿಲ್ಡರ್​​​ಗಳನ್ನು ಬಂಧಿಸಿ ಎಂದು ಒತ್ತಾಯ ಮಾಡಿದ್ದಾರೆ.

For All Latest Updates

TAGGED:

ABOUT THE AUTHOR

...view details